ಬಳ್ಳಾರಿ: ಅಂತಾರಾಜ್ಯಗಳ ಜೀವನಾಡಿ ಯಾಗಿರುವ ತುಂಗಭದ್ರಾ ಜಲಾಶಯದಿಂದ ಈ ಬಾರಿಯೂ ಮುಂಗಾರು ಹಂಗಾಮು ಬೆಳೆಗೆ ನೀರು ದೊರೆಯುವುದು ಅನುಮಾನವಾಗಿದೆ.
Advertisement
ಜುಲೈ ತಿಂಗಳು ಕಳೆಯುತ್ತಿದ್ದು, ಈ ವರೆಗೂ ಜಲಾನಯನ ಪ್ರದೇಶದಲ್ಲಿ ಸಮರ್ಪಕವಾಗಿ ನಿರಂತರ ಮಳೆಯಾಗದ್ದರಿಂದ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದ ನೀರು ಹರಿದು ಬಂದಿಲ್ಲ. ಅಲ್ಲದೆ ಒಳಹರಿವಿನ ಪ್ರಮಾಣವೂ ಕುಸಿದಿದ್ದು, ಮಳೆ ಬಾರದಿದ್ದಲ್ಲಿ ಸಮಸ್ಯೆ ಉಲ್ಬಣಗೊಳ್ಳಲಿದೆ. ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ 6 ಜಿಲ್ಲೆಗಳ ಒಟ್ಟು 12 ಲಕ್ಷ ಎಕರೆಗೂ ಹೆಚ್ಚು ಜಮೀನುಗಳಿಗೆ ಮತ್ತು ಜನರಿಗೆ ಕುಡಿಯುವ ನೀರು ಪೂರೈಸುತ್ತದೆ. ಜಲಾನಯನ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ತುಂಗಾ ಜಲಾಶಯದಿಂದಲೂ ನದಿಗೆ ಹರಿದುಬರುವ ನೀರಿನ ಪ್ರಮಾಣ ಕುಸಿದಿದೆ. ಜುಲೈ ತಿಂಗಳು ಮುಗಿಯುತ್ತಿದ್ದರೂ ಜಲಾಶಯಕ್ಕೆ ಗರಿಷ್ಠ ಪ್ರಮಾಣದ ನೀರು ಹರಿದು ಬರುತ್ತಿಲ್ಲ. ಹೀಗಾಗಿ ಈ ಬಾರಿ ಮುಂಗಾರು ಬೆಳೆಗೆ ಜಲಾಶಯದಿಂದ ನೀರು ದೊರಕುವುದು ಅನುಮಾನ ಎನ್ನಲಾಗುತ್ತಿದ್ದು ರೈತರನ್ನು ಆತಂಕಕ್ಕೀಡು ಮಾಡಿದೆ.
50 ಟಿಎಂಸಿ ನೀರು ಬೇಕು
ಒಂದು ಹಂಗಾಮಿನ ಬೆಳೆಗೆ ನೀರು ಕೊಡಲು ಜಲಾಶಯದಲ್ಲಿ ಕನಿಷ್ಠ 40 ರಿಂದ 50 ಟಿಎಂಸಿ ನೀರು ಲಭ್ಯವಿರಬೇಕು. 2017ರಲ್ಲಿ ಸಮರ್ಪಕ ಮಳೆಯಾಗದಿದ್ದರೂ, ಜುಲೈ ತಿಂಗಳ ಮೂರನೇ ವಾರದೊಳಗೆ 20 ರಿಂದ 25 ಟಿಎಂಸಿ ನೀರು ಹರಿದು ಬಂದಿತ್ತು. ಆಗಸ್ಟ್ ತಿಂಗಳೊಳಗಾಗಿ 40 ಟಿಎಂಸಿಗೂ ಹೆಚ್ಚು ನೀರು ಹರಿದು ಬಂದಿತ್ತು. ಆಗ ಆಗಸ್ಟ್‌ನಲ್ಲಿ ಐಸಿಸಿ ಸಭೆ ನಡೆಸಿ ಸೆಪ್ಟೆಂಬರ್ ತಿಂಗಳಲ್ಲಿ ಕಾಲುವೆಗೆ ನೀರು ಹರಿಸಲಾಯಿತು. ಆದರೆ ಈ ಬಾರಿ ಸದ್ಯ ಸಂಗ್ರಹವಿರುವ 14.30 ಟಿಎಂಸಿ ನೀರು ಆರು ಜಿಲ್ಲೆಗಳ ಜನರಿಗೆ ಕುಡಿಯಲೂ ಸಾಲುವುದಿಲ್ಲ.
•ಮಂಜಪ್ಪ,
ಮುಖ್ಯ ಅಭಿಯಂತರರು, ಟಿಬಿ ಮಂಡಳಿ