Advertisement
2015-16ನೇ ಸಾಲಿನ ನಬಾರ್ಡ್ ಆರ್.ಐ.ಡಿ.ಎಫ್. -21ರ ಯೋಜನೆ ಅನ್ವಯ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಕಳೆದ ವರ್ಷ ಜುಲೈ ತಿಂಗಳಲ್ಲಿ ಉದ್ಘಾಟನೆಗೊಂಡಿತ್ತು. ಗ್ರಾಮೀಣ ಸಂತೆ ಮಾರುಕಟ್ಟೆಯಾದ ಇಲ್ಲಿ ಇದುವರೆಗೆ ಯಾವುದೇ ಕಾರ್ಯ ಚಟುವಟಿಕೆಗಳು ನಡೆಯದೆ ಹಳೆಯ ಸಂತೆ ಮಾರುಕಟ್ಟೆಯಲ್ಲೇ ವಾರದ ಸಂತೆ ನಡೆಯುತ್ತಿದೆ. ನೂತನ ಕಟ್ಟಡದ ಹೊರ ಭಾಗದ ರಸ್ತೆ ಬದಿಯಲ್ಲೂ ಪ್ರತಿ ಶನಿವಾರ ಸಂತೆ ಮಾರುಕಟ್ಟೆ ನಡೆಯುತ್ತಿದೆ.
ಸುಸಜ್ಜಿತವಾದ ಕಟ್ಟಡ ಹಲವು ತಿಂಗಳುಗಳಿಂದ ಪಾಳು ಬಿದ್ದಿರುವ ಕಾರಣ ಸಾಮಾನ್ಯವಾಗಿಯೇ ಇಲ್ಲಿ ಅನ್ಯ ಚಟುವಟಿಕೆಗಳು ನಡೆಯುತ್ತಿವೆ. ಮದ್ಯಪಾನ ಮಾಡಿದ ವ್ಯಕ್ತಿಗಳು ಮಲಗುವುದು ಮಾಮೂಲಾಗಿದೆ. ಮುಖ್ಯ ರಸ್ತೆ ಬದಿಯಲ್ಲೇ ಇದ್ದರೂ, ನಿರ್ಲಕ್ಷ್ಯದಿಂದಾಗಿ ಪಾಳು ಬೀಳುವಂತಾಗಿದೆ. ಈ ಗ್ರಾಮೀಣ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಎ.ಪಿ.ಎಂ.ಸಿ. ಆರಂಭಿಸಿದಲ್ಲಿ ಆದಾಯದ ಜತೆಗೆ ಕಟ್ಟಡದ ಸದ್ಬಳಕೆಯೂ ಆಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.