ಬಳ್ಳಾರಿ: ನಗರದ ಬಹುಪಾಲು ಜನರು ಕುಡಿಯುವ ನೀರನ್ನು ಶುದ್ಧೀಕರಿಸುವ ಘಟಕ ನೋಡಿದ್ರೆ ನೀರೇ ಕುಡಿಯಲ್ಲ!
Advertisement
ಹೌದು….! ಅಚ್ಚರಿ ಎನಿಸಿದರೂ ಇದು ಸತ್ಯ. ನಗರ ಹೊರವಲಯದ ಹೊಸಪೇಟೆ ರಸ್ತೆಯ ಎಚ್ಎಲ್ಸಿ ಕಾಲುವೆ ಬಳಿಯಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಶೇ.70ಕ್ಕೂ ಹೆಚ್ಚು ಭಾಗಕ್ಕೆ ಶುದ್ಧ ಕುಡಿವ ನೀರನ್ನು ಒದಗಿಸುತ್ತದೆ.
Related Articles
Advertisement
ಇದೆಂಥ ನೀರನ್ನು ಪೂರೈಕೆ ಮಾಡುತ್ತಿದ್ದೀರಾ ನಗರದ ಜನರಿಗೆ ಎಂದು ಪ್ರಶ್ನಿಸಿದರೆ ಅಧಿಕಾರಿಗಳ ನೇರ ಉತ್ತರ ಜನಪ್ರತಿನಿಧಿಗಳ ಕಡೆ ಮುಖಮಾಡುವಂತೆ ಮಾಡುತ್ತದೆ. ಜನಪ್ರತಿನಿಧಿಗಳು ಹೇಳುವಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ನೂತನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಅಲ್ಲಿಂದಲೇ ನೀರು ಕೊಡಲು ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಅಲ್ಲಿಂದ ನೀರು ಕೊಟ್ಟರೆ ಕೌಲ್ ಬಜಾರ್‌ನ ಎಲ್ಲ ಭಾಗಗಳಿಗೆ ನೀರು ಪೂರೈಕೆ ಆಗುವುದಿಲ್ಲ ಎಂದು ಕಾರಣ ಹೇಳಿ ಅದೇ ಬ್ರಿಟೀಷರ ಕಾಲದ ಸಂಪಿನ ಮೂಲಕವೇ ನೀರು ಪಂಪ್‌ಮಾಡಿ ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಚರಂಡಿ ನೀರು ಸೇರುತ್ತದೆ: ಇನ್ನು ನಗರದಲ್ಲಿ ಕುಡಿಯುವ ನೀರು ಪೂರೈಕೆಮಾಡಲು ಅಳವಡಿಸಿರುವ ಪೈಪ್‌ಲೈನ್ ಸಹ ತೀರಾ ಹಳತಾಗಿದೆ. ಇವೇ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಓವರ್‌ಹೆಡ್ ಟ್ಯಾಂಕ್‌ಗಳ ಬಳಕೆ ಆಗುತ್ತಲೇ ಇಲ್ಲ. ಈ ಹಳೆ ಪೈಪ್‌ಗ್ಳಲ್ಲಿ ಎಲ್ಲೆಂದರಲ್ಲಿ ತೂತುಗಳಿವೆ. ಪೈಪ್‌ನಲ್ಲಿ ನೀರು ಹರಿಯದೆ ಇದ್ದಾಗ ಚರಂಡಿ ನೀರು ಇವುಗಳಲ್ಲಿ ಸೇರಿಕೊಳ್ಳುತ್ತದೆ. ನೀರು ಹರಿಸಿದಾಗ ಈ ನೀರು ಸಹ ಸೇರಿಕೊಂಡು ಕುಡಿಯುವ ನೀರಾಗಿ ನಳಗಳಲ್ಲಿ ಹರಿಯುತ್ತದೆ. ಹಾಗಾಗಿ ಪಾಲಿಕೆಯಿಂದ ವಾರಕ್ಕೊಮ್ಮೆ ಪೂರೈಕೆಯಾಗುವ ಕುಡಿವ ನೀರು, ಆರಂಭದಲ್ಲಿ ಕಲುಷಿತವಾಗಿದ್ದು, ನಂತರ ಶುದ್ಧವಾದ ನೀರು ಲಭಿಸುತ್ತದೆ ಎಂದು ಘಟಕದ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಶಿಥಿಲಾವಸ್ಥೆಗೆ ನೆಲಟ್ಯಾಂಕ್
ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧಗೊಂಡ ನೀರನ್ನು ಸಂಗ್ರಹಿಸುವ ನೆಲಟ್ಯಾಂಕ್ ಶಿಥಿಲಾವಸ್ಥೆ ತಲುಪಿದೆ. ಜತೆಗೆ ಪರ್ಯಾಯವಾಗಿ ಶುದ್ಧಗೊಂಡ ನೀರು ಸಂಗ್ರಹಣಾ ಘಟಕ ವ್ಯವಸ್ಥೆ ಮಾಡಲಾಗಿದೆ. ಹೊಸದನ್ನು ಬಳಕೆ ಮಾಡಿದರೆ, ನಗರದ ಕೆಲ ಭಾಗಕ್ಕೆ ಕುಡಿವ ನೀರು ಸಮರ್ಪಕವಾಗಿ ಪೂರೈಕೆಯಾಗಲ್ಲ. ಹೀಗಾಗಿ ಜನಪ್ರತಿನಿಧಿಗಳು ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಾಲಿಕೆ ಅಧಿಕಾರಿಗಳ ಗಮನಕ್ಕೂ ಇದೆ. ಆದರೂ, ಪ್ರಯೋಜನವಾಗುತ್ತಿಲ್ಲ.
•ಜಯಪ್ರಕಾಶ್‌ರೆಡ್ಡಿ, ಚೌಹಾಣ್,
ನೀರು ಶುದ್ಧೀಕರಣ ಘಟಕದ ಅಧಿಕಾರಿಗಳು.