Advertisement

ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

05:16 PM Jun 11, 2020 | Naveen |

ಬಳ್ಳಾರಿ: ಜಿಂದಾಲ್‌ನಲ್ಲಿ ಕೋವಿಡ್ ಸೋಂಕು ಪಸರಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಕೋವಿಡ್ ಕುರಿತು ಭಯಪಡದಂತೆ ಅಗತ್ಯ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕಾರ್ಖಾನೆಯಲ್ಲಿ ಕೋವಿಡ್ ಕುರಿತ ಅಪ್ಡೇಟ್‌ಗಳನ್ನು ತಮ್ಮ ಸಿಬ್ಬಂದಿಗೆ ಎಸ್‌ಎಂಎಸ್‌ ಮತ್ತು ಟ್ವೀಟರ್‌ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ತಮ್ಮ ಕಚೇರಿಯಿಂದ ಜೂಮ್‌ ಆಪ್‌ ಮೂಲಕ ವಿಡಿಯೋ ಕಾನ್ಪರೆನ್ಸ್‌ ನಡೆಸಿ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದ ಡಿಸಿ ನಕುಲ್‌, ತಮ್ಮಲ್ಲಿ 30 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಪ್ರತಿನಿತ್ಯ ಕೋವಿಡ್ ಕುರಿತ ಅಪ್ಡೇಟ್‌ ಮಾಹಿತಿ ಒದಗಿಸಬೇಕು. ಕಂಟ್ರೋಲ್‌ ರೂಂ ಸ್ಥಾಪಿಸಿ ಕೋವಿಡ್ ಸಂಬಂಧಿತ ಸಂದೇಹ ಹಾಗೂ ಗೊಂದಲ ನಿವಾರಿಸಬೇಕು ಎಂದು ಸೂಚಿಸಿದರು. ಜ್ವರ, ಕೆಮ್ಮು, ಶೀತದಂತ ಲಕ್ಷಣಗಳು ಕಂಡುಬಂದಲ್ಲಿ ಹಾಗೂ ಉಸಿರಾಟದ ಸಮಸ್ಯೆ ಇರುವವರು ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಿ ವಿಮ್ಸ್‌ ಲ್ಯಾಬ್‌ಗ ಕಳುಹಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶಿಸಿದರು. ಜಿಂದಾಲ್‌ನಲ್ಲಿರುವ ಐಇಸಿ ಚಟುವಟಿಕೆಗಳನ್ನು ಬಲಪಡಿಸಬೇಕು. ಸಾಮಾಜಿಕ ಜಾಲತಾಣಗಳಾದ ಟ್ವೀಟರ್‌, ಫೇಸ್‌ಬುಕ್‌ ಇನ್ನಿತರೆ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡಿ ಎಂದು ಹೇಳಿದರು.

ಸೋಂಕಿತರ ಸಂಪರ್ಕಿತರಿಗೆ ಐಸೋಲೇಶನ್‌: ಜಿಂದಾಲ್‌ ಕಾರ್ಖಾನೆಯಲ್ಲಿರುವ ಸಿಎಂಡಿ ಮತ್ತು ಕೋರೆಕ್ಸ್‌ ವಿಭಾಗಗಳಲ್ಲಿ ಕೋವಿಡ್ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಅವರನ್ನು ಈಗಾಗಲೇ ಪ್ರತ್ಯೇಕಗೊಳಿಸಿ ಐಸೋಲೇಶನ್‌ ವಾರ್ಡ್‌ ನಲ್ಲಿಡಲಾಗಿದೆ. ಇವರೆಲ್ಲರೂ ಒಂದೇ ಆಫೀಸ್‌ ಜಾಗವನ್ನು ಹಂಚಿಕೊಳ್ಳುತ್ತಿದ್ದರು ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸಿಎಂಡಿಯಲ್ಲಿ ಶೇ.95ರಷ್ಟು ಜನರನ್ನು ಅಂದರೆ 87 ಜನರಲ್ಲಿ 83 ಜನರನ್ನು ಪ್ರತ್ಯೇಕಿಸಲಾಗಿದೆ.

ಪ್ರಸ್ತುತ ನಾಲ್ಕು ಜನರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಂದಾಲ್‌ ಸಂಸ್ಥೆಯವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚುವರಿಯಾಗಿ ಇಆರ್‌ಎಸ್‌ ಮತ್ತು ಎಆರ್‌ಎಸ್‌ನಲ್ಲಿ ಶೇ.50 ಸಿಬ್ಬಂದಿ ಕಡಿತ ಮಾಡಲಾಗಿದೆ. ಇಆರ್‌ಎಸ್‌ನಲ್ಲಿ 75ರಲ್ಲಿ 36 ಮತ್ತು ಎಆರ್‌ಎಸ್‌ನಲ್ಲಿ 182ರಲ್ಲಿ 90 ಜನರು ಮಾತ್ರ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಕೊರೆಕ್ಸ್‌ನಲ್ಲಿ 228 ಜನರಲ್ಲಿ 75 ಜನರನ್ನು ಐಸೋಲೇಶನ್‌ ಮಾಡಲಾಗಿದೆ. ಇನ್ನೂ 50 ಜನರಿದ್ದು, ಬುಧವಾರ ಮಧ್ಯಾಹ್ನದಿಂದಲೇ ಅವರಿಗೆ ಕಾರ್ಖಾನೆಗೆ ಬರದಂತೆ ನಿರ್ಬಂಧಿ ಸಲಾಗಿದೆ. ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗಾಗಿ 130 ಹೆಚ್ಚುವರಿ ಐಸೋಲೇಶನ್‌ಗೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ ಪಸರಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಂದಾಲ್‌
ಗೆ ನಿರ್ದೇಶಿಸಲಾಗಿದ್ದು, ಅವರು ಅಗತ್ಯ ಕ್ರಮಕೈಗೊಳ್ಳುತ್ತಿದ್ದಾರೆ ಎಂದಿದ್ದಾರೆ.

ಜಿಂದಾಲ್‌ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸುರಕ್ಷತೆ ಜತೆಗೆ ಕಾರ್ಖಾನೆಯ ಸುತ್ತಲಿನ ಪ್ರದೇಶಗಳಲ್ಲಿಯೂ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಜಿಂದಾಲ್‌ ತನ್ನ ಪ್ರಯತ್ನ ಮುಂದುವರಿಸಲಿದೆ ಎಂದು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಜಿಂದಾಲ್‌ನವರು ವಿವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next