Advertisement

ಚುನಾವಣೆ ಬಳಿಕ ಮೈತ್ರಿ ಸರ್ಕಾರ ಪತನ

12:39 PM Apr 14, 2019 | Naveen |

ಮರಿಯಮ್ಮನಹಳ್ಳಿ: ಲೋಕಸಭಾ ಚುನಾವಣೆ ನಂತರ ರಾಜ್ಯ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ರಾಜ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಭವಿಷ್ಯ ನುಡಿದರು.

Advertisement

ಪಟ್ಟಣದ ನಾಣಿಕೆರೆ ವೃತ್ತದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ ಪರ ಮತಯಾಚಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. ಯಾವುದೇ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೆ ಬರುತ್ತಿಲ್ಲ. ರಾಜ್ಯದ ಸಮ್ಮಿಶ್ರ ಸರ್ಕಾರ ಕೇವಲ ಮೂರು ಜಿಲ್ಲೆಗಳ ಸರ್ಕಾರವಾಗಿದೆ ಎಂದು ಟೀಕಿಸಿದ ಅವರು, ಈ ಬಾರಿ ನರೇಂದ್ರ ಮೋದಿಯವರೇ ಪ್ರಧಾನಮಂತ್ರಿಯಾಗಲಿದ್ದಾರೆ. ದೇಶದಲ್ಲಿ
ಬಿಜೆಪಿಯು 300 ಸ್ಥಾನ ಗೆಲ್ಲಲಿದೆ ಎಂದರು.

ನರೇಂದ್ರ ಮೋದಿಯವರು ನಿನ್ನೆ ನಡೆದ ಸಭೆಯಲ್ಲಿ ತುಂಗಭದ್ರಾಜಲಾಶಯಕ್ಕೆ
ಸಮನಾಂತರ ಜಲಾಶಯ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ 24 ಸ್ಥಾನ ಬಿಜೆಪಿ ಗೆಲ್ಲಲು ನಾವೆಲ್ಲರೂ ಶ್ರಮಿಸುವುದಾಗಿ ಪ್ರಧಾನಿಯವರಿಗೆ ಮಾತು ಕೊಟ್ಟಿದ್ದೇವೆ ಎಂದರು.

ಮರಿಯಮ್ಮನಹಳ್ಳಿ ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿರುವ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಜೆಪಿಯ ಕೊಡುಗೆಯಾಗಿದೆ. ತಾವು ಸಂಸದನಾಗಿದ್ದ ವೇಳೆ ಹತ್ತು ಸಾವಿರ ಕೋಟಿ ರೂ. ಅನುದಾನ ತಂದು
ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.

ಅಭ್ಯರ್ಥಿ ವೈ.ದೇವೇಂದ್ರಪ್ಪ ಮಾತನಾಡಿ, ಉತ್ತಮ ಆಡಳಿತ ನಡೆಸಲು ವಿದ್ಯಾಭ್ಯಾಸವೊಂದೇ ಮಾನದಂಡ ಅಲ್ಲ, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬಂತೆ ರೈತರ ,ದುಡಿಯುವ ವರ್ಗಗಳ ತುಳಿತಕ್ಕೊಳಗಾದವರ ನೋವು ಅರ್ಥಮಾಡಿಕೊಂಡು ಅವರಿಗೆ ಸ್ಪಂದಿಸುವ ಗುಣ ಬೇಕಾಗಿದೆ. ಅಂತಹ ಗುಣ ನನ್ನಲ್ಲಿದೆ ಎಂದರು.

Advertisement

ಈ ವೇಳೆ ‌ಮಾಜಿ ಶಾಸಕ ನೇಮಿರಾಜನಾಯ್ಕ, ಮುಖಂಡರಾದ ನರೆಗಲ್‌ ಕೊಟ್ರೇಶ್‌,ಡಿ. ರಾಘವೇಂದ್ರಶೆಟ್ಟಿ, ಬಿ.ಎಂ.ಎಸ್‌.ಪ್ರಕಾಶ, ಪ.ಪಂ.
ಸದಸ್ಯ ನರಸಿಂಹ ಮೂರ್ತಿ, ಶ್ರವಣಕುಮಾರ, ಪಿ.ವಿ.ರಾಘವೇಂದ್ರ,ಲಲಿತಮ್ಮ, ರುದ್ರೇಶ ನಾಯ್ಕ, ಬಂಗಾರಿ ಮಂಜುನಾಥ, ರವಿಕಿರಣ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next