ಬಳ್ಳಾರಿ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಹೆಡ್ ಸ್ಲೂಸ್ ಗೇಟ್ (ಮುಖ್ಯಗೇಟ್) ಮುರಿದಿದ್ದು, ದುರಸ್ತಿ ಕಾರ್ಯ ಮುಂದುವರಿದಿದೆ. ಬೆಳಗಾವಿಯ ಅಕ್ಷತಾ ಅಂಡರ್ ವಾಟರ್ ಸರ್ವಿಸಸ್ ಕಂಪನಿಯ 10 ಜನ ಎಂಜಿನಿಯರಿಂಗ್ ನಿಪುಣರನ್ನೊಳಗೊಂಡ ಡೈವಿಂಗ್ ತಂಡ ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಗುರುವಾರ ಸಹ ಮುಂದುವರಿಯುವ ಸಾಧ್ಯತೆಯಿದೆ.
Advertisement
ಪ್ರಸಕ್ತ ವರ್ಷ ಆರಂಭದಿಂದಲೂ ನೀರಿನ ಕೊರತೆ ಎದುರಿಸುತ್ತಿದ್ದ ತುಂಗಭದ್ರಾ ಜಲಾಶಯಕ್ಕೆ ಕಳೆದ ಒಂದೆರಡು ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಪರಿಣಾಮ ಜಲಾಶಯದಿಂದ ಎಲ್ಲ ಕಾಲುವೆಗಳಿಗೂ ನೀರು ಹರಿಸಲಾಯಿತು. ಒಂದೇ ಸಮನೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಹಲವು ದಿನಗಳಿಂದ ರಿಪೇರಿಗಾಗಿ ಕಾದಿದ್ದ, ತುಕ್ಕು ಹಿಡಿದಿದ್ದ ಜಲಾಶಯದ ಎಡದಂಡೆಯ ಮೇಲ್ಮಟ್ಟದ ಕಾಲುವೆಯ ಮುಖ್ಯಗೇಟ್ ಮುರಿದಿದೆ. ಇದರಿಂದ ಅಪಾರ ಪ್ರಮಾಣದ ನೀರು ಹೊರ ಬಂದಿದ್ದು, ಪಕ್ಕದ ಮುನಿರಾಬಾದ್‌ನ ಪಂಪಾವನ ಸೇರಿ ಹಲವೆಡೆ ನುಗ್ಗಿದೆ. ಇದನ್ನು ತಡೆಯಲು ಕಳೆದ ಎರಡು ದಿನಗಳಿಂದ ದುರಸ್ತಿ ಕಾರ್ಯ ನಡೆದಿದೆ. ಗೇಟ್ ದುರಸ್ತಿ ಮಾಡಿದ್ದು ಈಗಾಗಲೇ ಎರಡು ಬಾರಿ ವಿಫಲವಾಗಿದೆ. ಕೊನೆಯ ಪ್ರಯತ್ನ ನಡೆದಿದ್ದು, ಅದು ಸಾಧ್ಯವಾಗದಿದ್ದಲ್ಲಿ ಹೊಸ ಗೇಟ್ ಸಹ ಅಳವಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ಸಿದ್ಧತೆ
ತುಂಗಭದ್ರಾ ಜಲಾಶಯದ ಎಡದಂಡೆಯ ಮೇಲ್ಮಟ್ಟದ ಕಾಲುವೆ ಹೆಡ್ ಸ್ಲೂಸ್‌ಗೇಟ್ (ಮುಖ್ಯಗೇಟ್) ಮುರಿದಿದೆ. ಹಲವು ವರ್ಷಗಳಿಂದ ನೀರಲ್ಲೇ ಇರುವುದರಿಂದ ತುಕ್ಕು ಹಿಡಿದು ಮುರಿದಿದೆ. ಕಳೆದ ಎರಡು ದಿನಗಳಿಂದ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದೀಗ ಬೆಳಗಾವಿ ಮೂಲದ ಅಕ್ಷತಾ ಅಂಡರ್ ವಾಟರ್ ಸರ್ವಿಸಸ್ ಕಂಪನಿಯ ನಿಪುಣರ ತಂಡ ರಿಪೇರಿ ಕಾರ್ಯ ಮಾಡುತ್ತಿದೆ. ಸಾಧ್ಯವಾಗದಿದ್ದರೆ ಹೊಸ ಗೇಟ್ನ್ನು ಅಳವಡಿಸಲು ಸಹ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
•ಮಂಜಪ್ಪ,
ಮುಖ್ಯ ಎಂಜಿನೀಯರ್,
ತುಂಗಭದ್ರಾ ಜಲಾಶಯದ ನೀರಾವರಿ ನಿಗಮ