Advertisement

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಪ್ರಭಂಜನ್‌ ಕುಮಾರ್‌

05:52 PM Nov 16, 2019 | Naveen |

ಬಳ್ಳಾರಿ: ನಗರ ಹೊರವಲಯದಲ್ಲಿನ ರೂಟ್ಸ್‌ ಪಬ್ಲಿಕ್‌ ಶಾಲೆಯಲ್ಲಿ “ಬ್ರೈನ್‌ ರೇನ್‌’ ಕಾರ್ಯಕ್ರಮ ಆಯೋಜಿಸಲಾಗಿದ್ದು ಶಾಲೆಯ ವಿದ್ಯಾರ್ಥಿಗಳು ವಿವಿಧ ರೀತಿಯ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು.

Advertisement

ಶಾಲೆಯ ಎಲ್‌ಕೆಜಿ, ಯುಕೆಜಿ, 1ನೇ ತರಗತಿಯಿಂದ ಹಿಡಿದು 9ನೇ ತರಗತಿವರೆಗಿನ ವಿದ್ಯಾರ್ಥಿಗಳು ತಮ್ಮದೇ ಆದ ಮಾದರಿಗಳನ್ನು ಸಿದ್ಧಪಡಿಸಿದ್ದರು. ನೀರಲ್ಲಿ ಹಡಗು ಹೇಗೆ ಚಲಿಸುತ್ತದೆ, ಸೋಲಾರ್‌ನಿಂದ ವಿದ್ಯುತ್‌ ಉತ್ಪಾದನೆ, ನೀರಿನಿಂದ ವಿದ್ಯುತ್‌ ಉತ್ಪಾದನೆ, ಗಗನಯಾತ್ರಿ ಕಲ್ಪನಾ ಚಾವ್ಲಾ ಸೇರಿದಂತೆ ಇನ್ನಿತರೆ ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಪರಿಸರ, ಸೌರಮಂಡಲದಲ್ಲಿನ ಗ್ರಹಗಳ ಮಾದರಿ, ನಗರೀಕರಣ, ಗಣಿತ ಇನ್ನಿತರೆ ವಿಷಯಗಳ ಕುರಿತು ವಿದ್ಯಾರ್ಥಿಗಳು ತಮ್ಮದೇ ಆದ ಪರಿಕಲ್ಪನೆಯಡಿ ಮಾದರಿಯಡಿ ಸಿದ್ಧಪಡಿಸಿ ಪ್ರದರ್ಶಿಸಿದರು.

ಜತೆಗೆ ಅವುಗಳನ್ನು ವೀಕ್ಷಿಸುವವರಿಗೆ ಮಾದರಿಗಳ ಬಗ್ಗೆ ವಿದ್ಯಾರ್ಥಿಗಳು ವಿವರಿಸುತ್ತಿದ್ದ ರೀತಿ ಗಮನ ಸೆಳೆಯಿತು. ಪೊಲೀಸ್‌, ವೈದ್ಯ, ಶಿಕ್ಷಕರಂತೆ ಉಡುಪುಗಳನ್ನು ಧರಿಸಿದ್ದ ವಿದ್ಯಾರ್ಥಿಗಳು, ಸಮಾಜದಲ್ಲಿನ ಪೊಲೀಸರು, ವೈದ್ಯರು, ಶಿಕ್ಷಕರ ಪಾತ್ರ, ಅವರ ಕರ್ತವ್ಯಗಳ ಬಗ್ಗೆ ವಿವರಿಸಿದರು.

