Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಸಂಬಂಧಿಸಿದ ಜಿಲ್ಲಾ ಟಾಸ್ಕ್ ಫೋರ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
35 ಗ್ರಾಪಂಗಳಲ್ಲಿ ಮನೆ ಕಸ ಸಂಗ್ರಹ: ನಗರಗಳಂತೆ ಗ್ರಾಪಂಗಳ ಮಟ್ಟದಲ್ಲಿಯೂ ಸಹ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವುದಕ್ಕೆ ಬಳ್ಳಾರಿ ಜಿಪಂ ಮುಂದಾಗಿದ್ದು, ಮೊದಲ ಹಂತದಲ್ಲಿ 35 ಗ್ರಾಪಂಗಳಲ್ಲಿ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಉಳಿದ ಗ್ರಾಪಂಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಜಿಪಂ ಸಿಇಒ ಕೆ.ನಿತೀಶ್ ಹೇಳಿದರು. ಗ್ರಾಮದ ಒಳಗಡೆ ಇರುವ ತಿಪ್ಪೆಗುಂಡಿಗಳನ್ನು ತಕ್ಷಣಕ್ಕೆ ತೆರವು ಮಾಡಲು ಆಗದಿದ್ದರೂ ಇನ್ನೂ ಕೆಲ ದಿನಗಳಲ್ಲಿ ಒಂದು ಪ್ಲಾನ್ ಮಾಡಿ ಅವುಗಳನ್ನು ತೆಗೆಯಲಾಗುವುದು ಎಂದರು.
ಇಲಾಖೆಗಳ ಸಹಕಾರ ಅಗತ್ಯ: ಸೊಳ್ಳೆಯಿಂದ ಹರಡುವ ಕಾಯಿಲೆಗಳಾದ ಮಲೇರಿಯಾ, ಡೆಂಘೀ ಮತ್ತು ಚಿಕೂನ್‌ಗುನ್ಯಾದಂತ ಕಾಯಿಲೆಗಳ ನಿಯಂತ್ರಣಕ್ಕೆ ವಿವಿಧ ಇಲಾಖೆಗಳಿಗೆ ತನ್ನದೇಯಾದ ಜವಾಬ್ದಾರಿ ವಹಿಸಲಾಗಿದ್ದು, ಎಲ್ಲ ಇಲಾಖೆಗಳ ಸಮನ್ವಯ ಮತ್ತು ಸಹಕಾರಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದರು.
ಕಳೆದ ವರ್ಷ ಇದೇ ಸಮಯದಲ್ಲಿ 18 ಮಲೇರಿಯಾ ಪ್ರಕರಣಗಳು ದೃಢಪಟ್ಟಿದ್ದವು. ಈ ವರ್ಷ ಇಲ್ಲಿಯವರೆಗೆ 9 ಪ್ರಕರಣಗಳು ದೃಢಪಟ್ಟಿವೆ. ಡೆಂಘೀ ಪ್ರಕರಣಗಳು ಕಳೆದ ವರ್ಷ ಇದೇ ಸಮಯದಲ್ಲಿ 1188 ಸಂಶಯಾಸ್ಪದ ಪ್ರಕರಣಗಳಾಗಿದ್ದವು. ಅದರಲ್ಲಿ 52 ಪ್ರಕರಣಗಳು ಪಾಸಿಟಿವ್ ಎಂದು ದೃಢಪಡಿಸಲಾಗಿತ್ತು. ಈ ವರ್ಷ 1320 ಸಂಶಯಾಸ್ಪದ ಪ್ರಕರಣಗಳಿದ್ದು 33 ಪಾಸಿಟಿವ್ ಎಂದು ದೃಢಪಟ್ಟಿವೆ. ಚಿಕೂನ್‌ಗುನ್ಯಾ ಕಳೆದ ವರ್ಷ 116 ಸಂಶಯಾಸ್ಪದ ಪ್ರಕರಣಗಳಿದ್ದು, ಅದರಲ್ಲಿ 23 ಪಾಸಿಟಿವ್ ಎಂದು ದೃಢಪಟ್ಟಿದ್ದವು. ಈ ವರ್ಷ 21 ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಿದ್ದು 04 ಪಾಸಿಟಿವ್ ಎಂದು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಅಬ್ದುಲ್ಲಾ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಶಿವರಾಜ ಹೆಡೆ ಸೇರಿದಂತೆ ವಿವಿಧ ಆರೋಗ್ಯ ಇಲಾಖೆಗಳ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.