Advertisement
ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಆವರಣದಲ್ಲಿ ಕೇಂದ್ರೀಯ ಗ್ರಂಥಾಲಯ, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಬಹುಚಟುವಟಿಕಾ ಕೇಂದ್ರಗಳ ಉದ್ಘಾಟನೆ, ಡಾ| ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಮ್ ಪುತ್ಥಳಿಗಳನ್ನು ಅನಾವರಣಗೊಳಿಸಿ ಮಾತನಾಡಿದರು. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ 3-6 ವರ್ಷದ ಅವ ಧಿಯಲ್ಲಿ ಹೆಚ್ಚಿನ ಕಲಿಕಾ ಸಾಮರ್ಥ್ಯ ಅಡಗಿರುತ್ತದೆ. ನಮ್ಮಲ್ಲಿ 6ನೇ ವರ್ಷದಿಂದ 1ನೇ ತರಗತಿಗೆ ಸೇರಿಸುವ ಪದ್ಧತಿಯಿದೆ. ಪರಿಣಾಮ ಶೇ. 30ರಷ್ಟು ಜನರು ಮಾತ್ರ ಗಣಿತ, ಇಂಗ್ಲಿಷ್ ಸೇರಿ ಉನ್ನತ ಮಟ್ಟದ ಶಿಕ್ಷಣ ಪಡೆದವರಿದ್ದಾರೆ. ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಿದೆ. ಈ ನಿಟ್ಟಿನಲ್ಲಿ ಇಲ್ಲಿನ ಶಾಸಕರು, ಸಂಸದರು, ಜಿಲ್ಲಾ ಧಿಕಾರಿಗಳು ನಿರ್ಣಯ ಕೈಗೊಂಡಿದ್ದು, ಎಲ್ಲ ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದವರು ತಿಳಿಸಿದರು.
Related Articles
Advertisement
ಕಳೆದ 2019-20ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಲ, ಕೌಶಲ್ಯಾಭಿವೃದ್ಧಿ ತರಬೇತಿಗೆ 5500 ಕೋಟಿ ರೂ. ಮೀಸಲಿಡಲಾಗಿತ್ತು. ಇದೀಗ 7ನೇ ವೇತನ ಅನುಷ್ಠಾನಗೊಂಡಿದ್ದರಿಂದ ಇದೀಗ 7500 ಕೋಟಿ ರೂಗಳನ್ನು ಮೀಸಲಿಡಬೇಕಾಗಿದೆ. ಇದರಲ್ಲಿ 6500 ಕೋಟಿ ರೂ. ಕೇವಲ ವೇತನ, ಶೈಕ್ಷಣಿಕ ಸಾಲ, ಕೌಶಲ್ಯಾಭಿವೃದ್ಧಿ ತರಬೇತಿಗೆ ಹೋಗುತ್ತದೆ. ಹೊಸ ನೇಮಕಾತಿಗಳು ನಡೆದಲ್ಲಿ 7500 ಕೋಟಿ ರೂ. ಇದಕ್ಕೆ ಖರ್ಚಾದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಪದವಿ ಕಾಲೇಜುಗಳಲ್ಲಿ 1750 ಉಪನ್ಯಾಸಕರ ನೇಮಕಾತಿಗೆ ಕ್ರಮಕೈಗೊಳ್ಳಲಾಗಿದೆ. ಜತೆಗೆ ವರ್ಗಾವಣೆ ಪಾಲಿಸಿಯನ್ನೂ ತರಲಾಗುತ್ತಿದ್ದು, ರಾಜ್ಯದ ಯಾವುದೇ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಾಗದಂತೆ ಸಮಾನವಾಗಿ ಹಂಚಿಕೆಯಾಗುವ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಶಾಸಕ ಜಿ. ಸೋಮಶೇಖರರೆಡ್ಡಿ ಮಾತನಾಡಿ, 2008ರಲ್ಲಿ ಶಾಸಕನಾಗಿದ್ದಾಗ ಸ್ನೇಹಿತ ಅಬ್ದುಲ್ಲಾರೊಂದಿಗೆ ಅಂದಿನ ಹಾಗೂ ಹಾಲಿ ಸಿಎಂ ಯಡಿಯೂರಪ್ಪರ ಬಳಿ ಪ್ರಸ್ತಾಪಿಸಿದಾಗ ಕೇವಲ ನಾಲ್ಕು ದಿನಗಳಲ್ಲಿ ವಿಶ್ವವಿದ್ಯಾಲಯವನ್ನು ಮಂಜೂರು ಮಾಡಿದರು. ಮಾಜಿ ಸಚಿವ ಜನಾರ್ದನರೆಡ್ಡಿ ಇದ್ದಾಗ ಪವರ್ ಹಂಗಿತ್ತು. ಹಾಗಾಗಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ, ಜಿಲ್ಲಾ ಖನಿಜ ನಿಧಿಯಿಂದ ನನಗೆ ಬರುವ ಅನುದಾನವನ್ನು ವಿವಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕುಲಪತಿ ಪ್ರೊ| ಸಿದ್ದು ಪಿ.ಅಲಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವೆ ಪ್ರೊ| ಬಿ.ಕೆ. ತುಳಸಿಮಾಲಾ ಸ್ವಾಗತಿಸಿದರು. ಸಂಸದ ದೇವೇಂದ್ರಪ್ಪ, ಕುಲಸಚಿವ ರಮೇಶ್ ಓಲೇಕಾರ್, ಐಎಎಸ್ ಅಧಿಕಾರಿ ಪ್ರದೀಪ್ ಸೇರಿದಂತೆ ವಿವಿ ಸಿಂಡಿಕೇಟ್ ಸದಸ್ಯರು ಇದ್ದರು.