Advertisement

ಶಾಸಕ ಸೋಮಶೇಖರ ರೆಡ್ಡಿ ಬಂಧನಕ್ಕೆ ಆಗ್ರಹ

12:55 PM Jan 06, 2020 | Team Udayavani |

ಬಳ್ಳಾರಿ: ಸಿಎಎ, ಎನ್‌ಆರ್‌ಸಿ ಜಾಗೃತಿ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿಯ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿಯವರನ್ನು ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ, ಎಸ್‌ಪಿಯವರಿಗೆ ಸೋಮವಾರ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು ತಿಳಿಸಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟಪಡಿಸಿದ ವಿಧಾನ ಪರಿಷತ್‌ ಸದಸ್ಯರಾದ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಸದಸ್ಯ ನಾಸೇರ್‌ ಹುಸೇನ್‌, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಇತರೆ ಮುಖಂಡರು,
ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೋಮುಗಲಭೆ ಸಂಭವಿಸಿಲ್ಲ. ಇಲ್ಲಿನ ಎಲ್ಲ ಧರ್ಮೀಯರು ಕೋಮು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ.

ಇಂಥ ಸಮಯದಲ್ಲಿ ಸಾಮಾಜಿಕ ಶಾಂತಿ ಕದಡುವ ಕೆಲಸ ಮಾಡುವುದರ
ಹಿಂದಿರುವ ಉದ್ದೇಶ ಏನು? ಎಂದು ಅವರು ಪ್ರಶ್ನಿಸಿದರು. ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಮಾತನಾಡಿ, ನಾಗರಿಕ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ
ಜನಸಂಖ್ಯಾ ನೋಂದಣಿ ಅಭಿಯಾನದ ಪರ ಬಿಜೆಪಿ ಹಮ್ಮಿಕೊಂಡಿದ್ದ ಮೆರವಣಿಗೆಯ ಬಹಿರಂಗ ಸಭೆಯಲ್ಲಿ ಶಾಸಕ ಸೋಮಶೇಖರ ರೆಡ್ಡಿ ಅಲ್ಪಸಂಖ್ಯಾತರನ್ನು ಹಿಯ್ನಾಳಿಸಿ
ಮಾತನಾಡಿದ್ದಾರೆಂದು ಅವರು ಹೇಳಿದರು.

ಈ ಕುರಿತು ಈಗಾಗಲೇ ಪೊಲೀಸ್‌ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಆದರೆ ಈವರೆಗೆ ಸೋಮಶೇಖರ ರೆಡ್ಡಿಯವರನ್ನು ಬಂ ಧಿಸಿಲ್ಲ. ಈ ಹಿಂದೆ ಮಂಗಳೂರಿನ ನಮ್ಮ ಶಾಸಕ ಯು.ಟಿ. ಖಾದರ್‌ ವಿರುದ್ಧ ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡರು. ಆದರೆ ಶಾಂತಿ ಕದಡುವಂತೆ ಮಾತನಾಡಿದರೂ ಶಾಸಕ ಸೋಮಶೇಖರರೆಡ್ಡಿ ವಿರುದ್ಧ ಮಾತ್ರ ಪೊಲೀಸರು ಮೃಧು ಧೋರಣೆ ತೋರುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಮಾತನಾಡಿ, ಬಳ್ಳಾರಿಮಟ್ಟಿಗೆ ಹೊಸ ವರ್ಷ ದುಃ ಖದಿಂದ ಪ್ರಾರಂಭವಾಗಿದೆ. ಶಾಸಕ ಸೋಮಶೇಖರ ರೆಡ್ಡಿ ಪ್ರತಿ ಹಂತದಲ್ಲಿ
ಅಸಂವಿಧಾನಿಕ ಪದ ಬಳಕೆಮಾಡಿದ್ದಾರೆ ಎಂದು ಕಿಡಿಕಾರಿದರು. ಖಡ್ಗ ಹಿಡಿದು ಬರ್ತೀನಿ ಅಂದ್ರೆ ಏನು ಅರ್ಥ. ರುಂಡ ಕಡಿತೀವಿ ಅಂತಾನಾ? ಅಲ್ಪಸಂಖ್ಯಾತರು ಈ ಹಿಂದೆ ರಾಮುಲು ಅವರು ಬೇರೆ ಪಕ್ಷದಿಂದ ಸ್ಪ ರ್ಧಿಸಿದಾಗ ಅವರನ್ನು ಬೆಂಬಲಿಸಿದ್ದಾರೆ. ಅಂಥ
ಮುಸ್ಲಿಂರ ವಿರುದ್ಧ ಏಕೆ ಈ ದ್ವೇಷ. ಅಂಬೇಡ್ಕರ್‌ ಆಶಯದಂತೆ ನಾವು ನಡೆದುಕೊಳ್ಳಬೇಕು. ಕೋಮುವಾದಿ ಮಾತು ಆಡೋದು ಸರಿಯಲ್ಲ ಎಂದು
ಅವರು ಹೇಳಿದರು.

Advertisement

ಮಾಜಿ ಶಾಸಕ ಸೂರ್ಯ ನಾರಾಯಣ ರೆಡ್ಡಿ ಮಾತನಾಡಿ, ಮುಸ್ಲಿಂರು ದೇಶದಲ್ಲಿ
ಇರಬಾರದು ಎಂದು ಸೋಮಶೇಖರ ರೆಡ್ಡಿ ಗಡಗಿ ಚೆನ್ನಪ್ಪ ವೃತ್ತದಲ್ಲಿ ಮಾತನಾಡಿದ್ದಾರೆ. ಇವರು ಅಧಿಕಾರಕ್ಕೆ ಬರುತ್ತಲೇ ಇದೇ ಗಡಗಿ ಚೆನ್ನಪ್ಪ ವೃತ್ತವನ್ನು ಮಾಯ ಮಾಡಿದ ಇವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.

ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ
ಇದ್ದೀವ ಇಲ್ವಾ? ಹಿಂದೆ ಇದೇ ರೀತಿ ಬಿಜೆಪಿ ಶಾಸಕನೊಬ್ಬ ತೊಡೆ ತಟ್ಟಿದಾಗ ನಾವು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದೇವು. ಆಗ ಬಿಜೆಪಿಗರು ಸೋತು ಸುಣ್ಣವಾಗಿದ್ದರು. ಅಂಥವರು ಈಗ ಮತ್ತೆ ಈ ರೀತಿ ಮಾತನಾಡುತ್ತಿದ್ದಾರೆ. ಇದು ಅವರಿಗೆ ಶಾಪವಾಗಲಿದೆ ಎಂದರು.

ಪಕ್ಷದ ಮುಖಂಡರಾದ ಜೆ.ಎಸ್‌. ಆಂಜನೇಯುಲು, ಗೋನಾಳ
ವಿರೂಪಾಕ್ಷ ಗೌಡ, ಜಿಪಂ ಸದಸ್ಯ ಮಾನಯ್ಯ, ಎಲ್‌.ಮಾರೆಣ್ಣ, ಪಿ. ಗಾದೆಪ್ಪ, ವೆಂಕಟೇಶ್‌ ಹೆಗಡೆ, ಪಾಲಿಕೆ ಸದಸ್ಯ ಬೆಣಕಲ್‌ ಬಸವರಾಜ, ಕೊಳಗಲ್ಲು ಅಂಜಿನಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next