ಬಳ್ಳಾರಿ: ರಾಜ್ಯದ ವಿವಿಧೆಡೆ ಗೆಜೆಟೆಡೆ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕೆ.ಪಿ.ಎಸ್.ಸಿ. ಪೂರ್ವಭಾವಿ ಪರೀಕ್ಷೆ ನಡೆಸುತ್ತಿದ್ದು, ಅದರಂತೆ ಬಳ್ಳಾರಿಯಲ್ಲೂ ಪರೀಕ್ಷೆ ಏರ್ಪಡಿಸಲಾಗಿತ್ತು.
ನಗರದ ಸಂತ ಜಾನ್ ಪ್ರೌಢಶಾಲೆಯ ಕೊಠಡಿ ಸಂಖ್ಯೆ 18ರಲ್ಲಿ ಶೀಲ್ಡ್ ಒಡೆದ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಕೊಠಡಿಯಲ್ಲಿ ಅಭ್ಯರ್ಥಿಗಳ ಸಹಿ ಪಡೆದು ಅವರ ಸಮ್ಮುಖದಲ್ಲೇ ಪ್ರಶ್ನೆ ಪತ್ರಿಕೆಯ ಕವರ್ ನ್ನು ಒಡೆಯದೆ ವಿತರಣೆ ಮಾಡಿರುವುದರ ಜೊತೆಗೆ ಪ್ರಶ್ನೆ ಪತ್ರಿಕೆಯ ಶೀಲ್ಡ್ ಸಹ ಒಡೆದಿರುವ ಆರೋಪ ಪರೀಕ್ಷಾ ಮೇಲ್ವಿಚಾರಕರ ಮೇಲಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಕಾಲೇಜು ಆವರಣದಲ್ಲೇ ಪ್ರತಿಭಟನೆ ನಡೆಸಿದ್ದಾರೆ.
ಆ ನಂತರ ಮೇಲಾಧಿಕಾರಿಗಳನ್ನು ಸಂಪರ್ಕಿಸಿದ ಅಭ್ಯರ್ಥಿಗಳಿಗೆ, ಮಧ್ಯಾಹ್ನದ ಎರಡನೇ ಪರೀಕ್ಷೆ ಮುಗಿದ ಬಳಿಕ ಸಂಜೆ 4 ಗಂಟೆಗೆ ಪ್ರಶ್ನೆ ಪತ್ರಿಕೆ ಹೊರ ತೆಗೆದಿರುವ ವೀಡಿಯೋ ತೋರಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.