Advertisement

ಮತ್ತೆ 50 ಜನರಿಗೆ ಕೋವಿಡ್ ಸೋಂಕು

12:57 PM Jul 02, 2020 | Naveen |

ಬಳ್ಳಾರಿ: ನಿನ್ನೆಯಷ್ಟೇ ಬರೋಬ್ಬರಿ 107 ಪಾಸಿಟಿವ್‌ ಪ್ರಕರಣಗಳು ಕಾಣಿಸಿಕೊಂಡು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದ್ದ ಕೋವಿಡ್ ಮಹಾಮಾರಿ ಹಾವಳಿ ಬುಧವಾರ ಕರ್ತವ್ಯ ನಿರತ ವೈದ್ಯರು ಹಾಗೂ ಮೂವರು ಆರೋಗ್ಯ ಸಿಬ್ಬಂದಿ ಸೇರಿ ಒಟ್ಟು 50 ಜನರಿಗೆ ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ. ಈ ಪೈಕಿ ಜಿಂದಾಲ್‌ ಸಂಸ್ಥೆಯ 456 ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ 930ಕ್ಕೆ ಏರಿಕೆಯಾಗಿದೆ.

Advertisement

ಗಣಿಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಸಾವಿರದ ಅಂಚಿಗೆ ತಲುಪಿದೆ. ಒಟ್ಟು ಪ್ರಕರಣಗಳ ಪೈಕಿ 409 ಗುಣಮುಖರಾಗಿ 29 ಜನ ಮರಣ ಹೊಂದಿದ್ದಾರೆ. ಇನ್ನೂ 492 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವರದಿಯಾದ 50 ಪ್ರಕರಣಗಳ ಪೈಕಿ ಬಳ್ಳಾರಿ ತಾಲೂಕು 24, ಸಂಡೂರು ತಾಲೂಕು 14, ಹೊಸಪೇಟೆ 4, ಸಿರುಗುಪ್ಪ 3, ಕೂಡ್ಲಿಗಿ 1, ಹೂವಿನಹಡಗಲಿ 2, ನೆರೆಯ ಆಂಧ್ರದ ಎಮ್ಮಿಗನೂರು 1, ಮೊಳಕಾಲ್ಮೂರು 1 ಪ್ರಕರಣ ಸೇರಿವೆ.

ಈ ಪೈಕಿ ಕರ್ತವ್ಯ ನಿರತ ಒಬ್ಬ ವೈದ್ಯರು, ಮೂವರು ಕರ್ತವ್ಯ ನಿರತ ಆರೋಗ್ಯ ಸಿಬ್ಬಂದಿಗೂ ಕೋವಿಡ್ ಸೋಂಕು ಆವರಿಸಿದೆ. 12 ಐಎಲ್‌ಐ ಪ್ರಕರಣಗಳಾಗಿವೆ. ಮೂರು ದುರ್ಬಲ ವರ್ಗದ ಸಾರಿ ಪ್ರಕರಣಗಳಾಗಿದ್ದು, ಇನ್ನುಳಿದ ಸೋಂಕಿತರು ವಿವಿಧ ಸೋಂಕಿತರ ಸಂಪರ್ಕಿತರಾಗಿದ್ದಾರೆ ಎಂದು ಡಿಸಿ ಎಸ್‌.ಎಸ್‌. ನಕುಲ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next