Advertisement

ಕಡ್ದಾಯ ಮಾಸ್ಕ್ ಧರಿಸಿ-ಕೋವಿಡ್ ನಿಯಂತ್ರಿಸಿ

12:54 PM Jun 24, 2020 | Naveen |

ಬಳ್ಳಾರಿ: ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಸೀಮಿತ ಅವಧಿಯಲ್ಲಿ ಹರಡಿದ ಕೋವಿಡ್ ವೈರಸ್‌ ಇಂದು ನಮ್ಮ ಜಿಲ್ಲೆಯಲ್ಲೂ ಪ್ರಕರಣಗಳು ಕಂಡುಬರಲು ಆರಂಭಿಸಿದೆ. ಈ ದಿಶೆಯಲ್ಲಿ ಎಲ್ಲರೂ ಕಾರ್ಯನಿರ್ವಹಿಸುವ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಕನಿಷ್ಠ 2 ಮೀಟರ್‌ ಸಾಮಾಜಿಕ ಅಂತರ ಕಾಪಾಡಿಕೊಂಡು ಕೈಗಳನ್ನು ಸ್ಯಾನಿಟೈಸರ್‌, ಸೋಪು ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳುವ ಮೂಲಕ ರೋಗ ನಿಯಂತ್ರಣ ಮಾಡಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್‌ ದಾಸಪ್ಪನವರ ಸಲಹೆ ನೀಡಿದರು.

Advertisement

ಜಿಲ್ಲಾ ಆಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜೆಎಸ್‌ಡಬ್ಲ್ಯೂ ಆಡಳಿತ ಮಂಡಳಿ ಸಹಕಾರದೊಂದಿಗೆ ಮಂಗಳವಾರ ತೊರಣಗಲ್ಲಿನ ಜೆಎಸ್‌ಡಬ್ಲ್ಯೂನ ಕಾರ್ಯನಿರ್ವಹಣಾ ಪ್ರದೇಶಗಳಾದ ಎಸ್‌ಪಿ. ಪಿಪಿ, ಬಿಎಫ್‌, ಸಿಸಿಟಿ ಹಾಗೂ ಡಿಆರ್‌ಐ, ಐಜಿಪಿಎಲ್‌ ಮುಂತಾದ ಘಟಕಗಳಲ್ಲಿ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಕೋವಿಡ್ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಸಿಡಿಯುವ ಕಣಗಳು ತೀರ ಹತ್ತಿರದಲ್ಲಿ ಇರುವ ವ್ಯಕ್ತಿ ಮೈಮೇಲೆ ಬಿಳುವ ಮೂಲಕ ಆ ವ್ಯಕ್ತಿಯು ತನ್ನ ಮೈಮೇಲಿನ ಸೊಂಕನ್ನು ಮುಟ್ಟಿ ಕಣ್ಣು, ಮೂಗು, ಬಾಯಿ ಮುಟ್ಟಿದಾಗ ರೋಗ ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೆ ಸೊಂಕಿತರು ಮುಟ್ಟಿದ ಸ್ಥಳಗಳನ್ನು ಆರೋಗ್ಯವಂತರು ಮುಟ್ಟಿ ಅದೆ ಕೈಗಳಿಂದ ತಮ್ಮ ಕಣ್ಣು ಮೂಗು, ಬಾಯಿ ಮುಟ್ಟುವುದರಿಂದ ರೋಗ ಹರಡುವ ಸಾಧ್ಯತೆ ಇದೆ ಎಂದು ಹೇಳಿದ ಅವರು ಮನೆಯಲ್ಲಿ ಇರುವ ಚಿಕ್ಕ ಮಕ್ಕಳನ್ನು ಗರ್ಭಿಣಿ, ಬಾಣಂತಿಯರನ್ನು ಹಾಗೂ 60 ವರ್ಷ ಮೇಲ್ಪಟ್ಟವನ್ನು ವಿಶೇಷವಾಗಿ ಕಾಳಜಿವಹಿಸಿ ರೋಗ ಹರಡದಂತೆ ಜಾಗೃತೆ ವಹಿಸಬೇಕು ಎಂದರು.

ಬಳಸಿದ ಮಾಸ್ಕ್ ಗಳನ್ನು ಸೂಕ್ತವಾಗಿ ವಿಲೆವಾರಿ ಮಾಡಲು ಕ್ರಮವಹಿಸುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಂತೆ ಎಲ್ಲರೂ ಸಹಕರಿಸಬೇಕು ತಿಳಿಸಿದರು. ಹೊಮ್‌ ಕ್ವಾರಂಟೈನ್‌ನಲ್ಲಿ ಇರುವವರು ಮನೆಯಿಂದ ಹೊರಗಡೆ ಓಡಾಡದಂತೆ ತಾವಾಗಿಯೆ ಮನಸ್ಸು ಮಾಡುವುದರಿಂದ ಇತರೆಡೆಗೆ ಸೋಂಕು ಹರಡುವುದನ್ನು ತಡೆಯಬಹುದಾಗಿದೆ. ಯಾರಿಗಾದರೂ ಮೂಗು ಸೋರುವುದು, ತಲೆನೋವು, ಗಂಟಲು ನೋವು, ಒಣಕೆಮ್ಮು, ಜ್ವರ, ಉಸಿರಾಟದ ತೊಂದರೆಯು ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ. ಸಹಾಯಕ್ಕಾಗಿ ಜಿಲ್ಲಾಡಳಿತದ ಸಹಾಯವಾಣಿ 08392-277100 ಅಥವಾ 8277888866 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next