Advertisement

ಮೋದಿ ಸಾಧನೆ ಇಲ್ಲದೆ ಮತ ಕೇಳ್ಳೋದು ನಾಚಿಕೆಗೇಡು

03:51 PM Apr 20, 2019 | Naveen |

ಸಿರುಗುಪ್ಪ: ಐದು ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುವುದು ನ್ಯಾಯ ಸಮ್ಮತ. ಆದರೆ ಮೋದಿಯವರು ಯಾವುದೇ ಸಾಧನೆ ಮಾಡದೆ ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಸಿರುಗುಪ್ಪದಲ್ಲಿ ಶುಕ್ರವಾರ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ್‌ ಹಿಟ್ನಾಳ್‌ ಪರವಾಗಿ ಆಯೋಜಿಸಿದ್ದ ಚುನಾವಣಾ ಪ್ರಚಾರ
ಸಭೆಯಲ್ಲಿ ಮಾತನಾಡಿದ ಅವರು, ‘ಹೊಸಗ್ಲಾಸು, ಹಳೇ ಮದ್ಯ’ ಎಂಬ ಗಾದೆ ಮಾತಿನಂತೆ ಮತ್ತೆ ಮತ್ತೆ ಹೇಳಿದ್ದನ್ನೇ ಪ್ರಧಾನಿ ಮೋದಿಯವರು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಮೋದಿ
ಚೌಕಿದಾರನಲ್ಲ, ಸಾಲಗಾರರು ಓಡಿ ಹೋಗಲು ಸಹಕರಿಸಿದ ಭಾಗಿದಾರ. ಜನರ ಮನಸ್ಸಿನಲ್ಲಿ ಭ್ರಮಲೋಕ ಸೃಷ್ಟಿಸಿದ ದುರಾತ್ಮ. ಇಂತಹ ವ್ಯಕ್ತಿಗೆ ಓಟು ಹಾಕಬೇಡಿ. ಭೀಕರ ಬಲಗಾಲದಿಂದ ರಾಜ್ಯದಲ್ಲಿ ರೈತರು ತತ್ತರಿಸಿದ್ದು, ರೈತರ ಸಾಲಮನ್ನಾ ಮಾಡುವಂತೆ ಅಂಗಲಾಚಿ ಬೇಡಿಕೊಂಡರು ಮನ್ನಾ
ಮಾಡದ ಮೋದಿಯವರು ರೈತರಿಗೆ ಏನು ಉಪಕಾರ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರೈತರ ಸಾಲಮನ್ನಾ ಮಾಡುವಂತೆ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರೆ, ಸಾಲಮನ್ನಾ ಮಾಡಲು
ನನ್ನ ಬಳಿ ನೋಟು, ಮುದ್ರಣ ಮಾಡುವ ಯಂತ್ರವಿಲ್ಲ ಎಂದು ಹೇಳಿದ್ದರು. ರೈತ ವಿರೋಧಿ ಆಡಳಿತ ನಡೆಸಿದ್ದರೂ, ರೈತರ ಪರ ಸರ್ಕಾರ ಎಂದು ಹಸಿರುಶಾಲು ಹಾಕಿಕೊಂಡು ಯಡಿಯೂರಪ್ಪ
ಸೋಗು ಮಾಡುತ್ತಿದ್ದಾರೆ. ಬಿಜೆಪಿಗೆ ಈ ಚುನಾವಣೆಯಲ್ಲಿ ಜನರ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ತಾವೊಬ್ಬರೇ ದೇಶಭಕ್ತ ಎಂದು ಎದೆಯುಬ್ಬಿಸುವ ಮೋದಿಯವರು ಸರ್ಜಿಕಲ್‌ ಸ್ಟ್ರೈಕ್‌ ಆದಾಗ ಸ್ಟೆನ್‌ಗನ್‌ ತಗೊಂಡು ಹೋಗಿದ್ದರ? ಸ್ವತಂತ್ರ
ಭಾರತದಲ್ಲಿ 12 ಸರ್ಜಿಕಲ್‌ ಸ್ಟ್ರೈಕ್‌ ಆಗಿದೆ ಎಂಬುದು ಮೋದಿಗೆ ಗೊತ್ತಲ್ಲ ಎಂದಾವರು ರೈತರ ಸಾಲಮನ್ನಾ ಮಾಡದ, ಯುವಜನರಿಗೆ ಉದ್ಯೋಗ
ಕಲ್ಪಿಸದ, ಮೋದಿಯವರು, ಬಿಜೆಪಿಯನ್ನು ಮನೆಗೆ ಕಳಿಸಿ ಎಂದು ಕರೆ ನೀಡಿದರು.

ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಕೊಪ್ಪಳ ಉಸ್ತುವಾರಿ ಸಚಿವ ಈ.ತುಕಾರಾಂ ಮಾತನಾಡಿ, ಮೇಕ್‌ಇನ್‌ ಇಂಡಿಯಾ ಎನ್ನುವ ಮೋದಿಯವರು ಸರ್ದಾರ್‌ ವಲ್ಲಭ ಭಾಯಿ ಪಾಟೀಲ್‌ ಅವರ ಪ್ರತಿಮೆಯನ್ನು ಚೀನಾದಿಂದ ತಂದಿದ್ದಾರೆ ಎಂದು ಆರೋಪಿಸಿದರು. ಮಾಜಿ ಸಚಿವ ಶಿವರಾಜ್‌ ತಂಗಡಿಗಿ, ಬಸವರಾಜ ರಾಯರೆಡ್ಡಿ, ಮಾಜಿ ಸಂಸದರಾದ ಶಿವರಾಮೆಗೌಡ, ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಬಿ.ಎಂ.ನಾಗರಾಜ, ಟಿ.ಎಂ.
ಚಂದ್ರಶೇಖರಯ್ಯಸ್ವಾಮಿ, ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ, ಸಿಂಧನೂರು ಮಾಜಿ ಶಾಸಕ ಬಾದರ್ಲಿ ಹಂಪನಗೌಡ ಮಾತನಾಡಿದರು.

Advertisement

ನಗರಸಭೆ ಅಧ್ಯಕ್ಷ ಸವಿತಾ ಅರುಣಪ್ರತಾಪರೆಡ್ಡಿ, ಮುಖಂಡರಾದ ಮುರಳಿಕೃಷ್ಣ, ವೆಂಕಟರಾಮರೆಡ್ಡಿ,
ಮಲ್ಲಿಕಾರ್ಜುನ ಬಾಲಪ್ಪ, ಎಚ್‌. ಕೆ.ಮಲ್ಲಿಕಾರ್ಜುನಯ್ಯಸ್ವಾಮಿ, ತಿಮ್ಮಪ್ಪ,
ಗೋಪಾಲರೆಡ್ಡಿ ಮತ್ತು ತಾಲೂಕಿನ ವಿವಿಧ ಗ್ರಾಮಗಳ ಕಾರ್ಯಕರ್ತರು, ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next