ಸುಳ್ಯ: ಬೆಳ್ಳಾರೆ-ನಿಂತಿಕಲ್ಲು ಸಂಪರ್ಕ ರಸ್ತೆಯ ಬೆಳ್ಳಾರೆ ಪೇಟೆ ಸಮೀಪದ ಖಾಸಗಿ ಶಾಲಾ ಬಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಲೈನಿನಿಂದ ಬಿದ್ದ ಕಿಡಿಯಿಂದಾಗಿ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ.
Advertisement
ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿ ಸಮೀಪದ ತೋಟಕ್ಕೂ ಹರಡಿದೆ. ಸ್ಥಳೀಯರೂ ಬೆಂಕಿ ನಂದಿಸುವ ಕಾರ್ಯಕ್ಕೆ ಸಹಕಾರ ನೀಡಿದರು.