Advertisement
ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಭಾನುವಾರ ಸಂಜೆ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು. ಸಾರೇ ಜಹಾಸೆ ಅಚ್ಛಾ ಹಿಂದೂ ಸಿತಾ ಹಮಾರ ಎಂದು ಹೇಳಿದ್ದು ಹಿಂದು ಕವಿಗಳಲ್ಲ. ಮುಸ್ಲಿಂ ಕವಿಗಳು. ಹಿಂದೂಸ್ತಾನದ ಮೇಲೆ ಮುಸ್ಲಿಂ, ಕ್ರೈಸ್ತ ರಾಜರು, ವಿದೇಶಿಗರು ಆಕ್ರಮಣ ಮಾಡಿದಾಗ ಅವರಿಂದ ಹಿಂದೂ ಧರ್ಮವನ್ನು ಕಾಪಾಡಿದ ಕೊಡುಗೆ ಛತ್ರಪತಿ ಶಿವಾಜಿಗೆ ಸಲ್ಲುತ್ತದೆ. ಈ ಎಲ್ಲರೂ ದೇಶಕ್ಕೆ ಬಂದಿದ್ದು, ಆಡಳಿತ ಮಾಡಲು ಅಲ್ಲ. ದೇಶವನ್ನು ಲೂಟಿ ಮಾಡಲು. ಆದರೆ, ಹಿಂದೂಗಳ ದೌರ್ಬಲ್ಯದಿಂದ ದೇಶವನ್ನು ಆಡಳಿತ ನಡೆಸಿದರು ಹೊರತು, ಅವರ ಪ್ರಭಾವದಿಂದ ಮಾತ್ರ ಅಲ್ಲ ಎಂದವರು ತಿಳಿಸಿದರು.
Related Articles
Advertisement
ನಿರುದ್ಯೋಗಿಗಳು ಕೆಲಸ ಮಾಡುವುದೇ ಬೇಡ. ಸ್ಲಂಗಳಲ್ಲಿ ಬೋಧನೆ ಮಾಡಿ ಮತಾಂತರ ಮಾಡಲು ಹೊರಟಿದ್ದಾರೆ. ಈಶಾನ್ಯ ರಾಷ್ಟ್ರಗಳಲ್ಲಿ ಭಾರತದ ಧ್ವಜ ಹಾರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದವರು ತಿಳಿಸಿದರು.
ಮಾತೃಶಕ್ತಿ ರಕ್ಷಣೆ ಪ್ರಮುಖ ಶಿವಾನಂದ ಮಾತನಾಡಿದರು. ಇದಕ್ಕೂ ಮುನ್ನ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ಇಲ್ಲಿನ ಕಮ್ಮ ಭವನದಿಂದ ಆರಂಭವಾದ ಶೋಭಾಯಾತ್ರೆಯು ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ಮೋತಿವೃತ್ತ, ರಾಮೇಶ್ವರ ಹೊಟೇಲ್, ಕಾಳಮ್ಮ ರಸ್ತೆ, ವಡ್ಡರಬಂಡೆ, ರೂಪನಗುಡಿ ರಸ್ತೆ, ರಾಘವೇಂದ್ರ ಚಿತ್ರಮಂದಿರ, ಸಂಗಮ್ ವೃತ್ತ ಮೂಲಕ ಮುನಿಸಿಪಲ್ ಮೈದಾನ ತಲುಪಿತು.
ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ವಿವಿಧ ಕಲಾ ತಂಡಗಳು, ರಾಜ, ಮಹಾರಾಜರ ಪೋಷಾಕು ಧರಿಸಿದ್ದ ಮಕ್ಕಳು ಗಮನಸೆಳೆದರು. ಮೆರವಣಿಗೆಯಲ್ಲಿ ಶಾಸಕ ಜಿ.ಸೋಮಶೇಖರರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಇದ್ದರು.
ಬಹಿರಂಗ ಸಮಾವೇಶದಲ್ಲಿ ಕೊಟ್ಟೂರು ಸಂಸ್ಥಾನಮಠದ ಡಾ| ಸಂಗನಬಸವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖೀಲ ಭಾರತೀಯ ಸಂಯೋಜಕ ಅಶೋಕ ಪ್ರಭಾಕರ್ ಜೀ, ಪ್ರಧಾನ ಕಾರ್ಯದರ್ಶಿ ಕೆ. ಶ್ರೀರಾಮುಲು, ಪ್ರಾಂತ ಪ್ರಧಾನ ಕಾರ್ಯದರ್ಶಿ ಅಯ್ಯನಗೌಡ ಹೇರೂರು, ಮುಖಂಡರಟದ ವೈ.ಎಂ. ಸತೀಶ, ಸ್ವಾಗತ ಸಮಿತಿ ಅಧ್ಯಕ್ಷ ಗಣಪಾಲ ಐನಾಥರೆಡ್ಡಿ, ರಾಮಚಂದ್ರ ಜಿ.ಮಟ್ಟಿ ಸೇರಿದಂತೆ ಹಲವಾರು ಕಾರ್ಯಕರ್ತರು, ಜನರು ಇದ್ದರು.