Advertisement
ನಗರದ ಬಿಡಿಎ ಸಭಾಂಗಣದಲ್ಲಿ ಗುರುವಾರ ತುಂಗಭದ್ರಾ ರೈತ ಸಂಘದ ವತಿಯಿಂದ ಆಯೋಜಿಸಿದ್ದ ತುಂಗಭದ್ರಾ ಜಲಾಶಯದ ಅಮೃಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಉಪನ್ಯಾಸಕ ಡಾ| ಎಚ್. ಮಹಾಬಲೇಶ್ವರ ಮಾತನಾಡಿ, ಜಲಾಶಯ ನಿರ್ಮಾಣಕ್ಕಾಗಿ ನೂರಾರು ಹಳ್ಳಿಗಳ ಸಾವಿರಾರು ಎಕರೆ ಭೂಮಿ, ಲಕ್ಷಾಂತರ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಜಲಾಶಯ ನಿರ್ಮಾಣದಲ್ಲಿ ಹಲವರು ಅನೇಕ ಕಾರಣಕ್ಕೆ ಜೀವದಾನ ಮಾಡಿದ್ದಾರೆ. ನೀರಾವರಿ, ಕೈಗಾರಿಕೆ, ಕುಡಿಯುವ ನೀರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದೆ. ತುಂಗಭದ್ರಾ ಜಲಾಶಯ ರಾಜ್ಯದ ಎರಡನೇ ಅತಿ ದೊಡ್ಡ ಜಲಾಶಯವಾಗಿದೆ. ಜಲಾಶಯದಲ್ಲಿ ಸಂಗ್ರಹವಾದ ನೀರು ರಾಜ್ಯಕ್ಕೆ ಶೇ. 65ರಷ್ಟು ಸಲ್ಲಬೇಕಿದೆ. ಉಳಿದ ಶೇ.35ರಷ್ಟು ನೆರೆ ರಾಜ್ಯಗಳ ಪಾಲಾಗಿದೆ. ಜಲಾಶಯದಲ್ಲಿ ಹೆಚ್ಚಿನ ನೀರನ್ನು ಕೆರೆ ಕಟ್ಟೆಗಳನ್ನು ತುಂಬಿಸಿ ನೀರಿನ ಸಮಸ್ಯೆ ಪರಿಹರಿಸಬೇಕು. ರೈತರ ಜೀವನಾಡಿಯನ್ನು ಎಲ್ಲರೂ ಸಂರಕ್ಷಿಸಬೇಕು ಎಂದು ಹೇಳಿದರು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಮಾತನಾಡಿ, ತುಂಗಭದ್ರಾ ಜಲಾಶಯ ರಾಜ್ಯ ಹಾಗೂ ನೆರೆ ರಾಜ್ಯಗಳಿಗೆ ಜೀವನಾಡಿಯಾಗಿದೆ. ಜಲಾಶಯದಲ್ಲಿ ಸುಮಾರು 33 ಟಿಎಂಸಿ ಅಡಿ ಹೂಳು ತುಂಬಿದೆ. ಇದನ್ನು ತೆರವುಗೊಳಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕಿದೆ. ಇದರಿಂದ ಸಾವಿರಾರು ರೈತರ ಜಮೀನುಗಳಿಗೆ ನೀರು ದೊರಕಲಿದೆ. ಜಲಾಶಯದಿಂದ ನೀರು ಬಿಡುವ ವಿಚಾರದಲ್ಲಿ ತಜ್ಞರಿಂದ ಸಲಹೆ-ಸೂಚನೆ ಪಡೆಯುವ ಅಗತ್ಯವಿದೆ ಎಂದರು.
ಕೊಟ್ಟೂರುಸ್ವಾಮಿ ಮಠದ ಡಾ| ಸಂಗನಬಸವ ಸ್ವಾಮೀಜಿ ಉದ್ಘಾಟಿಸಿದರು. ತುಂಗಭದ್ರಾ ಜಲಾಶಯದಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳಾದ ವಿ.ಪಿ. ಉದ್ದಿಹಾಳ, ಕೆ. ಗೋವಿಂದಲು, ಕೆ. ಚನ್ನಪ್ಪ, ವಿ. ವೀರಶಯ್ಯ, ಜಿ. ಚನ್ನಬಸಪ್ಪ, ರಾಮರಾವು ಅವರನ್ನು ರೈತ ಸಂಘದಿಂದ ಸನ್ಮಾನಿಸಲಾಯಿತು. ಹಗರಿಬೊಮ್ಮನಹಳ್ಳಿಯ ಶ್ರೀ ನಂದಿಪುರ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಭಾಗವಹಿಸಿದ್ದರು.
ಸರ್| ವಿಶ್ವೇಶ್ವರಯ್ಯರಿಂದ ದೋಷ ಪರಿಹಾರ1860ರಿಂದ ತುಂಗಭದ್ರಾ ಜಲಾಶಯದ ನಿರ್ಮಾಣದ ಯೋಜನೆ ರೂಪಿಸಿದ್ದು, 1933ರಲ್ಲಿ ನಿರ್ಮಾಣಕ್ಕೆ ನಿರ್ಧರಿಸಲಾಯಿತು. ಆಗ ಸುಮಾರು 12 ವರ್ಷಗಳ ಕಾಲ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ನಂತರ 1945ರಲ್ಲಿ ಜಲಾಶಯ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಲಾಯಿತು. ನಿರ್ಮಾಣ ಹಂತದಲ್ಲಿ ತಾಂತ್ರಿಕ ದೋಷದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದನ್ನು ಕಂಡು ಸ್ಥಳಕ್ಕೆ ಎಂಜಿನಿಯರ್ ಸರ್| ಎಂ. ವಿಶ್ವೇಶ್ವರಯ್ಯ ಅವರನ್ನು ಕರೆಸಲಾಗಿತ್ತು. ಅವರು ದೋಷವನ್ನು ಪರಿಹರಿಸಿದರು. ನಂತರ 1953ರಲ್ಲಿ ಜಲಾಶಯ ಕಾಮಗಾರಿ ಸಂಪೂರ್ಣ ಮುಗಿದು ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆ ಸೇರಿದಂತೆ ಆಂಧ್ರದ ವಿವಿಧ ಜಿಲ್ಲೆಗಳ ಜನತೆಯ ಬಳಕೆಗೆ ಸಮರ್ಪಿಸಲಾಯಿತು.
•ಡಾ| ಎಚ್. ಮಹಾಬಲೇಶ್ವರ, ಉಪನ್ಯಾಸಕ