Advertisement

ನವವೃಂದಾವನ ಧ್ವಂಸಕ್ಕೆ ಖಂಡನೆ

01:03 PM Jul 19, 2019 | Team Udayavani |

ಬಳ್ಳಾರಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಂಗಾವತಿಯ ನವವೃಂದಾವನ ಗಡ್ಡೆಯಲ್ಲಿ ಶ್ರೀ ವ್ಯಾಸರಾಜ ತೀರ್ಥ ಸ್ವಾಮೀಜಿ ಮೂಲ ವೃಂದಾವನವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಬ್ರಾಹ್ಮಣ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು.

Advertisement

ನಗರದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಜಮಾಯಿಸಿದ ಒಕ್ಕೂಟದ ಪದಾಧಿಕಾರಿಗಳು, ಸಮುದಾಯದ ಮುಖಂಡರು, ವಿವಿಧ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನವವೃಂದಾನವದಲ್ಲಿ ಶ್ರೀ ವ್ಯಾಸರಾಜ ತೀರ್ಥ ಸ್ವಾಮೀಜಿ ಅವರ ಮೂಲ ವೃಂದಾವನವನ್ನು ದುಷ್ಕರ್ಮಿಗಳು ಸಂಪೂರ್ಣ ಧ್ವಂಸಗೊಳಿಸಿದ್ದು ಇದು ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಕಿಡಿಕೇಡಿಗಳು ಯಾರೇ ಇರಲಿ ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಆನೆಗುಂದಿಯ ನವವೃಂದಾನವ ಗಡ್ಡೆಯು ಐತಿಹಾಸಿಕ, ಧಾರ್ಮಿಕ ಪವಿತ್ರ ಕ್ಷೇತ್ರವಾಗಿದೆ. ವಿಜಯನಗರ ಸಾಮ್ರಾಜ್ಯದ 5 ಜನ ಮಹಾರಾಜರಿಗೆ ಶ್ರೀವ್ಯಾಸರಾಜ ತೀರ್ಥರು ರಾಜಗುರುಗಳಾಗಿದ್ದರು. ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಪೂರ್ವಾವತಾರರು. ಅಂತಹ ಮನಾಹುಭಾವರ, ಯತಿಗಳ ಮೂಲ ವೃಂದಾವನವನ್ನು ದುಷ್ಕರ್ಮಿಗಳು ಬುಧವಾರ ತಡರಾತ್ರಿ ಧ್ವಂಸಗೊಳಿಸಿರುವುದು ಬಹುದೊಡ್ಡ ದುರಂತ. ಸಮುದಾಯದ ಪ್ರತಿಯೊಬ್ಬರೂ ಇದನ್ನು ಖಂಡಿಸಿ ಹೋರಾಟ ನಡೆಸಬೇಕು ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಪೊಲೀಸ್‌ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸರ್ಕಾರ ಕೂಡಲೇ ಕ್ಷೇತ್ರಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು. ಕೃತ್ಯವೆಸಗಿದ ದುಷ್ಕಮಿಗಳು ಯಾರು? ಯಾತಕ್ಕೆ ನಡೆಸಿದರು? ಎಂಬುದನ್ನು ತನಿಖೆ ನಡೆಸಬೇಕು. ನಿರ್ಲಕ್ಷಿಸಿದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದ‌ರ್ಭದಲ್ಲಿ ಮುಖಂಡರಾದ ಒಕ್ಕೂಟದ ಕಾರ್ಯದರ್ಶಿ ಡಾ| ಬಿ.ಕೆ. ಶ್ರೀಕಾಂತ್‌, ಅಶೋಕ್‌ ಕುಲಕರ್ಣಿ, ಭೀಮರಾವ್‌, ಡಾ| ಅರುಣ್‌, ನ್ಯಾಯವಾದಿ ವಿಜಯಲಕ್ಷ್ಮೀ, ಅನೀಲ್ ಕುಮಾರ್‌, ಡಿ.ಗಿರಿ, ನೇಮಕಲ್ರಾವ್‌, ಹರಿಕುಮಾರ್‌, ಸಿಮೆಂಟ್ ಗಿರಿ, ವಿಷ್ಣು, ಜಯಸಿಂಹ, ಕರಾಟೆ ವಿಜಯ ವಿಠuಲ್, ಡಾ| ಮುಕ್ಕುಂದ್‌ ಸೇರಿದಂತೆ ನೂರಾರು ಮುಖಂಡರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next