ಬಳ್ಳಾರಿ: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ವರ್ಷ 47 ನರ್ಸರಿ ಶಾಲೆ ಆರಂಭಿಸಲಾಗಿತ್ತು. ಈ ವರ್ಷ 1008 ಶಾಲೆಗಳಲ್ಲಿ ನರ್ಸರಿ ಉದ್ದೇಶಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ ಸಿಂಗ್ ಹೇಳಿದರು.
ಸಂಡೂರು ತಾಲೂಕಿನ ಜಿಂದಾಲ್ ನ ವಿದ್ಯಾನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ತೆರಯಲಾಗಿದೆ. ಅದರಂತೆ, 872 ಬೈ ಲಿಂಗ್ ವೆಲ್ ಹಾಗೂ 306 ಎನ್ಎಸ್ ಕ್ಯೂಎಸ್ ಶಾಲೆಗಳು ಆರಂಭಿಸಲು ನಿರ್ಧರಿಸಲಾಗಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಶೈಕ್ಷಣಿಕವಾಗಿ ಹಿಂದುಳಿದಿವೆ. ಆದ್ದರಿಂದ, ಅಕ್ಷರ ಆವಿಷ್ಕಾರ ಯೋಜನೆ ಮೂಲಕ ಪ್ರಗತಿ ಸಾಧಿಸಲಾಗುವುದು. ಕ.ಕ. ಭಾಗದ ಶೇ. 76% ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಕೆಲ ವರ್ಷಗಳಲ್ಲಿಯೇ ಸರಿಪಡಿಸಲಾಗುವುದು ಎಂದರು.
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನಿಭಾಯಿಸಲು ಅತಿಥಿ ಶಿಕ್ಷಕರ ವೇತನಕ್ಕಾಗಿ 18.34 ಕೋಟಿ ರೂ. ಮೀಸಲು ಇಡಲಾಗುವುದು. ಬಿಹಾರ್, ಜಾರ್ಖಂಡ್ ಹಾಗೂ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಶಿಕ್ಷಕರ ಕೊರತೆಯಿದೆ. ಆದರೆ, ಕರ್ನಾಟಕದಲ್ಲಿ 0.43% ಶಿಕ್ಷಕರ ಕೊರತೆಯಿದೆ. ರಾಜ್ಯದ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ 19, 834 ಶಿಕ್ಷಕರ ಬೇಡಿಕೆಯಿದ್ದು, ಮುಂದಿನ ದಿನಗಳಲ್ಲಿ 6,584 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದರು.