Advertisement

ನಗರ ಸ್ವಚ್ಛತೆ‌: ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ

06:08 PM Apr 30, 2020 | Naveen |

ಬಳ್ಳಾರಿ: ಕೋವಿಡ್‌-19 ವೈರಾಣು ಹರಡದಂತೆ ಪೌರ ಕಾರ್ಮಿಕರು ಅತ್ಯಂತ ಶ್ರೇಷ್ಠವಾದ ಕಾರ್ಯ ಮಾಡುತ್ತಿದ್ದು, ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಪ್ರಾಣವನ್ನು ಪಣಕ್ಕಿಟ್ಟು ನಗರ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಅರ್ಜುನ್‌. ಎಸ್‌. ಮಲ್ಲೂರು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಬುಧುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಾನವ ಹಕ್ಕುಗಳ ಚಳವಳಿಗಾರರ ಸಂಸ್ಥೆ ಇವರ ಸಹಯೋಗದೊಂದಿಗೆ ಕೋವಿಡ್‌-19 ಕುರಿತು ಜಾಗೃತಿ ಅಭಿಯಾನ ಮತ್ತು ಪೌರ ಕಾರ್ಮಿಕರಿಗೆ ಆಹಾರ ಪಡಿತರ ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗರವನ್ನು ಸ್ವಚ್ಛ ಮಾಡುವುದರ ಜೊತೆಗೆ ನಿಮ್ಮ ಆರೋಗ್ಯದ ಕಡೆ ಗಮನಹರಿಸಿ. ಸಾಬೂನು ಅಥವಾ ಸ್ಯಾನಿಟೈಸರ್‌ ಮೂಲಕ ನಿಮ್ಮ ಕೈಗಳನ್ನು ಪದೇ-ಪದೇ ತೊಳೆದುಕೊಳ್ಳಬೇಕು ಮತ್ತು ಕಾರ್ಯಕ್ಕೆ ಹಾಜರಾಗುವ ಮುನ್ನ ಪಾಲಿಕೆ ನೀಡಿರುವ ಸುರಕ್ಷಾ ಕವಚಗಳಾದ ಜಾಕೆಟ್‌, ಬೂಟು, ಬ್ಲೌಜ್‌, ಮಾಸ್ಕ್ನ್ನು ತಪ್ಪದೇ ಧರಿಸಿಕೊಳ್ಳಬೇಕು ಎಂದರು. ಪೌರ ಕಾರ್ಮಿಕರು ಸಾಮಾಜಿಕ
ಅಂತರದಿಂದ ಆಹಾರ ಪಡಿತರ ಕಿಟ್‌ಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಚ್‌.ಎಲ್‌. ಜರ್ನಾಧನ್‌, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ, ಮಾನವ ಹಕ್ಕುಗಳ ಚಳವಳಿಗಾರರ ಸದಸ್ಯರು ಹಾಗೂ ದಾನಿಗಳಾದ ನವೀನ ಕಾಂಡ್ರ ಸೇರಿದಂತೆ ಪಾಲಿಕೆ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next