Advertisement

ತಂತ್ರಜ್ಞರನ್ನು ಸೃಷ್ಟಿಸುವ ಶಕ್ತಿ ಶಿಕ್ಷಕರಿಗಿದೆ

03:30 PM Sep 06, 2019 | Naveen |

ಬಳ್ಳಾರಿ: ಶಿಕ್ಷಕ ವೃತ್ತಿಯು ಅತ್ಯಂತ ಶ್ರೇಷ್ಠವಾಗಿದ್ದು, ಸಮಾಜದ ಎಲ್ಲ ಬಗೆಯ ತಂತ್ರಜ್ಞರನ್ನು ಸೃಷ್ಟಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಆರ್‌ವೈಎಂಇಸಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜೆ.ಎಸ್‌. ಬಸವರಾಜ್‌ ಹೇಳಿದರು.

Advertisement

ನಗರದ ರಾವ್‌ ಬಹದ್ದೂರ್‌ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣ ಪಡೆಯಬೇಕಿದೆ. ಗುಣಮಟ್ಟದ ಶಿಕ್ಷಣವಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಇನ್ನೂ ಹೆಚ್ಚು ಶ್ರಮಿಸಬೇಕು. ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಪ್ರಾಧ್ಯಾಪಕರೂ, ಈ ಪುಣ್ಯದ ವೃತ್ತಿಯನ್ನು ನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ನಿಮ್ಮ ಎಲ್ಲ ಜ್ಞಾನವನ್ನು ಧಾರೆ ಎರೆಯುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗಬೇಕು ಎಂದು ಕೋರಿದರು.

ಕಾಲೇಜಿನ ಪ್ರಾಚಾರ್ಯ ಡಾ| ಕುಪ್ಪಗಲ್ ವೀರೇಶ್‌ ಮಾತನಾಡಿ, ಪ್ರೊ. ರಾಧಾಕೃಷ್ಣರವರ ನೆನಪಿಗಾಗಿ ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಸೆ. 5ರಂದು ಆಚರಿಸಲಾಗುತ್ತಿದೆ. ದೇಶ, ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಇಂತಹ ಶ್ರೇಷ್ಠ ಶಿಕ್ಷಕರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಅವರ ತತ್ವ, ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲೂ ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಉಪ ಪ್ರಾಚಾರ್ಯ ಡಾ| ಹನುಮಂತರೆಡ್ಡಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅನಾದಿ ಕಾಲದಿಂದಲೂ ಶ್ರೇಷ್ಠ ಗೌರವವನ್ನು ನೀಡಲಾಗಿದೆ. ಇಂತಹ ಗುರು ಪರಂಪರೆಯ ಕಾರಣದಿಂದಾಗಿ ಭಾರತ ಇಂದು ಅತ್ಯಂತ ವೇಗದ ಅಭಿವೃದ್ಧಿ ರಾಷ್ಟ್ರವಾಗಿ ದಾಪುಗಾಲಿಡುತ್ತಿದೆ ಎಂದು ತಿಳಿಸಿದರು.

ಹಿರಿಯ ಪ್ರಾಧ್ಯಾಪಕರಾದ ಡಾ| ಗಿರೀಶ್‌, ಡಾ| ವೀರಗಂಗಾಧರ ಸ್ವಾಮಿ ಮಾತನಾಡಿದರು. ಇದೇ ವೇಳೆ ಪ್ರಾಧ್ಯಾಪಕರಾದ ಡಾ| ಸಾಯಿಮಾಧವಿ, ಡಾ| ಚಿದಾನಂದ, ಡಾ| ಸ್ವಪ್ನಾ ಕುಲಕರ್ಣಿ, ಶ್ವೇತಾ ರಮಣ, ರಾಜೇಶ್ವರಿ, ಅಪರ್ಣಾ, ನಾಗೇಶ ಬಾಬು, ಸುನೀತ, ರಘು ಕುಮಾರ, ಶಿವಕುಮಾರ, ಜಿ.ಎಂ.ಜಗದೀಶ, ಶಿವಪ್ರಸಾದ, ಲಿಂಗರಾಜ, ಸುರೇಶ, ನವೀನ್‌, ರೋಷನ್‌, ಪ್ರಸನ್ನಕುಮಾರ, ವಿದ್ಯಾರ್ಥಿಗಳಾದ ಸುಶ್ರಾವ್ಯ, ಅಲೈಕ್ಯ, ನಿಹಾರಿಕ, ಸ್ವಾತಿ, ಪ್ರತಿಭ, ಮೌನಿಕ, ಶರಣ್‌, ಮಹಾಂತೇಶ, ಶ್ರುತಿ, ಪೂಜಾ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next