Advertisement

ವಿಶ್ವ ಜೀವವೈವಿಧ್ಯ ದಿನಾಚರಣೆ

01:34 PM May 23, 2020 | Naveen |

ಬಳ್ಳಾರಿ: ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನದ ಅಂಗವಾಗಿ ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ ಆವರಣದಲ್ಲಿ ವಿವಿಧ ರೀತಿಯ 100 ಗಿಡಗಳನ್ನು ಶುಕ್ರವಾರ ನೆಡಲಾಯಿತು.

Advertisement

ವಿಎಸ್‌ಕೆ ವಿವಿ, ಬಳ್ಳಾರಿ ಸಮೃದ್ಧಿ ಫೌಂಡೇಷನ್‌ ಜಂಟಿ ಸಹಭಾಗಿತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿವಿ ಕುಲಪತಿ ಪ್ರೊ| ಸಿದ್ದು ಪಿ. ಅಲಗೂರು ಅವರು ಗಿಡನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜೀವವೈವಿಧ್ಯ ರಕ್ಷಣೆ ಜೊತೆಗೆ ಕೋವಿಡ್‌ 19ರ ಹರಡುವಿಕೆ ಕುರಿತು ಜಾಗೃತಿ ಸಾರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದವರು ಸಲಹೆ ನೀಡಿದರು.

ಫೌಂಡೇಷನ್‌ನ ಮುಖ್ಯಸ್ಥೆ ಹರಿಣಿ ರಾಯಸಂ ಮಾತನಾಡಿ, ಜಾಗತಿಕ ತಾಪಮಾನ ಏರಿಕೆಯಾದ ಕಾರಣ ಜೀವವೈವಿಧ್ಯಗಳು ನೆಲೆಕಚ್ಚುತ್ತಿವೆ. ಮರ ಬೆಳೆಸುವುದರಿಂದ ತಾಪಮಾನ ನಿಯಂತ್ರಿಸಬಹುದು ಮತ್ತು ಜೀವಸಂಕುಲ ಉಳಿಸಬಹುದು ಎಂದರು. ಜಿಲ್ಲಾ ಅರಣ್ಯ ಅಧಿಕಾರಿ ಕಿರಣ್‌ ಮಾತನಾಡಿ, ಮರಗಳನ್ನು ಬೆಳೆಸುವುದರಿಂದ ಪರಿಸರಕ್ಕೆ ಕೊಡುಗೆ ನೀಡುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು. ಈ ವೇಳೆ ಕುಲಸಚಿವೆ ಪ್ರೊ| ಬಿ ಕೆ ತುಳಸಿಮಾಲ, ಹಣಕಾಸು ಅಧಿಕಾರಿ ಡಾ| ಕೆ.ಸಿ.ಪ್ರಶಾಂತ್‌, ಮುಖ್ಯ ಇಂಜಿನಿಯರ್‌ ಮುರಳೀಧರ್‌, ಸಮೃದ್ಧಿ ಸಂಸ್ಥೆಯ ಪ್ರಹ್ಲಾದ್‌ ರೆಡ್ಡಿ, ರಾಜೇಂದ್ರ ಹಾಗೂ ಅರಣ್ಯ ಇಲಾಖೆ ವಿವಿಧ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next