Advertisement
ಇಳುವರಿ ಉತ್ತಮವಾಗಿ ಬಂದಿದ್ದರೂ, ಕೊರೊನಾ ವೈರಸ್ ಆವರಿಸಿದ್ದ ಪರಿಣಾಮ ಲಾಕ್‌ಡೌನ್ ವಿಧಿಸಿದ್ದು, ಹಣ್ಣುಗಳನ್ನು ಮಾರಲು ಮಾರುಕಟ್ಟೆಯೇ ಇಲ್ಲವಾಗಿದ್ದು, ಹಣ್ಣುಗಳನ್ನು ಖರೀದಿ ಮಾಡಲು ವರ್ತಕರು ಸಹ ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಹಾಗಾಗಿ ಹಣ್ಣುಗಳು ಹೊಲದಲ್ಲೇ ಬಿಸಿಲಿಗೆ ಕೊಳೆತು ಹೋಗುವ ಬದಲಿಗೆ ಸಮೀಪದ ಗ್ರಾಮಗಳಲ್ಲಿ ಮನೆಮನೆಗೆ ಕೊಂಡೊಯ್ದು ದಾನ ಮಾಡುತ್ತಿದ್ದಾರೆ. ಈ ಮೂಲಕ ಲಾಕ್‌ಡೌನ್ ದಿನಗಳಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಜನರಿಗೂ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಯೇ ಇಲ್ಲವಾಗಿದೆ. ಮೇಲಾಗಿ ವರ್ತಕರು ಸಹ ಹಣ್ಣುಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಕೈಗೆ ಬಂದಿರುವ ಫಸಲನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗದೆ, ಕೊಡಾಲು ಸೇರಿ ಸಮೀಪದ ಚಿಕ್ಕಂತಾಪುರ, ಸುಲ್ತಾನಪುರ, ತೋರಣಗಲ್ಲು ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಹಣ್ಣುಗಳನ್ನು ದಾನ ಮಾಡಲಾಗಿದೆ ಎಂದು ತಿಮ್ಮೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.