Advertisement
ನಗರದ ಬಸವ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅದೊಂದು ಕಾಲವಿತ್ತು. ದೇಶದಲ್ಲೆಲ್ಲಾ ಕಾಂಗ್ರೆಸ್ ಗೆಲುವು ಸಾಧಿಸುತ್ತಿತ್ತು. ಕಾಂಗ್ರೆಸ್‌ನಿಂದ ವಿದ್ಯುತ್ ಕಂಬವನ್ನು ನಿಲ್ಲಿಸಿದರೂ ಗೆಲ್ಲುತ್ತಿದ್ದರು ಎನ್ನಲಾಗುತ್ತಿತ್ತು. ಅಂದು ಬಿಜೆಪಿ ಪಕ್ಷ ಕೇವಲ 2 ಸಂಸದರನ್ನು ಮಾತ್ರ ಹೊಂದಿತ್ತು. ಆದರೆ ಇಂದು ಸಂಘಟನೆಯ ಕೊರತೆಯಿಂದಾಗಿ ಕಾಂಗ್ರೆಸ್ ದೇಶಾದ್ಯಂತ ಶಕ್ತಿ ಕಳೆದುಕೊಂಡಿದೆ.
Related Articles
Advertisement
ಮುಂದಿನ ಗುರಿ: ನಮ್ಮ ಮುಂದಿನ ಗುರಿ ಗ್ರಾಮಪಂಚಾಯ್ತಿ, ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾಚಣೆಯಲ್ಲಿನ ಗೆಲುವು ಎಂದರು. ಈಗ ನಾವು ಅನುಕಂಪ, ಅಭಿವೃದ್ಧಿ, ನಾಯಕತ್ವದ ಮೇಲೆ ಚುನಾವಣೆ ಎದುರಿಸುವುದು ಅಲ್ಲ, ಸಂಘಟನೆಯ ಮೂಲಕ ಎಂದರು. ನಮ್ಮ ಪಕ್ಷ ಕೊಟ್ಟ ಮಾತನ್ನು ಈಡೇರಿಸಲಿದೆ ಎಂದು ಅದಕ್ಕೆ ಸಾಕ್ಷಿ ಹತ್ತು ಜನರಿಗೆ ಸಚಿವ ಸ್ಥಾನ ನೀಡಿದ್ದು ಎಂದ ಅವರು, ನಮ್ಮ ಪಕ್ಷದಲ್ಲಿ ಒಂದೇ ತಾಸಿನಲ್ಲಿ ರಾಜ್ಯಾಧ್ಯಕ್ಷರ ನೇಮಕ ಆಯ್ತು, ರಾಜ್ಯದ ಎಲ್ಲ ಜಿಲ್ಲೆಗಳಿಗೆ ಅಧ್ಯಕ್ಷರನ್ನು ಅಯ್ಕೆ ಮಾಡಲಾಗಿದೆ. ಆದರೆ ಕಾಂಗ್ರೆಸ್‌ಗೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಸಹ ಅದು ಅಸಮರ್ಥವಾಗಿದೆಂದು ಟೀಕಿಸಿದರು.
ಭ್ರಷ್ಟಾಚಾರದ ಆರೋಪವಿಲ್ಲದ ಸರ್ಕಾರ ನಮ್ಮದು, ದೇಶದಲ್ಲಿ ಉಗ್ರರ ನೆಲೆ ಕಾಶ್ಮೀರದಲ್ಲಿ ಈಗ ಬಾಂಬ್ ಸದ್ದು ಕೇಳದಂತೆ ಮಾಡಿದ್ದೇವೆಂದರು. ಗಾಂಧಿಧೀಜಿ ಹೇಳಿದ್ದರು: ಪಾಕಿಸ್ತಾನದಲ್ಲಿ 23ರಷ್ಟಿದ್ದ ಹಿಂದುಗಳ ಸಂಖ್ಯೆ ಇಂದು ಕೇವಲ ಶೇ.3ಕ್ಕೆ ಇಳಿಕೆಯಾಗಿದೆ. ಪಾಕಿಸ್ತಾನದಲ್ಲಿ ಸಮಸ್ಯೆ ಎದುರಿಸುತ್ತಿದ್ದ ಹಿಂದುಳಿಗೆ ಭಾರತದಲ್ಲಿ ಪೌರತ್ವ ನೀಡಬೇಕು ಎಂದು ಗಾಂಧೀಜಿ ಹೇಳಿದ್ದರು. ಆ ಕೆಲಸವನ್ನು ಇಂದು ಬಿಜೆಪಿ ಮಾಡುತ್ತಿದೆ. ಗಾಂಧೀಜಿಯವರನ್ನು ಕಾಂಗ್ರೆಸ್ ಮತಕ್ಕಾಗಿ ಬಳಕೆ ಮಾಡಿಕೊಂಡಿದೆ. ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ಅಬ್ದುಲ್ ಕಲಾಂ ಅವರನ್ನು ಬಿಜೆಪಿ ಸರ್ಕಾರ ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಈ ದೇಶದ ಯಾವೊಬ್ಬ ನಾಗರಿಕರಿಗೆ ಸಮಸ್ಯೆ ಇಲ್ಲ. ಅದರಲ್ಲೂ ಮುಸಲ್ಮಾನರಿಗೆ ಯಾವುದೇ ಸಮಸ್ಯೆಯಾಗಲ್ಲ. ಕಾಂಗ್ರೆಸ್‌ನವರು ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದನ್ನು ನಂಬಬಾರದು. ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರುವುದು ಸಹಜ. ನಿಮ್ಮ ಅಸಮಾಧಾನಗಳಿದ್ದರೆ ರಸ್ತೆಯಲ್ಲಿ ಮಾತನಾಡದೆ ನೇರವಾಗಿ ನಮಗೆ ಬಂದು ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಚನ್ನಬಸವನಗೌಡರಿಗೆ ಬಿಜೆಪಿ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ಪದಗ್ರಹಣ ಮಾಡಿದ ಚೆನ್ನಬಸನಗೌಡ ಪಾಟೀಲ್ ಮಾತನಾಡಿ, ಕಳೆದ 30 ತಿಂಗಳ ಅವಧಿಯಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಸಮರ್ಥವಾಗಿ ಸಂಘಟಿಸಲು ಎಲ್ಲರೂ ನೀಡಿದ ಸಹಕಾರ ಸ್ಮರಣೀಯವಾಗಿದೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ರಾಮಲಿಂಗಪ್ಪ ಮಾತನಾಡಿ, ಕಳೆದೆರಡು ತಿಂಗಳಿಂದ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನದ ನೇಮಕದ ಕುರಿತು ಇದ್ದ ಸುದ್ದಿಗೆ ತೆರೆ ಬಿದ್ದಿದೆ. ಹಣ ಬಲ, ತೋಳ್ಬಲಕ್ಕೆ ಪಕ್ಷ ಮಣಿಯಲ್ಲ. ನಾನೂ ಜಿಲ್ಲಾಧ್ಯಕ್ಷ ಆಗಬೇಕೆಂದು ಬಯಸಿದ್ದೆ ಆದರೆ, ಪಕ್ಷ ತೀರ್ಮಾನಿಸಿದ್ದನ್ನು ನಾನು ಸದಾ ಸ್ವಾಗತಿಸುವೆ. ಜಿಲ್ಲಾ, ತಾಲೂಕು, ಪದಾಧಿಕಾರಿಗಳ, ಕಾರ್ಯಕರ್ತರನ್ನು ಪಕ್ಷ ಗುರುತಿಸಲಿದೆ ಎಂದರು.
ಹರಪನಹಳ್ಳಿ ಶಾಸಕ ಜಿ. ಕರುಣಾಕರೆಡ್ಡಿ, ಸಂಸದ ವೈ. ದೇವೇಂದ್ರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಅಶೋಕ್ ಗಸ್ತಿ, ಮಾಜಿ ಶಾಸಕರಾದ ಚಂದ್ರನಾಯ್ಕ, ನೇಮಿರಾಜ್ ನಾಯ್ಕ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ್, ಪಕ್ಷದ ಮುಖಂಡರುಗಳಾದ ಡಾ| ಮಹಿಪಾಲ್, ಎಸ್. ಗುರುಲಿಂಗನಗೌಡ, ಮುರಹರಿಗೌಡ, ಗುತ್ತಿಗನೂರು ವಿರುಪಾಕ್ಷಗೌಡ, ಗೋನಾಳ್ ರಾಜಶೇಖರ ಗೌಡ, ಎಚ್. ಹನುಮಂತಪ್ಪ, ಬಿ. ಶಿವಕುಮಾರ್, ಮೋತ್ಕರ್ ಶ್ರೀನಿವಾಸ್, ವೀರಶೇಖರ ರೆಡ್ಡಿ, ಓಬಳೇಶ್, ಎ.ಎಂ. ಸಂಜಯ್, ಅನಿಲ್ ನಾಯ್ಡು, ಶ್ರೀನಿವಾಸ್ ಪಾಟೀಲ್ ಇತರರಿದ್ದರು.
ಶಾಸಕರು ಗೈರು: ಶಾಸಕರಾದ ಸೋಮಲಿಂಗಪ್ಪ, ಸೋಮಶೇಖರ ರೆಡ್ಡಿ, ಗೋಪಾಲಕೃಷ್ಣ, ಸಚಿವ ಆನಂದ್ ಸಿಂಗ್, ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ ಮೊದಲಾದವರು ಸಮಾರಂಭಕ್ಕೆ ಗೈರಾಗಿದ್ದರು.