ಮತದಾರರ ಬೆಂಬಲದಿಂದಾಗಿ ರಾಜ್ಯದಲ್ಲಿ ಸುಮಾರು 18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಪಿ.ಜಿ.ಆರ್.ಸಿಂಧ್ಯಾ ಭವಿಷ್ಯ ನುಡಿದರು.
Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು 2014ರಚುನಾವಣೆಯಲ್ಲಿ ನೀಡಿದ್ದ ಯಾವುದೇ ಬೇಡಿಕೆ ಈಡೇರಿಸಲು ಸಾಧ್ಯವಾಗಿಲ್ಲ. ಅವರು ಪ್ರಧಾನಿಯಾದ ಬಳಿಕ ಜಾರಿಗೊಳಿಸಿದ ಜಿಎಸ್‌ಟಿಯಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.
ಎಂದು ಕಿಡಿಕಾರಿದರು. ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಒಳ್ಳೆಯ ವ್ಯಕ್ತಿ, ಬುದ್ಧಿವಂತ ರಾಜಕಾರಣಿ. ವಿದ್ಯಾವಂತರಿದ್ದು, ಜಿಲ್ಲೆಯ ಜನರು ಅವರನ್ನು ಆಯ್ಕೆ ಮಾಡಬೇಕು.
ಜಿಲ್ಲೆಯ ಜನರ ಸಮಸ್ಯೆಗಳ ಕುರಿತು ಸಂಸತ್‌ನಲ್ಲಿ
ಧ್ವನಿ ಎತ್ತಲಿದ್ದಾರೆ. ಜಿಲ್ಲೆಯ ಮತದಾರರು ಬಿಜೆಪಿ
ಅವರ ಸುಳ್ಳು ಭರವಸೆಗಳಿಗೆ ಮರುಳಾಗದೆ, ಪ್ರತಿಯೊಬ್ಬರೂ ಅಭಿವೃದ್ಧಿ ನಿರೀಕ್ಷಿಸಿ ಉಗ್ರಪ್ಪ ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
Related Articles
ಎಲ್ಲ ಅಭ್ಯರ್ಥಿಗಳ ಪರ ಪ್ರಾಮಾಣಿಕವಾಗಿ ಕೆಲಸ
ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ, ಅಸಮಧಾನವೂ ಇಲ್ಲ. ರಾಷ್ಟ್ರೀಯ ಪಕ್ಷಗಳು ಅಂದ ಮೇಲೆ ಅಲ್ಪಸ್ವಲ್ಪ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಅವೆಲ್ಲವುಗಳನ್ನು ಬದಿಗೊತ್ತಿ, ದೇಶದ ಅಭಿವೃದ್ಧಿ ನಿರೀಕ್ಷಿಸಿ ಎಲ್ಲರೂ ಒಂದಾಗಿದ್ದೇವೆ. ಏ.21ರಂದು ಜಿಲ್ಲೆಯಲ್ಲಿ ಜಂಟಿಯಾಗಿ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು, ಯಾವ ಮುಖಂಡರು ಭಾಗವಹಿಸಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಜಿಲ್ಲೆ ಸೇರಿದಂತೆ ಎಲ್ಲ ಕಡೆಗಳಲ್ಲೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದ್ದೇವೆ.
Advertisement
ನಮ್ಮ ಎಲ್ಲ ಕಾರ್ಯಕರ್ತರು ಉತ್ಸುಕತೆಯಿಂದಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ. ಉಗ್ರಪ್ಪ
ಅವರ ಗೆಲುವು ನಿಶ್ಚಿತವಾಗಿದ್ದು, ರಾಜ್ಯದ 28 ಕ್ಷೇತ್ರಗಳ ಪೈಕಿ 18ಕ್ಷೇತ್ರಗಳಲ್ಲಿ ಗೆಲುವು ಸಾ ಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಶಿವಪ್ಪ ಮಾತನಾಡಿ, ಮಂಡ್ಯ, ಹಾಸನ, ತುಮಕೂರು ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಲಿದೆ. ಇದರಲ್ಲಿ ಅನುಮಾನ ಬೇಡ, ಅದರಂತೆ ರಾಜ್ಯದ 18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು. ಈ ವೇಳೆ ಮುಖಂಡರಾದ ಮಹ್ಮದ್ ಇಕ್ಬಾಲ್, ಮುನ್ನಾ, ರೋಶನ್, ವಿಜಯಕುಮಾರ್, ಶಾಂತಕುಮಾರ್, ಕಿರಣ್ ಕುಮಾರ್, ಸೋಮಲಿಂಗನಗೌಡ, ಬಂಡೇಗೌಡ, ವಿಜಯಕುಮಾರಿ, ಪುಷ್ಪಾ ಇತರರಿದ್ದರು .