Advertisement

ಕೋವಿಡ್ ವಾರಿಯರ್ಸ್‌ಗೆ ಎಳನೀರು ವಿತರಣೆ

05:15 PM May 01, 2020 | Naveen |

ಬಳ್ಳಾರಿ: ಕೋವಿಡ್ ವೈರಸ್‌, ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಬಿರುಬಿಸಿಲಿನಲ್ಲೂ ವಾರಿಯರ್ಸ್‌ಗಳಂತೆ ಅವಿರತ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌, ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕರು, ಗೃಹ ರಕ್ಷಕ ದಳದ ಸಿಬ್ಬಂದಿಗೆ ಚೈತನ್ಯ ಪಿಯು ಕಾಲೇಜ್‌, ಸನ್ಮಾರ್ಗ ಗೆಳೆಯರ ಬಳಗದಿಂದ ಉಚಿತವಾಗಿ ಎಳನೀರನ್ನು ವಿತರಿಸಲಾಯಿತು.

Advertisement

ನಗರದ ಗಡಗಿ ಚನ್ನಪ್ಪ ವೃತ್ತ, ಮೋತಿ ವೃತ್ತ, ಬೆಂಗಳೂರು ರಸ್ತೆ, ಟ್ರಾಫಿಕ್‌, ಹಲಕುಂದಿ ಚೆಕ್‌ಪೋಸ್ಟ್‌ ವಿಶೇಷವಾಗಿ ಗುಗ್ಗರಹಟ್ಟಿ ಕ್ವಾರಂಟೈನ್‌ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಕ್ವಾರಂಟೈನ್‌ ನಲ್ಲಿರುವಾಗ ವೈದ್ಯರಿಗೆ, ನರ್ಸ್‌ಗಳಿಗೆ ಚೈತನ್ಯ ಪಿಯು ಕಾಲೇಜು ನಿರ್ದೇಶಕ ಡಾ| ರಾಧಾಕೃಷ್ಣ ಎಳನೀರು ವಿತರಿಸಿದರು. ನಮ್ಮ ಪ್ರಾಣ ರಕ್ಷಣೆಗಾಗಿ, ತಮ್ಮ ಪ್ರಾಣಗಳನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಸಮಸ್ತ ಅಧಿಕಾರಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ಬಳ್ಳಾರಿಯ ಬಿರು ಬಿಸಿಲಿನ ಬೇಗೆಯಲ್ಲೂ ಕೊರೊನಾ ಕಾರ್ಯದಲ್ಲಿ ನಿರತರಾದ ಅಧಿಕಾರಿ ಮತ್ತು ಸಿಬ್ಬಂದಿಗೆ ಎಳನೀರು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸನ್ಮಾರ್ಗದ ಅಧ್ಯಕ್ಷರಾದ ಎಚ್‌. ಲಕ್ಷ್ಮೀಕಾಂತರೆಡ್ಡಿ, ಉಪಾಧ್ಯಕ್ಷ ಜಗದೀಶ್‌, ಖಜಾಂಚಿ ತೇಜ ರಘುರಾಮರಾವ್‌, ಕಾರ್ಯದರ್ಶಿ ಕಪ್ಪಗಲ್ಲು ಚಂದ್ರಶೇಖರ್‌ ಆಚಾರ್‌, ಮಂಜುನಾಥ ಜೆ.ಪಿ., ಟ್ಯಾಟೂ ಮಂಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next