ಬಳ್ಳಾರಿ: ಹಂಪಿ ಉತ್ಸವದ ಅಂಗವಾಗಿ ವಿಜಯನಗರ ಸಾಮ್ರಾಜ್ಯದ ವೈಭವದ ಕುರಿತು ಮರಳು ಶಿಲ್ಪ ಕಲಾಗಾರರ ಕೈಯಲ್ಲಿ ಹಂಪಿ ಸ್ಮಾರಕಗಳ ಶಿಲ್ಪಕಲೆಗಳು ಅದ್ಭುತವಾಗಿ ಅರಳಿದವು.
ಹಂಪಿ ಗ್ರಾಮ ಪಂಚಾಯಿತಿ ಮುಂಭಾಗದ ಮಾತಂಗ ಪರ್ವತದ ಮೈದಾನದಲ್ಲಿ ವಿರುಪಾಕ್ಷೇಶ್ವರ ದೇವಸ್ಥಾನದ ಗೋಪುರ, ತಾಜ್‌ಮಹಲ್, ಕಲ್ಲಿನ ರಥ, ಕೊನಾರ್ಕ್‌ನ ಸೂರ್ಯ ದೇವಸ್ಥಾನ, ಗಜಶಾಲೆ ಹಾಗೂ ಉಗ್ರ ನರಸಿಂಹ ಸ್ಮಾರಕಗಳು ಒಡಿಸ್ಸಾದಿಂದ ಆಗಮಿಸಿದ ಶಿಲ್ಪಕಲೆಗಾರ ನಾರಾಯಣ ಸಾಹು ಅವರು ನಿರ್ಮಿಸಿದ್ದಾರೆ. ಈ ಮರಳು ಶಿಲ್ಪ ಪ್ರದರ್ಶನಕ್ಕೆ ಅನೇಕ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಮುಂಬೈ ಒಡಿಸ್ಸಾದಿಂದ ಆಗಮಿಸಿದ ಖ್ಯಾತ ಮರಳು ಶಿಲ್ಪಿಗಳಾದ ನಾರಾಯಣ ಸಾಹು, ಜೀತೆಂದ್ರ ಮಹರಾಣ, ಅನಿಲ್ ಸೂರ್ಯವಂಶಿ, ಸುಬಲ ಮಹರಾಣ ಇವರು ಒಂದು ವಾರದಿಂದ ಮಾತಂಗಪರ್ವತ ಮೈದಾನದಲ್ಲಿ ಹಂಪಿಯ ವಿಜಯನಗರದ ಸಮ್ರಾಜ್ಯದ ಸ್ಮಾರಕಗಳನ್ನು ಅತ್ಯಂತ ವೈಭಯುತವಾಗಿ ಅರಳಿಸುವ ಕೆಲಸ ಮಾಡಿದ್ದಾರೆ.
ಒಡಿಸ್ಸಾ, ಮುಂಬೈ ಸೇರಿದಂತೆ ವಿವಿಧ ದೇಶಗಳಲ್ಲಿ ಮರಳು ಶಿಲ್ಪಗಳನ್ನು ಅರಳಿಸಿದ ನಾರಾಯಣ ಸಾಹು ಮತ್ತು ಅವರ ತಂಡವು ಗೋವಾ, ಮುಂಬೈ ಸೇರಿದಂತೆ ವಿವಿಧೆಡೆಯಲ್ಲಿ ಮರಳಿನಲ್ಲಿ ಶಿಲ್ಪಗಳನ್ನು ಆರಳಿಸಿದ ಇವರು ಕಲ್ಚರ್ ಆರ್ಟ್, ಸ್ಯಾಂಡ್ ಆರ್ಟ್‌ಗಳಲ್ಲಿ ಪ್ರವೀಣರು. ಅವರ ನೇತೃತ್ವದ ತಂಡ ಕಳೆದ 5 ವರ್ಷಗಳಿಂದ ಹಂಪಿ ಉತ್ಸವಕ್ಕೆ ಆಗಮಿಸಿ ವಿಜಯನಗರ ಸಾಮ್ರಾಜ್ಯದ ಗತವೈಭವದ ಸ್ಮಾರಕಗಳನ್ನು ಮರಳಿನಲ್ಲಿ ಅರಳಿಸುವುದಕ್ಕೆ ಖುಷಿ ತಂದಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
200ಕ್ಕೂ ಹೆಚ್ಚು ಜನರು ವಿಜಯನಗರದ ಸಾಮ್ರಾಜ್ಯ ವೈಭವದ ಸ್ಮಾರಕಗಳನ್ನು ವೀಕ್ಷಿಸುತ್ತ ಸ್ಮಾರಕಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡರು.