Advertisement

ಹಗರಿ ಕೆವಿಸಿಯಲ್ಲಿ ಪದವಿ ಕಾಲೇಜು ಸ್ಥಾಪನೆಗೆ ಒತ್ತಾಯ

06:00 PM Feb 28, 2020 | Naveen |

ಬಳ್ಳಾರಿ: ತಾಲೂಕಿನ ಹಗರಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಪದವಿ ಅಧ್ಯಯನ ಕೇಂದ್ರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರ ಮುಂದಿನ ಬಜೆಟ್‌ನಲ್ಲಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ(ಹೈಕ) ಹೋರಾಟ ಸಮಿತಿಯಿಂದ ಜಿ. ಸೋಮಶೇಖರ ರೆಡ್ಡಿಯವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

Advertisement

1906ರಲ್ಲಿ ಆರಂಭವಾದ ಈ ಕೇಂದ್ರ ಈಗಾಗಲೇ ಕೃಷಿ ವಿವಿ ಮಟ್ಟಕ್ಕೆ ಬೆಳೆಯಬೇಕಿತ್ತು. ಆದರೆ, ಇದುವರೆಗೆ ಕೇವಲ ಡಿಪೊÉಮೊ ಪದವಿ ಅಭ್ಯಾಸಕ್ಕೆ ಮಾತ್ರ ಸೀಮಿತವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ತಕ್ಷಣ ಪದವಿ ಕಾಲೇಜು ಆರಂಭಕ್ಕೆ ಕ್ರಮ ವಹಿಸಬೇಕು. ಈ ಭಾಗದ ರೈತರಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ ತಿಳಿಸಿಕೊಡುವ ಸಂಬಂಧ ಒಂದು ಪದವಿ ಕಾಲೇಜು ಬೇಕಿದೆ. ಹಗರಿ ಕೃಷಿ ಸಂಶೋಧನಾ ಕೇಂದ್ರ 300 ಎಕರೆ ವಿಶಾಲವಾದ ಜಮೀನು ಹೊಂದಿದೆ. ಜಿಲ್ಲೆಯ ಬಹುತೇಕ ಜನರು ಕೃಷಿ ಆಧಾರಿತ ಉದ್ಯೋಗಿಗಳು ಆಗಿರುವುದರಿಂದ ಈ ವಿಶಾಲವಾದ ಜಾಗ ಹೊಂದಿದ ಕೇಂದ್ರದಲ್ಲಿ ಕೃಷಿ ಪದವಿ ಕಾಲೇಜು ಆರಂಭಿಸುವುದು ಸೂಕ್ತ ಎಂಬುದನ್ನು ಈ ಹಿಂದೆ ಎಚ್‌.ಕೆ. ಪಾಟೀಲ್‌ ರು ಕೃಷಿಸಚಿವರಾಗಿದ್ದಾಗ ಬಜೆಟ್‌ ಪ್ರಸ್ತಾವನೆ ಮೂಲಕ ತಿಳಿಸಿದ್ದರು. ಇದೀಗ ಸರ್ಕಾರ ಇದರ ಕಾರ್ಯರೂಪದ ಕಡೆ ಗಮನ ಹರಿಸಬೇಕು.ಕಲ್ಯಾಣ ಕರ್ನಾಟಕ (ಹೈಕ) ಪ್ರದೇಶಕ್ಕೆ ಸಂವಿಧಾನ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದ್ದು ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಶೇ. 70ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗಿದ್ದು ಒಣಭೂಮಿ ಆಶ್ರಿತ ಪ್ರದೇಶದಲ್ಲಿ ರೈತರಿಗೆ, ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲು ಅನುಕೂಲವಾಗಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನಾರಾಜ್‌ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ ಕೃಷಿ ತಜ್ಞರಾದ ಡಾ| ಬಿಸಿಲಯ್ಯ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಸಮಿತಿಯ ಶಿಫಾರಸ್ಸಿನಂತೆ ಒಟ್ಟು 8 ಜಿಲ್ಲೆಗಳಲ್ಲಿ ಸ್ಥಾಪಿಸಬೇಕಾಗಿದ್ದ ಕೃಷಿ ಕಾಲೇಜುಗಳನ್ನು ಈಗಾಗಲೇ 7 ಜಿಲ್ಲೆಗಳಲ್ಲಿ ಪದವಿ ಕಾಲೇಜು ಪ್ರಾರಂಭಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಹಗರಿ ಕೃಷಿ ಕಾಲೇಜು ಮಾತ್ರ ಮಲತಾಯಿ ಧೋರಣಿಗೆ ಒಳಗಾಗಿ ನನೆಗುದಿಗೆ ಬಿದ್ದಿದೆ. ಈ ಬಜೆಟ್‌ನಲ್ಲಿ ಸರ್ಕಾರ ತನ್ನ ಧೋರಣೆ ಬದಲಿಸಿಕೊಂಡು ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಸಮಿತಿಯ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next