Advertisement

ಕಾಮಗಾರಿ ಅನುಷ್ಠಾನ ಪರಿಶೀಲನೆ

12:44 PM Nov 30, 2019 | Naveen |

ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾಮಗಾರಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿ ಸಿದಂತೆ ತಿಂಗಳವಾರು ಆರ್ಥಿಕ ಮತ್ತು ಭೌತಿಕ ಗುರಿ ನಿಗದಿಪಡಿಸಿ ಪರಿಶೀಲಿಸಲಾಗುತ್ತಿದೆ ಎಂದು ಪ್ರಾದೇಶಿಕ ಆಯುಕ್ತ ಸುಭೋದ್‌ ಯಾದವ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ತಿಂಗಳ ಅರ್ಥಿಕ ಹಾಗೂ ಭೌತಿಕ ಗುರಿ ನಿಗದಿಪಡಿಸಿ ಏಜೆನ್ಸಿವಾರು ಕೆಕೆಆರ್‌ಡಿಬಿ ವತಿಯಿಂದಲೇ ನೀಡಲಾಗಿದೆ. ನಿಗದಿಪಡಿಸಿದ ಗುರಿಯನ್ನು ಕಾಮಗಾರಿ ಅನುಷ್ಠಾನ ಮಾಡುವ ಏಜೆನ್ಸಿಗಳು ಕಡ್ಡಾಯವಾಗಿ ಮಾಡುವಂತೆ ಅವರು ಖಡಕ್‌ ಸೂಚನೆ ನೀಡಿದರು.

ಇದಕ್ಕೆ ಸಂಬಂಧಿ ಸಿದಂತೆ ಪ್ರತಿ ತಿಂಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರಗತಿ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದ ಅವರು ಕಾಮಗಾರಿ ಅನುಷ್ಠಾನಗೊಳಿಸುವಲ್ಲಿ ಪ್ರಗತಿ ಸಾಧಿಸದೇ ಇರುವ ಜಿಲ್ಲೆಗಳ ಜಿಲ್ಲಾಧಿ ಕಾರಿಗಳಿಗೆ ಮತ್ತು ಜಿಪಂ ಸಿಇಒ ಅವರಿಗೆ ನೋಟಿಸ್‌ ಕೂಡ ಬಂದಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಕಾಮಗಾರಿಗಳು ಅನುಷ್ಠಾನಗೊಳಿಸಿ ಬಿಲ್‌ಗ‌ಳನ್ನು ಸಲ್ಲಿಸುವುದು ಮತ್ತು ಪ್ರಗತಿ ಸಾ ಧಿಸುವುದು ಏಜೆನ್ಸಿಗಳ ಕರ್ತವ್ಯ. ಇದ್ಯಾವುದು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಪಂ ಸಿಇಒ ಅವರಿಗೆ ಸಂಬಂ ಧಿಸಿದಲ್ಲ; ಅವರೇಕೇ ನೋಟಿಸ್‌ಗೆ ಉತ್ತರಿಸಬೇಕು ಎಂದು ಪ್ರಶ್ನಿಸಿದರು. ಕಾಮಗಾರಿ ಅನುಷ್ಠಾನಗೊಳಿಸುವಾಗ ಮುಖ್ಯ ಏಜೆನ್ಸಿಗಳಾದ ಲೋಕೋಪಯೋಗಿ, ಪಂಚಾಯತ್‌ರಾಜ್‌ ಎಂಜನಿಯರಿಂಗ್‌, ಕೆಆರ್‌ ಐಡಿಎಲ್‌, ನಿರ್ಮಿತಿ ಕೇಂದ್ರ, ಪಿಎಂಜಿಎಸ್‌ವೈಗಳು ಪ್ರಗತಿಯನ್ನು ಸುಧಾರಿಸಿಕೊಳ್ಳಬೇಕು. ಅಂದಾಗ ಮಾತ್ರ ಗುರಿ ತಲುಪಲು ಮತ್ತು ಸಣ್ಣಪುಟ್ಟ ಏಜೆನ್ಸಿಗಳ ಪ್ರಗತಿ ಸಾಧರಣವಾಗಿದ್ದರೂ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.

2019-20ರಲ್ಲಿ ಲೋಕೋಪಯೋಗಿ ಇಲಾಖೆಯ 16 ಕಾಮಗಾರಿಗಳ ಆಡಳಿತಾತ್ಮಕ ಅನುಮೋದನೆ ಕಾರಣ ಬಾಕಿ ಇವೆ, ಅಂದಾಜುಪಟ್ಟಿ ಸಿದ್ದಪಡಿಸುವಲ್ಲಿ ತಡವಾದ ಕಾರಣ ಈ ಸಮಸ್ಯೆಯಾಗಿದೆ ಎಂಬ ಅಂಶವನ್ನು ಲೋಕೋಪಯೋಗಿ ಕಾರ್ಯಪಾಲಕ ಎಂಜನಿಯರ್‌ ಅಬ್ದುಲ್‌ ವಹಾಬ್‌ ಅವರು ಪ್ರಾದೇಶಿಕ ಆಯುಕ್ತರ ಪ್ರಶ್ನೆಗೆ ಉತ್ತರಿಸಿದರು.

Advertisement

ಸಭೆಗೆ ಸಾರ್ವಜನಿಕರನ್ನು ಕರೆಸಿದಾಗ ನೈಜತೆ ಸ್ಪಷ್ಟ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಅಸಮರ್ಪಕ ಉತ್ತರ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ನೈಜ ಸಮಸ್ಯೆಗಳ ಅರಿವಾಗಬೇಕಾದರೇ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಸಾರ್ವಜನಿಕರನ್ನು ಆಹ್ವಾನಿಸಬೇಕು. ಅಂದಾಗಲೇ ನೈಜ ಸಮಸ್ಯೆ ಗೊತ್ತಾಗುವುದು. ಅಧಿಕಾರಿಗಳಲ್ಲಿ ಬದ್ಧತೆ ಕೊರತೆ ಕಾರಣ ಕಾಮಗಾರಿಗಳ ಅನುಷ್ಠಾನ ವಿಷಯದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ಪ್ರಾದೇಶಿಕ ಆಯುಕ್ತ ಸುಬೋದ್‌ ಯಾದವ್‌ ಅಸಮಾಧಾನ ವ್ಯಕ್ತಪಡಿಸಿದರು.

2016-17ನೇ ಸಾಲಿನ 2017-18ನೇ ಸಾಲಿನ ಕಾಮಗಾರಿಗಳ ಪ್ರಗತಿಯನ್ನು ಸಹ ಅವರು ಪರಿಶೀಲಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ಜಿಪಂ ಸಿಇಒ ಕೆ.ನಿತೀಶ್‌, ಪ್ರೊಬೆಷನರಿ ಐಎಎಸ್‌ ಈಶ್ವರ್‌ ಕಾಂಡೂ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಠಾನ ಏಜೆನ್ಸಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next