Advertisement

ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆ ಸರಳೀಕರಣ

04:36 PM Nov 08, 2019 | Naveen |

ಬಳ್ಳಾರಿ: ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಕೆಯ ವಿಧಾನವನ್ನು ಇ-ಆಡಳಿತ ಇಲಾಖೆಯು ಸರಳೀಕರಣಗೊಳಿಸಿದೆ.

Advertisement

ಇದಕ್ಕಾಗಿ ಸ್ಟೇಟ್‌ ಸ್ಕಾಲರ್‌ಷಿಪ್‌ ಪೋರ್ಟಲ್‌ ಅಭಿವೃದ್ಧಿಪಡಿಸಲಾಗಿದ್ದು, ವಿದ್ಯಾರ್ಥಿಗಳು ಈ ಹಿಂದೆ ಅರ್ಜಿ ಸಲ್ಲಿಸಿದ ಬಳಿಕ ದೃಢೀಕೃತ ಪ್ರತಿಗಳನ್ನು ಸಲ್ಲಿಸುತ್ತಿದ್ದ ಪದ್ಧತಿ ಕೈಬಿಡಲಾಗಿದೆ.

ಪರ್ಯಾಯವಾಗಿ ಇ-ಅಟೆಸ್ಟೇಷನ್‌ ಸೌಕರ್ಯ ಕಲ್ಪಿಸಲಾಗಿದೆ ಎಂದು ಜಿಪಂ ಸಿಇಒ ನಿತೀಶ್‌ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಈ ಕುರಿತು ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರೊಂದಿಗೆ ವಿಡಿಯೋ ಸಂವಾದದ ಬಳಿಕ ವಿವಿಧ ಇಲಾಖೆಗಳು, ವಿಶ್ವ ವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳ ಅ ಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಆಯುಷ್‌ ಇಲಾಖೆಗಳ ಮೂಲಕ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಷಿಪ್‌ ನೀಡಲಾಗುತ್ತಿದೆ. ಕರ್ನಾಟಕದ ನಿವಾಸಿಯಾಗಿರುವ ಆಯಾ ಪ್ರವರ್ಗಗಳಿಗೆ ನಿಗದಿ ಮಾಡಲ್ಪಟ್ಟಿರುವ ವಾರ್ಷಿಕ ಆದಾಯದ ಮಿತಿಯೊಳಗೆ ಆರ್ಥಿಕ ಉತ್ಪನ್ನ ಹೊಂದಿರುವವರು ಅರ್ಜಿಗಳನ್ನು ಸಲ್ಲಿಸಬಹುದು.

ಕ್ಷಣ ಸಂಸ್ಥೆಗಳ ಪ್ರಾಚಾರ್ಯರು ಮತ್ತು ಇ-ಅಟೆಸ್ಟೆಷನ್‌ ಪ್ರಾಧಿಕಾರಿಗಳಿಗೆ ಜಿಲ್ಲಾಮಟ್ಟದಲ್ಲಿ ತರಬೇತಿ ಏರ್ಪಡಿಸಿ ಎಸ್‌ ಎಸ್‌ಪಿ ಪೋರ್ಟಲ್‌ ಬಳಕೆಯ ವಿಧಾನಗಳ ಮಾಹಿತಿ ಒದಗಿಸಲಾಗುವುದು.

Advertisement

ಇ-ಅಟೆಸ್ಟೆಷನ್‌:ವಿದ್ಯಾರ್ಥಿಗಳು ಈ ಹಿಂದೆ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ದಾಖಲೆಗಳ ಮುದ್ರಿತ ಪ್ರತಿಗಳನ್ನು ದೃಢೀಕರಿಸಿ ಸಲ್ಲಿಸಬೇಕಾಗುತ್ತಿತ್ತು. ಈಗ ಪದ್ಧತಿ ಸರಳಗೊಳಿಸಲಾಗಿದ್ದು https://ssp.karnataka.gov.in ಅಂತರ್ಜಾಲ ವಿಳಾಸಕ್ಕೆ ಭೇಟಿ ನೀಡಿ, ಆಯಾ ಶಿಕ್ಷಣ ಸಂಸ್ಥೆಗಳಲ್ಲಿರುವ ಇ-ಅಟೆಸ್ಟೆಷನ್‌ ಪ್ರಾಧಿಕಾರಿಗಳ ಮೂಲಕ ವ್ಯಾಸಂಗ ಪ್ರಮಾಣ ಪತ್ರ, ಶುಲ್ಕ ರಸೀದಿ, ಹಾಸ್ಟೇಲ್‌ ವಸತಿ ಪ್ರಮಾಣ ಪತ್ರ, ಅಂಕ ಪಟ್ಟಿಗಳು, ಆದಾಯ ಪ್ರಮಾಣ ಪತ್ರ ಮತ್ತು, ರಕ್ಷಣಾ ಸಿಬ್ಬಂದಿ ಮಕ್ಕಳ ಪ್ರಮಾಣ ಪತ್ರಗಳನ್ನು ಶಿಕ್ಷಣ ಸಂಸ್ಥೆಯ ಕಂಪ್ಯೂಟರ್‌ ಕೇಂದ್ರಗಳ ಮೂಲಕವೇ ಆನ್‌ಲೈನ್‌ನಲ್ಲಿ ದೃಢೀಕರಿಸಿ ಕಳಿಸಬೇಕು. ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 080-44554455 ಸಂಪರ್ಕಿಸಬಹುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಬ್ಯಾಂಕ್‌ನಲ್ಲಿ ಖಾತೆ ಆರಂಭಿಸಲು ಬಂದಾಗ ಹಣವನ್ನು ಯಾವುದೇ ಕಾರಣಕ್ಕೂ ಕೇಳಕೂಡದು; ಅವರ ಹೆಸರಿನಲ್ಲಿ ಜೀರೋ ಅಕೌಂಟ್‌ ಆರಂಭಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಲೀಡ್‌ಬ್ಯಾಂಕ್‌ ಪ್ರತಿನಿಧಿಯೊಬ್ಬರಿಗೆ ಸೂಚಿಸಿದರು. ಈ ಕುರಿತು ಎಲ್ಲ ಬ್ಯಾಂಕ್‌ಗಳಿಗೆ ಸೂಚಿಸುವಂತೆ ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ್‌ ಬಿದರಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿ ಕಾರಿ ಶುಭಾ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಪಿಯು ಉಪನಿರ್ದೇಶಕ ನಾಗರಾಜಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next