Advertisement
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನ. 9ರಿಂದ 11ರ ವರೆಗೆ ಒಟ್ಟು 34 ಸಿಜೇರಿಯನ್ ಹೆರಿಗೆಗಳನ್ನು ನಡೆಸಲಾಗಿದೆ. ಅದರಲ್ಲಿ 7 ಪ್ರಕರಣಗಳು ಕ್ಲಿಷ್ಟಕರವಾಗಿದ್ದವು. ನಾಲ್ಕು ಪ್ರಕರಣಗಳಲ್ಲಿ ಬಾಣಂತಿ ಯರು ಸಾವಿಗೀಡಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಓರ್ವ ಬಾಣಂತಿಯ ಚಿಕಿತ್ಸೆ ಮುಂದುವರಿದಿದೆ. ಸಾವಿನ ಪ್ರಕರಣಗಳಿಗೆ ಜಿಲ್ಲಾಸ್ಪತ್ರೆಯ ತಜ್ಞರ ಮತ್ತು ಇತರ ಸಿಬಂದಿಯ ನಿರ್ಲಕ್ಷ್ಯ ಕಂಡು ಬಂದಿಲ್ಲ. ಗುಣಮಟ್ಟದ ಆರೈಕೆ ನೀಡಿದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತಂಡ ಭಾವಿಸಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿನ ನಾಲ್ವರು ಬಾಣಂತಿಯರ ಸಾವು ಮತ್ತು ಬಿಮ್ಸ್‌ನ ಓರ್ವ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿ ಸಿದಂತೆ ಪರಿಶೀಲಿಸಿ, ಪ್ರತ್ಯೇಕ ವರದಿ ನೀಡುವಂತೆ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ಸೂಚನೆ ನೀಡಿದ್ದು, ಇಂದು ವರದಿ ಸಲ್ಲಿಕೆಯಾಗಲಿದೆ.