Advertisement

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಅಣಕು ಪ್ರದರ್ಶನ

12:42 PM Jun 14, 2020 | Naveen |

ಬಳ್ಳಾರಿ: ನಗರದ ಬಸವೇಶ್ವರ ನಗರದಲ್ಲಿನ ವುಂಕಿ ಮರಿಸಿದ್ದಮ್ಮ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಅಣಕು ಪ್ರದರ್ಶನ ಶನಿವಾರ ನಡೆಯಿತು.

Advertisement

ಕಳೆದ ಮಾರ್ಚ್‌ ತಿಂಗಳಲ್ಲೇ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳನ್ನು ಕೋವಿಡ್ ಸೋಂಕು ಆವರಿಸಿದ ಕಾರಣ ಪರೀಕ್ಷೆಯನ್ನು ರಾಜ್ಯ ಸರ್ಕಾರ ಮುಂದೂಡಿತ್ತು. ಇದೀಗ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ದಿನಾಂಕ ನಿಗದಿಪಡಿಸಿದ್ದು, ಜೂ.25ರಿಂದ ಜು.4ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಹೊಸ ರೀತಿ ನೀತಿಗಳ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಿಕ್ಷಣ ಇಲಾಖೆ ಪ್ರಾಯೋಗಿಕವಾಗಿ ಅಣಕು ಪರೀಕ್ಷೆ ಆಯೋಜಿಸಿದೆ ಎಂದು ಪರೀಕ್ಷೆಯ ಮೇಲ್ವಿಚಾರಕ ಜೆ.ಎಸ್‌.ಮನೋಹರ್‌ ತಿಳಿಸಿದ್ದಾರೆ.

ಅಣಕು ಪರೀಕ್ಷೆಯಲ್ಲಿ ಒಟ್ಟು 20 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೇಂದ್ರದ ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಈ ಅಣಕು ಪರೀಕ್ಷೆ ನಡೆಯಿತು. ವಿದ್ಯಾರ್ಥಿಗಳ ಜ್ವರ ತಪಾಸಣೆ, ಮಾಸ್ಕ್ ವಿತರಣೆ, ಕೈಗಳಿಗೆ ಸ್ಯಾನಿಟೈಸರ್‌ ಸಿಂಪಡಣೆ ಮಾಡಿ ಕೊಠಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಕೊಠಡಿ ಮೇಲ್ವಿಚಾರಕರು ಮಾಸ್ಕ್ ಮತ್ತು ಗ್ಲೌಸ್‌ ಧರಿಸಿಯೇ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ವಿತರಿಸಿದರು.

ಅರ್ಧ ಗಂಟೆ ಕಾಲ ಪರೀಕ್ಷೆ ನಡೆಯಿತು. ಅಣಕು ಪರೀಕ್ಷೆ ಪ್ರಕ್ರಿಯೆ ಚಿತ್ರೀಕರಿಸಿದ್ದು, ಕೋವಿಡ್ ನಿಯಂತ್ರಣ ಕ್ರಮ ಕೈಗೊಳ್ಳುತ್ತಲೇ ಪರೀಕ್ಷೆ ಎದುರಿಸುವ ಬಗೆಯ ಕುರಿತು ಅಣಕು ಪರೀಕ್ಷೆಯ ವೀಡಿಯೋ ಜನರಲ್ಲಿ ಜಾಗೃತಿ ಮೂಡಿಸಲಿದೆಂದು ಅಣಕು ಪರೀಕ್ಷೆ ಮೇಲ್ವಿಚಾರಕರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next