ಬಳ್ಳಾರಿ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು, ಇದನ್ನು ವಾಟರ್‌ಶೆಡ್ ಮೂಲಕ ಹೆಚ್ಚಿಸಲು 4.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಡಿಸಿಎಂ, ಕೃಷಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ 700 ಕೋಟಿ ರೂಗೂ ಹೆಚ್ಚು ವಿಶೇಷ ಅನುದಾನವನ್ನು ರಾಜ್ಯಕ್ಕೆ ನೀಡಿದೆ. ಇದರಲ್ಲಿ ಬಹುಪಾಲು ಹಣವನ್ನು ಬರಗಾಲ ಪ್ರದೇಶಕ್ಕೆ ಬಳಸಬೇಕಾಗಿದ್ದು, ಕೃಷಿ ಇಲಾಖೆ ಸಚಿವನಾಗಿ ಹೆಚ್ಚು ಅನುದಾನವನ್ನು ಜಿಲ್ಲೆಗೆ ನೀಡಲು ಆಸಕ್ತಿ ವಹಿಸಿದ್ದೇನೆ. ಜತೆಗೆ ಮುಂದಿನ ರಾಜ್ಯ ಬಜೆಟ್‌ನಲ್ಲಿ ಕೃಷಿಗೆ ಮತ್ತು ಜಿಲ್ಲೆಗೆ ಹೆಚ್ಚು ಅನುದಾನವನ್ನು ನೀಡಲು ಹಿತಾಸಕ್ತಿ ಹೊಂದಿದ್ದೇನೆ ಎಂದರು.
ವಿಜಯನಗರ ಜಿಲ್ಲೆಗೆ ಮತ್ತೊಂದು ಸಭೆ ಗಣಿನಾಡು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಯಡಿಯೂರಪ್ಪನವರು ಜಿಲ್ಲೆಯ ಜನಪ್ರತಿನಿ ಗಳೊಂದಿಗೆ ಸಭೆ ನಡೆಸಿದ್ದರು. ಇದರಲ್ಲಿ ವಿಜಯನಗರ ಜಿಲ್ಲೆ ರಚನೆಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾದವು. ಶೀಘ್ರದಲ್ಲೇ ಮತ್ತೂಂದು ಸಭೆ ನಡೆಸಿ, ಜಿಲ್ಲೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಚರ್ಚಿಸಲಾಗುವುದು. ಆ ಸಭೆಯಲ್ಲಿ ಬರುವ ಅಭಿಪ್ರಾಯಗಳನ್ನು ಆಧರಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆಂಧ್ರದ ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸದಂತೆ ಆಂಧ್ರ ಸರ್ಕಾರದೊಂದಿಗೆ ಮಾತನಾಡುವಂತೆ ಶಿಕ್ಷಣ ಸಚಿವ ಸುರೇಶ ಕುಮಾರ ಅವರ ಬಳಿ ಖುದ್ದಾಗಿ ಮನವಿ ಮಾಡಿಕೊಳ್ಳುವೆ ಎಂದರು.
ರೆಡ್ಡಿ ಮಾತು ಸಮರ್ಥಿಸಿದ ಸವದಿ ಇದೇ ವೇಳೆ ಕೊಪ್ಪಳದ ಪತ್ರಕರ್ತ ಸಿರಾಜ್ ಬಿಸರಳ್ಳಿ ಕವಿತೆ ವಾಚನಕ್ಕೆ ಸಂಬಂಧಿ ಸಿದಂತೆ ಮಾತನಾಡಿ, ನಮಗೆ ವಾಕ್ ಸ್ವಾತಂತ್ಯ್ರವಿದೆ ಎಂದು ಏನು ಬೇಕಾದರೂ ಮಾತನಾಡಬಾರದು. ಕಾನೂನು ತನ್ನ ಕೆಲಸ ಮಾಡುತ್ತಿದೆ ಎಂದರು. ಶಾಸಕ ಜಿ.
ಸೋಮಶೇಖರರೆಡ್ಡಿ ಮಾತನಾಡಿದಾಗ ಪ್ರಕರಣ ದಾಖಲಾಗಲಿಲ್ವಾ ಎಂಬ ಪ್ರಶ್ನೆಗೆ, ಮಂಗಳೂರಿನಲ್ಲಿ ಆದಂಥ ಹಿಂಸಾಚಾರ ಖಂಡಿಸಿ ಸೋಮಶೇಖರ ರೆಡ್ಡಿಯವರು ಮಾತನಾಡಿದ್ದಾರೆ ಹೊರತು ಬೇರಾವ ಉದ್ದೇಶವಿಲ್ಲ. ನಾವು ರೆಡ್ಡಿ ವಿಚಾರವನ್ನು ಸಮರ್ಥಿಸಿಕೊಳ್ಳುತ್ತೇವೆ. ಕಾನೂನು ತನ್ನ ಕೆಲಸವನ್ನು ಮಾಡುತ್ತದೆ ಎಂದರು. ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಸಂಸದ ವೈ. ದೇವೇಂದ್ರಪ್ಪ, ಡಿಸಿ ಎಸ್. ಎಸ್. ನಕುಲ್, ಸಿಇಒ ಕೆ.ನಿತೀಶ್, ಎಸ್‌ಪಿ ಸಿ.ಕೆ.ಬಾಬಾ ಸೇರಿದಂತೆ ಹಲವರು ಇದ್ದರು.