Advertisement

ಸಚಿವ ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ

11:15 AM Jul 11, 2019 | Naveen |

ಬಳ್ಳಾರಿ: ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ ಕ್ರಮ ಖಂಡಿಸಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸಚಿವ ಡಿ.ಕೆ.ಶಿವಕುಮಾರ್‌ ಅವರು, ನಮ್ಮ ಶಾಸಕರನ್ನು ಭೇಟಿ ಮಾಡಲು ಮುಂಬಯಿಗೆ ತೆರಳಿದರೇ, ಅಲ್ಲಿನ ಪೊಲೀಸರು ಅವರನ್ನು ತಡೆದು, ಭೇಟಿಗೆ ಅವಕಾಶ ನೀಡದಿರುವುದು ಖಂಡನೀಯ. ನಮ್ಮ ಪಕ್ಷದ ಅತೃಪ್ತ ಶಾಸಕರು ತಂಗಿದ್ದ ಹೋಟೇಲ್ ಬಳಿ ಅಲ್ಲಿನ ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ವರ್ತಿಸಿ, ಭೇಟಿಗೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರೂ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸಂವಿಧಾನದ ವಿರೋಧಿಯಾಗಿದೆ. ಶಾಸನ ಬದ್ಧ ಶಾಸಕರನ್ನು ಖರೀದಿಸಿದ್ದನ್ನು ವಿರೋಧಿಸಿದರೆ ಇದನ್ನೇ ನಮ್ಮ ವಿರುದ್ಧ ನಾನಾ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅತೃಪ್ತಿ ಎಲ್ಲ ಪಕ್ಷಗಳಲ್ಲೂ ಇರುವುದು ಸಾಮಾನ್ಯ.ನಮ್ಮ ಶಾಸಕರು ನಾನಾ ಕಾರಣಗಳಿಂದ ಅಸಮಧಾನಗೊಂಡು ರಾಜೀನಾಮೆ ನೀಡಿದ್ದು, ಅವರನ್ನು ಮನವೊಲಿಸಲು ನಮಗೆ ಅವಕಾಶವೇ ಇಲ್ವೇ. ಅವರು ನಮ್ಮ ಪಕ್ಷದ ಶಾಸಕರು, ನಾವು ಇನ್ನೂ ಕಾಂಗ್ರೆಸ್‌ನಲ್ಲೇ ಇದ್ದೇವೆ, ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆ ಎಂದು ಅವರೇ ಹೇಳಿರುವಾಗ ಅವರನ್ನು ಭೇಟಿ ಮಾಡಲು ಅವಕಾಶ ನೀಡಲು ಅನುಮತಿ ನೀಡದಿರುವುದು ಯಾವ ನ್ಯಾಯ. ಇದು ಬಿಜೆಪಿ ಅವರಿಗೆ ಮುಂದಿನ ದಿನಗಳಲ್ಲಿ ಮುಳುವಾಗಲಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಎ. ಮಾನಯ್ಯ, ಮುಖಂಡರಾದ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್‌.ಆಂಜಿನೇಯಲು, ಪಾಲಿಕೆ ಸದಸ್ಯರಾದ ಕೆರೆಕೋಡಪ್ಪ, ಬಿ.ಕುಮಾರಸ್ವಾಮಿ, ಪರ್ವಿನ್‌ಬಾನು, ಮುಖಂಡರಾದ ಶಿವರಾಜ್‌, ಕಮಲಾ ಮರಿಸ್ವಾಮಿ, ನಾಗರಾಜ್‌ಗೌಡ, ವಿಕ್ಕಿ, ಕೆ.ನಾಗಭೂಷಣ್‌, ಪದ್ಮಾವತಿ, ಬೊಯಪಾಟಿ ವಿಷ್ಣುವರ್ಧನ್‌, ಎಸ್‌.ನಾಗರಾಜ್‌, ಅರುಣ್‌ ಕುಮಾರ್‌, ಅಸುಂಡಿ ಹೊನ್ನೂರಪ್ಪ, ಕುಮಾರಮ್ಮ, ಶಾಂತಮ್ಮ, ಲಕ್ಷ್ಮೀ, ರಾಮುಡು, ರವಿ, ಕಮಲ, ಪ್ರವಲ್ಲಿಕಾ ಸೇರಿದಂತೆ ನೂರಾರು ಕಾರ್ಯಕರ್ತರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next