ಶಾಲೆ ಹೊರಗಡೆ ಮಳೆನೀರು ಕೊಯ್ಲು ಬಳಸಿ ಅಂತರ್ಜಲ ಹೆಚ್ಚಳದಿಂದ ರೈತರಿಗಾಗುವ ಅನುಕೂಲಗಳ ಬಗ್ಗೆ ಹಾಗೂ ಕೈಗಾರಿಕೆಗಳ ಬಗ್ಗೆ ಪರಿಸರ ಮೇಲಾಗುತ್ತಿರುವ ದುಷ್ಪರಿಣಾಮ, ಹೆಚ್ಚುತ್ತಿರುವ ತಾಪಮಾನ, ಮಳೆ ಕೊರತೆ ಇನ್ನಿತರೆ ವಿಷಯಗಳ ಕುರಿತು ವಿದ್ಯಾರ್ಥಿಗಳು ಮಾದರಿಗಳನ್ನು ಪ್ರದರ್ಶಿಸಿ ವಿವರಿಸಿದರು.

ಶಾಲೆ ಪ್ರಾಚಾರ್ಯ ಎಂ. ಪ್ರಭಂಜನ್‌ ಕುಮಾರ್‌, ಶಾಲೆಯಲ್ಲಿ ಮೊದಲ ಬಾರಿಗೆ ಬ್ರೈನ್‌ ರೈನ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬ್ರೈನ್‌ರೈನ್‌ ಎಂದರೆ ಮಕ್ಕಳಲ್ಲಿನ ಬುದ್ಧಿಯನ್ನು ಹೊರಸೂಸುವುದು. ಈ ನಿಟ್ಟಿನಲ್ಲಿ ಮಕ್ಕಳಲ್ಲಿನ ಪ್ರತಿಭೆಯನ್ನು ಶಿಕ್ಷಕರು ಹೊರ ತರುವಲ್ಲಿ ಹೆಚ್ಚಿನ ಶ್ರಮ ವಹಿಸಬೇಕು ಎಂದರು.

Advertisement

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ತನ್ನದೇ ಆದ ಪ್ರತಿಭೆ ಅಡಗಿರುತ್ತದೆ. ಅದನ್ನು ಶಿಕ್ಷರು ಹಾಗೂ ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಿದಾಗ ಅದು ಹೊರಬರುತ್ತದೆ. ಪಾಠದ ಜತೆಗೆ ತಮ್ಮ ಪ್ರತಿಭೆಯನ್ನು ಗುರುತಿಸಲು ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಬೇಕು ಎಂದರು.

ಶಾಲೆಯಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಮಾದರಿಗಳನ್ನು ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ವೀಕ್ಷಿಸಿ ಶ್ಲಾಘಿಸಿದರು. ಬಳಿಕ ಮಾತನಾಡಿದ ಅವರು, ಶಾಲೆಗಳಲ್ಲಿ ಕೇವಲ ಪಾಠಕ್ಕೆ ಮಾತ್ರ ಸೀಮಿವಾಗದೇ, ಮಕ್ಕಳ ನಾನಾ ಕಲೆಗಳನ್ನು ಹೊರ ಹಾಕುವಂತ ಕೆಲಸವಾಗಬೇಕು. ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಂಬಂಧ ತಾಯಿ ಮಗುವಿನ ಸಂಬಂಧ ಇರಬೇಕು. ಮಕ್ಕಳಲ್ಲಿ ತಾರತಮ್ಯ ತೋರಿಸದೆ ಸಮಾನತೆಯಿಂದ ನೋಡಿಕೊಳ್ಳಬೇಕು ಎಂದರು.

ಅನುದಾನ ರಹಿತ ಶಾಲೆಗಳ ಸಂಘದ ಅಧ್ಯಕ್ಷ ಮರಿಸ್ವಾಮಿರೆಡ್ಡಿ, ಕಾರ್ಯದರ್ಶಿ ಬಸಿರೆಡ್ಡಿ, ರಮ್‌ಜಾನ್‌, ನಿರುಪಮಾ, ಶಾಲೆಯ ಸಂಸ್ಥಾಪಕಿ ಸುಜಾತಾ, ಎಂ.ನಾರಾಯಣರಾವ್‌, ಎಂ. ಜಯಸಿಂಹ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next