Advertisement

 ಸ್ವಾತಂತ್ರ್ಯ ಹೋರಾಟದ ಕಿಡಿಹಚ್ಚಿದ ಬೆಳ್ಳಾರೆಯಲ್ಲಿ ಸ್ಮಾರಕ ಭವನ

08:06 PM Aug 14, 2021 | Team Udayavani |

ಅರಂತೋಡು: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಿಡಿ ಹಚ್ಚಿದ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ರೈತ ಹೋರಾಟ ಭವನ ಹಾಗೂ ದಾಖ ಲೆಗಳ ಮ್ಯೂಸಿಯಂ ಸ್ಥಾಪನೆಗೆ ವೇಗ ನೀಡಲಾಗುತ್ತಿದೆ.

Advertisement

ಮಾರ್ಚ್‌ ತಿಂಗಳಿನಲ್ಲಿ ಬಂಗ್ಲೆಗಡ್ಡೆಯಲ್ಲಿ ದ.ಕ. ಜಿಲ್ಲಾಡಳಿತ, ತಾ| ಆಡಳಿತ, ಬೆಳ್ಳಾರೆ ಗ್ರಾ. ಪಂ., ನೆಹರೂ ಯುವ ಕೇಂದ್ರ, ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ  ಸ್ವಾತಂತ್ರೊéàತ್ಸವದ ಅಮೃತ ಮಹೋತ್ಸವಕ್ಕೆ  ಚಾಲನೆ  ನೀಡಲಾಗಿತ್ತು.  ಈ ಸಂದರ್ಭದಲ್ಲಿ ಸಚಿವ ಅಂಗಾರ ಹಾಗೂ ಜಿಲ್ಲಾಧಿಕಾರಿ ಡಾ| ರಾಜೇಂದ್ರ ರೈತ ಹೋರಾಟ ಸ್ಮಾರಕ ಭವನ, ದಾಖಲೆಗಳ ಮ್ಯೂಸಿಯಂ, ಉದ್ಯಾನವನ ನಿರ್ಮಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು, ಮುಂದಿನ ಸ್ವಾತಂತ್ರೊéàತ್ಸವದ ಮೊದಲು ಈ ಕೆಲಸಗಳನ್ನು ಮುಗಿಸಲಾಗುವುದೆಂದು ಭರವಸೆ ನೀಡಿದ್ದರು. ವಾರದ ಹಿಂದೆ ಅಂಗಾರ ಸ್ಥಳಕ್ಕೆ ತೆರಳಿ ಸ್ಥಳೀಯ ಆಡಳಿತದಿಂದ ಮಾಹಿತಿ ಪಡೆದುಕೊಂಡು ಬಂದಿದ್ದು, ಕಾಮಗಾರಿಗೆ ವೇಗ ದೊರೆಯುವ ನಿರೀಕ್ಷೆ ಇದೆ.

ಸುಳ್ಯ ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟ  ನಡೆದಿದೆ ಎಂಬುದು ಇತಿ ಹಾಸದಲ್ಲಿ ದಾಖಲಾಗಿದೆ. ಬ್ರಿಟಿಷ್‌ ಸರಕಾರ ಹೇರಿದ ತೆರಿಗೆ  ಜನರನ್ನು ಕೆರಳಿಸು ವಂತೆ ಮಾಡಿತ್ತು. ಹೀಗಾಗಿ ಕೆರಳಿದ ರೈತ ಹೋರಾಟಗಾರರು ಬೆಳ್ಳಾರೆ ಯ ಬಂಗ್ಲೆಗುಡ್ಡೆಯಲ್ಲಿದ್ದ ಬ್ರಿಟಿಷರ ಖಜಾನೆ ಯನ್ನು 1837 ಮಾ. 30ರಂದು ವಶಕ್ಕೆ ಪಡೆದುಕೊಂಡರು. 1837 ಎ. 5ರಂದು  ಮಂಗಳೂರಿನ ಬಾವುಟ ಗುಡ್ಡೆ ಯಲ್ಲಿ ಸ್ವಾತಂತ್ರ್ಯ ಧ್ವಜ ಹಾರಿಸಿದರು.

ಕೃತಿಗಳಲ್ಲಿ ವಿವರ :

ಸುಳ್ಯ ಆಸುಪಾಸಿನ ರೈತ ಹೋರಾಟದ ಬಗ್ಗೆ ಅನೇಕ ಲೇಖಕರು ಕೃತಿಗಳಲ್ಲಿ ದಾಖ ಲಿದ್ದಾರೆ. ಸುಳ್ಯದ ಲೇಖಕ ಡಾ| ಪ್ರಭಾಕರ ಶಿಶಿಲ ತಮ್ಮ ಕಾದಂಬರಿ “ಮೂಡಣದ ಕೆಂಪು ಕಿರಣ’ದಲ್ಲಿ ಸ್ಥಳೀಯರು ಬ್ರಿಟಿಷ ವಿರುದ್ಧ ಹೋರಾಡಿರುವುದನ್ನು ವಿವರಿ ಸಿದ್ದಾರೆ. ಇದಲ್ಲದೆ ಪುರುಷೋತ್ತಮ ಬಿಳಿ ಮಲೆ, ಸಾಹಿತಿ ನಿರಂಜನ ಕೃತಿಗಳಲ್ಲಿ ರೈತರ ಹೋರಾಟವನ್ನು ದಾಖಲಿಸಿದ್ದಾರೆ.

Advertisement

ಬೆಳ್ಳಾರೆಯಲ್ಲಿದ್ದ ಖಜಾನೆಯನ್ನು ರೈತ ಹೋರಾಟಗಾರರು ವಶಕ್ಕೆ ಪಡೆದುಕೊಂಡು ಹೋರಾಟ ಮುಂದುವರಿಸಿರುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಇದನ್ನು ದಾಖಲಿಸುವ ದೃಷ್ಟಿಯಿಂದ ಬೆಳ್ಳಾರೆಯಲ್ಲಿ ರೈತ ಹೋರಾಟ ಸ್ಮಾರಕ ಭವನ, ದಾಖಲೆಗಳ ಮ್ಯೂಸಿಯಂ,ಪಾರ್ಕ್‌ ನಿರ್ಮಾಣಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು.  -ಎಸ್‌.ಅಂಗಾರ,ಸಚಿವರು

ಸ್ವಾತಂತ್ರ್ಯ ಹೋರಾಟದ ಕಿಡಿ ಹಚ್ಚಿದ ಬೆಳ್ಳಾರೆಯಲ್ಲಿ ರೈತ ಹೋರಾಟ ಸ್ಮಾರಕ ಭವನ ಸೇರಿದಂತೆ ಪೂರಕ ವ್ಯವಸ್ಥೆಗಳು ಉಸ್ತುವಾರಿ ಸಚಿವ ಅಂಗಾರರ ನೇತೃತ್ವದಲ್ಲಿ ಆದಷ್ಟು ಬೇಗ ನಡೆಯಲಿ. ನಮ್ಮ ಹಿರಿಯರ ಹೋರಾಟ ಮುಂದಿನ ಪೀಳಿಗೆಗೆ ತಿಳಿಯಲಿ.  -ಡಾ| ಪ್ರಭಾಕರ ಶಿಶಿಲ, ಲೇಖಕರು

 

-ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next