ಬಳ್ಳಾರಿ: ಕಳೆದ ಹಲವು ವರ್ಷಗಳಿಂದ ಜನರ ಆರೋಗ್ಯ ಕಾಪಾಡುತ್ತ ವೈದ್ಯಕೀಯ ಶಿಕ್ಷಣ ನೀಡುತ್ತ ಬಂದಿರುವ ತಾರಾನಾಥ ವೈದ್ಯಕೀಯ ಕಾಲೇಜು- ಆಸ್ಪತ್ರೆಯ ಕಟ್ಟಡ ಉನ್ನತೀಕರಣ ಹಾಗೂ ಬೋಧನಾ ಔಷಧ ಘಟಕದ ಕಟ್ಟಡ ನಿರ್ಮಾಣ ಆಗಲಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
Advertisement
ನಗರದ ಅನಂತಪುರ ರಸ್ತೆಯಲ್ಲಿನ ತಾರಾನಾಥ ಆಯುರ್ವೇದ ಕಾಲೇಜು- ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಭೂಮಿಪೂಜೆ- ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಕ್ಷೇಪಣೆಗಳಿಂದಾಗಿ ಬಿಡುಗಡೆ ವಿಳಂಬ ಆಗಿತ್ತು. ಆದರೆ, ನಾನು ಕೆಎಂಇಆರ್‌ಸಿಯ ಉಸ್ತುವಾರಿ ಹೊತ್ತಿರುವ ನ್ಯಾ|ಸುದರ್ಶನ
ರೆಡ್ಡಿಯವರಿಗೆ ವಸ್ತು ಸ್ಥಿತಿಯನ್ನು ತಿಳಿಸಿದ ಪರಿಣಾಮ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು. 1200 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿ; ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯ ಇದ್ದರೂ ಕೂಡ ಬಳ್ಳಾರಿ ನಗರಕ್ಕೆ ನಿರಂತರ ಕುಡಿಯುವ ನೀರಿನ ಸೌಲಭ್ಯ ಯೋಜನೆ ಮರೀಚಿಕೆಯಾಗಿದೆ. ಹೀಗಾಗಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ 1200 ಕೋಟಿ ರೂ.ಗಳ ವೆಚ್ಚದಲ್ಲಿ ಜಲಾಶಯದಿಂದ ನೇರವಾಗಿ ಕುಡಿಯುವ ನೀರಿನ ಪೈಪ್ ಲೈನ್
ಅಳವಡಿಸುವ ಯೋಜನೆ ರೂಪಿಸಲಾಗಿದೆ.
Related Articles
Advertisement
ಬಳ್ಳಾರಿಯ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ,ತಾರಾನಾಥ ಆಯುರ್ವೇದ ವೈದ್ಯ ಕಾಲೇಜಿನ ಪ್ರಾಚಾರ್ಯೆ ಡಾ|ಸಯ್ಯದಾ ಅತರ್ ಫಾತೀಮಾ, ಪಾಲಿಕೆಯ ಸದಸ್ಯ ತೆರಿಗೆ ಸ್ಥಾಯಿ
ಸಮಿತಿಯ ಅಧ್ಯಕ್ಷ ನೂರ್ ಅಹ್ಮದ್, ಸದಸ್ಯರಾದ ಕವಿತಾ ಹೊನ್ನಪ್ಪ, ರಾಮಾಂಜ ನೇಯ, ಕಾಂಗ್ರೆಸ್ ಮುಖಂಡರಾದ ಬಿಆರ್
ಎಲ್ ಸೀನಾ, ಹೊನ್ನಪ್ಪ, ಹೊಂಡ್ರಿ ಸೇರಿ ಹಲವರು ಇದ್ದರು.