Advertisement

ಭ್ರಷ್ಟ ಪಕ್ಷಗಳನ್ನು ಮತದಾರರು ತಿರಸ್ಕರಿಸಲಿ

04:24 PM Apr 19, 2019 | Naveen |

ಹೊಸಪೇಟೆ: ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಈ ಮೂರು ಭ್ರಷ್ಟ ಪಕ್ಷಗಳನ್ನು ಜನತೆ ತಿರಸ್ಕರಿಸಬೇಕು ಎಂದು ಸಿಟಿಜನ್ಸ್‌ ಫಾರ್‌
ಡೆಮಾಕ್ರಸಿ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಕರೆ ನೀಡಿದರು.

Advertisement

ಲೋಕ ಸಭಾ ಚುನಾ ವಣೆ ಅಂಗವಾಗಿ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಆಯೋ ಜಿ ಸಿದ್ದ
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಯುಪಿಎ ಆಡಳಿತದಲ್ಲಿ ನಡೆದ ಹಗರಣಗಳ ಸರಮಾಲೆಯಿಂದ
ಬೇಸತ್ತ ಜನತೆಗೆ ನಾನು ತಿನ್ನಲ್ಲ, ತಿನ್ನುವವರನ್ನೂ ಬಿಡಲ್ಲ ಎಂದು ಹೇಳಿಕೊಂಡು ಬಂದ ಬಿಜೆಪಿ ಭಿನ್ನವಾಗಿ ಕಂಡಿತು. ಆದರೆ ಬಿಜೆಪಿ
ಆಡಳಿತಾವಧಿಯಲ್ಲಿ ಹಲವಾರು ಬಿಜೆಪಿಯ ಸಚಿವರು ಭ್ರಷ್ಟಾಚಾರದ ಆರೋಪಗಳಿಂದ ಮುಕ್ತರಾಗಿ ಜೈಲುಗಳಿಂದ ಹೊರ
ಬರುತ್ತಿರುವುದು, ಬ್ಯಾಂಕ್‌ಗಳಿಗೆ ದ್ರೋಹ ಬಗೆದ ಬಂಡವಾಳಿಗರು ವಿದೇಶಕ್ಕೆ ಪಲಾಯನ ಮಾಡುತ್ತಿರುವುದು, ಇವೆಲ್ಲ ವೂ ಬಿಜೆಪಿ ಭಿನ್ನ ಪಕ್ಷವಲ್ಲ ಎಂದು ಸಾಬೀತುಪಡಿಸಿದೆ ಎಂದು ಆರೋಪಿಸಿದರು.

ಯುವಕರಿಗೆ ಉದ್ಯೋಗದ ಭರವಸೆ ನೀಡಿದ ಪ್ರಧಾನಿ ಮೋದಿ ಯ ವರು ಐದು ವರ್ಷದ ಅವಧಿಯಲ್ಲಿ ಕನಿಷ್ಠ ಉದ್ಯೋಗ ಸೃಷ್ಟಿಸಲಿಲ್ಲ. ಬದಲಾಗಿ ನೋಟ್‌ಬ್ಯಾನ್‌ ಮಾಡುವ ಮೂಲ ಕ ಉದ್ಯೋಗ ನಾಶಕ್ಕೆ ಕಾರಣರಾದರು. ಬಳ್ಳಾರಿ ಲೋಕಸಭಾ ಕ್ಷೇತ್ರದ
ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಅಭ್ಯರ್ಥಿ ಎ.ದೇವದಾಸ್‌ ಅವರನ್ನು ಬೆಂಬಲಿಸಬೇಕು ಮನವಿ ಮಾಡಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ್‌ ಮಾತ ನಾ ಡಿ, ದೇಶದಲ್ಲಿ ಬಂಡವಾಳಶಾಹಿ ಪರವಾದ ರಾಜಕೀಯ ಪಕ್ಷಗಳು ಜನತೆ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಸಂಪೂರ್ಣ ವಿಫ‌ಲವಾಗಿದೆ. ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಕೋಮು ಪ್ರಚೋಧನೆಯನ್ನು ಮಾಡಲಾಗುತ್ತಿದೆ ಎಂದು ದೂರಿ ದರು.

ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ರಾಧಾಕೃಷ್ಟ ಉಪಾಧ್ಯ, ಎಂ.ಎನ್‌.ಮಂಜುಳಾ, ಡಿ.ನಾಗಲಕ್ಷ್ಮೀ,
ಎಚ್‌.ಎರ್ರಿಸ್ವಾಮಿ, ಹುಲುಗಪ್ಪ, ಅಭಿಷೇಕ್‌, ರವಿ ನೇತ್ರಾವತಿ, ದಯಾನಂದ, ಕರಿಯಪ್ಪ ಗುಡಿಮನಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next