Advertisement

8 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ

11:15 AM Jul 05, 2019 | Naveen |

ಬಳ್ಳಾರಿ: ಪ್ರಯಾಣಿಕ ಆಟೋಗಳಲ್ಲಿ 8 ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಆಟೋ ಚಾಲಕರು ನಗರದ ಎಸ್‌ಪಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಹೈಕೋರ್ಟ್‌ ಆದೇಶದ ನೆಪದಲ್ಲಿ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿರುವ ಆಟೋಗಳನ್ನು ಪೊಲೀಸರು ತಡೆದು ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹತ್ತಿಕೊಳ್ಳಲಾಗಿದೆ ಎಂದು ದಂಡ ವಿಧಿಸುತ್ತಿದ್ದಾರೆ. ಆಟೋಗಳನ್ನು ಸೀಜ್‌ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಆಟೋಗಳನ್ನು ಹಿಡಿಯುತ್ತಿರುವ ಪೊಲೀಸರು 6 ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಬೇಕು. 3+1 ವಯಸ್ಕರನ್ನು ಹತ್ತಿಸಿಕೊಳ್ಳಬೇಕು. ಮಿನಿ ಬಸ್‌ಗಳಲ್ಲಿ 11+1 ವಿದ್ಯಾರ್ಥಿಗಳು ಇರಬೇಕು ಎಂದು ಸೂಚಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮಾಡಿದರೆ ಆಟೋ ಚಾಲಕರಿಗೆ ನಷ್ಟವಾಗಲಿದ್ದು, ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಈ ವೇಳೆ ಎಸ್‌ಪಿ ಬಳಿಗೆ ನಿಯೋಗ ತೆರಳಿದ ಆಟೋ ಚಾಲಕರ ಸಂಘದ ಮುಖಂಡರು, ಆಟೋಗಳಲ್ಲಿ 8ರಿಂದ 10 ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡಲ್ಲಿ ಚಾಲಕರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಲು ಪ್ರಯತ್ನಿಸಲಾಯಿತು. ಎಸ್‌ಪಿ ಲಕ್ಷ್ಮಣ ನಿಂಬರಗಿ, ಸುಪ್ರೀಂಕೋರ್ಟ್‌ ಆದೇಶವನ್ನು ಉಲ್ಲಂಘಿಸಲು ಬರಲ್ಲ. ಜತೆಗೆ ಆಟೋ ಚಾಲಕರು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾದರೆ ಶಾಲಾ -ಕಾಲೇಜುಗಳಲ್ಲಿ ಮಕ್ಕಳ ಪೋಷಕರನ್ನು ಸಭೆ ಕರೆದು ನಷ್ಟ ಭರಿಸುವಂತೆ ಮನವರಿಕೆ ಮಾಡಿಕೊಳ್ಳಿ ಎಂದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗುತ್ತದೆ ಎಂದು ವಿವಿಧ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಕೆ.ತಾಯಪ್ಪ, ಜಾನ್‌ ಬಾಸ್ಕೋ, ರಾಜೇಶ್‌ ಹುಂಡೇಕರ್‌ ತಿಳಿಸಿದರು. ಪ್ರತಿಭಟನೆಯಲ್ಲಿ ಆಟೋ ಚಾಲಕರು, ಮಾಲೀಕರು ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next