Advertisement

ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ

05:42 PM Apr 13, 2019 | Naveen |

ಬಳ್ಳಾರಿ: ಅನಾದಿ ಕಾಲದಿಂದಲೂ ಭಾರತ ವೈಜ್ಞಾನಿಕ ಅನ್ವೇಷಣೆಯಲ್ಲಿ ಸದಾ ಮುಂದಿದೆ ಎಂದು ಸಂಡೂರಿನ ಸರ್ಕಾರಿ ಪದವಿ ಕಾಲೇಜು ಹಿರಿಯ ಪ್ರಾಧ್ಯಾಪಕ ಎ.ಮಹೇಶ್‌ ಶರ್ಮ ತಿಳಿಸಿದರು.

Advertisement

ನಗರದ ರಾವ್‌ ಬಹದ್ದೂರ್‌ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನಲ್ಲಿ ಶುಕ್ರವಾರದಿಂದ ಆರಂಭವಾದ ಎರಡು ದಿನಗಳ ರಾಜ್ಯ ಮಟ್ಟದ ಪ್ರೊಜೆಕ್ಟ್ ಕಾರ್ಯಾಗಾರ ಹಾಗೂ ಕೋಡೆತಾನ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಾಣಕ್ಯ ಹೇಳಿದಂತೆ ಸಾಧನೆಗೆ ಎದುರಾಗುವ ಸವಾಲುಗಳನ್ನು ಅನುಭವಿಸಿ, ಎದುರಿಸಿದಾಗಲೇ ಮನುಷ್ಯ ಉತ್ತಮ ಪುರುಷನಾಗಲು ಸಾಧ್ಯ. ಅಂತಹ ಸಾಧಕರು ನೀವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ| ಹನುಮಂತರೆಡ್ಡಿ ಮಾತನಾಡಿ, ಡಿಜಿಟಲ್‌ ತಂತ್ರಜ್ಞಾನದಿಂದಾಗಿ, ಹಿಂದಿನ ದಿನಗಳಂತೆ ಕಂಪನಿಗಳ ಕ್ಯಾಂಪಸ್‌ ಸೆಲೆಕ್ಷನ್‌ ಗಳು ಕಾಲೇಜುಗಳಿಗೆ ಸೀಮಿತವಾಗದೇ, ಯಾರು ಬೇಕಾದರೂ ಎಲ್ಲಿಯಾದರೂ ಕುಳಿತು, ಸ್ಪರ್ಧೆಗಳನ್ನು ಎದುರಿಸಬಹುದಾಗಿದೆ.

ಹೀಗಿರುವಾಗ ವಿದ್ಯಾರ್ಥಿಗಳು ಸ್ಪರ್ಧಾತ್ಮಕಾ ಮನೋಭಾವ ಬೆಳೆಸಿಕೊಂಡು, ಸದಾ ಕಾಲ ಅಧ್ಯಯನದಲ್ಲಿ ತೊಡಗಿ ಯಾವುದೇ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಮಟ್ಟಕ್ಕೆ ಜ್ಞಾನವನ್ನು ಸಂಪಾದಿಸಬೇಕು ಎಂದರು. ಐಎಫ್‌ಇಆರ್‌ಪಿಯ ಕಾಲೇಜಿನ ಮುಖ್ಯಸ್ಥೆ ಡಾ| ಅನುರಾಧ ಮಾತನಾಡಿ, ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ತಾಂತ್ರಿಕ ಕೌಶಲ್ಯವನ್ನು ಬಲಗೊಳಿಸುವ ನಿಟ್ಟಿನಲ್ಲಿ ಐಎಫ್‌ಇಆರ್‌ಪಿಯ ಸಹಕಾರವು ಅತ್ಯಂತ ಪ್ರಮುಖವಾಗಿದ್ದು, ಯಾವುದೇ ಶುಲ್ಕವಿಲ್ಲದೆ, ವಿದ್ಯಾರ್ಥಿಗಳ ಸದಸ್ಯತ್ವವನ್ನು ಪಡೆಯುತ್ತಿದೆ. ಈ ಬಾರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳ ಎಂಜಿನಿಯರಿಂಗ್‌, ಡಿಪ್ಲಮೊ, ಪಿಯುಸಿ ಕಾಲೇಜುಗಳ
ವಿದ್ಯಾರ್ಥಿಗಳು ತಾವು ರೂಪಿಸಿರುವ ಪ್ರಾಜೆಕ್ಟ್ ಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಜನಸಾಮಾನ್ಯರ ದಿನನಿತ್ಯದ ಬದುಕಿಗೆ ನೆರವಾಗಬಲ್ಲ ಆವಿಷ್ಕಾರ, ರಾಷ್ಟ್ರದ ಭದ್ರತೆಗೆ ನೆರವಾಗಬಲ್ಲ ರೋಬೋಟ್‌ ತಂತ್ರಜ್ಞಾನ, ರೈತರ ಬದುಕಿಗೆ ಸಹಾಯಕವಾಗಬಲ್ಲ ಹಲವಾರು ಪ್ರಾಜೆಕ್ಟ್ಗಳನ್ನು ಸಿದ್ಧಪಡಿಸಿದ್ದ ವಿದ್ಯಾರ್ಥಿಗಳು ಅವುಗಳ ಬಗ್ಗೆ ವಿವರಿಸಿದರು.

Advertisement

ಕಾರ್ಯಕ್ರಮ ಸಂಯೋಜಕಿ ಶ್ವೇತಾರಮಣ ಕಾರ್ಯಕ್ರಮದಲ್ಲಿ ಭಾಗವಹಿಸಿದ
ಎಲ್ಲಾ ಪ್ರೋಜೆಕ್ಟ್ಗಳ ಮಾಹಿತಿಯನ್ನು ನೀಡಿದರು. ಪ್ರಾಂಶುಪಾಲ ಡಾ|ಕುಪ್ಪಗಲ್‌ ವೀರೇಶ್‌, ಪ್ರಾಧ್ಯಾಪಕ ಡಾ| ಗಿರೀಶ್‌, ಡಾ| ವೀರಗಂಗಾಧರಸ್ವಾಮಿ, ಡಾ| ಸಾಯಿಮಾಧವ, ಜಿ.ಎಂ.ಜಗದೀಶ್‌, ಅಪರ್ಣಾ, ರಘುಕುಮಾರ್‌, ಶಿವಪ್ರಸಾದ, ಪಂಪಾಪತಿ, ಚಿದಾನಂದ್‌, ಶಿವಕುಮಾರ್‌, ಸೆರ್ವರ್‌ ಬೇಗಂ, ರಾಜೇಶ್ವರಿ, ಶ್ರೀದೇವಿ ಮಾಲಿಪಾಟೀಲ್‌, ನಾಗರಾಜ್‌, ಶಿವರಾಜ್‌, ಪ್ರಸನ್ನಕುಮಾರ್‌, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಇದ್ದರು. ರೋಷನ್‌ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಶ್ರೀವೆನ್ನೆಲಾ ಪ್ರಾರ್ಥಿಸಿದರು. ಡಾ| ಗಿರೀಶ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next