Advertisement

 ಬೆಳ್ಳಾರೆ ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆ

04:55 PM Dec 30, 2017 | |

ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್‌ ಜಾಗದಲ್ಲಿ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವಿದ್ದು ಇದರ ಯಥಾಸ್ಥಿತಿ ಕಾಪಾಡುವಂತೆ ಜಿಲ್ಲಾಧಿಕಾರಿ ಗ್ರಾ. ಪಂ.ಗೆ ನೋಟಿಸ್‌ ನೀಡಿರುವುದಕ್ಕೆ ಬೆಳ್ಳಾರೆ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ತೀವ್ರವಾದ ವಿರೋಧ ವ್ಯಕ್ತವಾಯಿತು. ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯು ಪಂಚಾಯತ್‌ ಅಧ್ಯಕ್ಷೆ ಶಕುಂತಲಾ ನಾಗರಾಜ್‌ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್‌ ಸಭಾಭವನದಲ್ಲಿ ನಡೆಯಿತು.

Advertisement

ಸಭೆಯಲ್ಲಿ ಪಂಚಾಯತ್‌ ಪ್ರಭಾರ ಪಿಡಿಒ ಸುನಂದಾ ರೈ ಅವರು ಜಿಲ್ಲಾಧಿಕಾರಿಯಿಂದ ಬಂದ ಪತ್ರವನ್ನು ಓದುತ್ತಿದ್ದಂತೆ ಪಂ. ಸದಸ್ಯರಾದ ನವೀನ್‌ಕುಮಾರ್‌ ರೈ ತಂಬಿನಮಕ್ಕಿ ಅವರು ಮಾತನಾಡಿ, ನಾವು ಗ್ರಾ.ಪಂ. ಜಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಕೆಡವುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೆವು. ಆದರೆ ಈ ತನಕ ಯಾವುದೇ ಪ್ರಯೋಜನ ಆಗಿಲ್ಲ. ಈ ಜಾಗದಲ್ಲಿ ಪಂಚಾಯತ್‌ ವಾಣಿಜ್ಯ ಸಂಕೀರ್ಣ ನಿರ್ಮಾಣ ವಾಗಲಿರುವ ಕಾರಣ ಆ ಕಟ್ಟಡ ವನ್ನು ಅಲ್ಲಿಂದ ತೆರವುಗೊಳಿಸಬೇಕು. ಇಲ್ಲ ದಿದ್ದರೆ ನಮಗೆ ಸಮಸ್ಯೆ ಯಾಗುತ್ತದೆ. ಇದನ್ನು ಪಂ. ವತಿಯಿಂದ ಕೆಡವಬೇಕು ಎಂದು ಹೇಳಿದರು.

ಈ ವಿಷಯಕ್ಕೆ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಎನ್‌ ಎಸ್‌ಡಿ ವಿಠಲದಾಸ್‌ ನವೀನ್‌ ರೈ ಮಾತಿಗೆ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಮಾತಿಗಿಳಿದ ನವೀನ್‌ ರೈ ಅವರು ಪಂಚಾಯತ್‌ನವರೆಲ್ಲ ನಿಂತು ಕಟ್ಟಡವನ್ನು ಕೆಡವಬೇಕಾದ ಕೆಲಸ ಆಗಬೇಕು. ಸಭೆಯಲ್ಲಿ ನಿರ್ಣಯ ಮಾಡಿ ಎಂದು ಒತ್ತಾಯಿಸಿದರು.

ಹಣ ಪಾವತಿ ಮಾಡುತ್ತಿಲ್ಲ
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದವರು ತ್ಯಾಜ್ಯ ವಿಲೇವಾರಿಗೆ ಹಣ ಪಾವತಿ ಮಾಡುತ್ತಿಲ್ಲ. ಪಂಚಾಯತ್‌ ಗೆ ಸಾಕಷ್ಟು ಖರ್ಚು ಬರುತ್ತದೆ ಎಂದು ಸುನಂದಾ ರೈ ತಿಳಿಸಿದರು. ಪಂಚಾಯತ್‌ಗೆ ಬರುವ ಸಮರ್ಪಕವಲ್ಲದ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ನವೀನ್‌ ರೈ ಸಲಹೆ ನೀಡಿದರು. ಈ ಸಂದರ್ಭ ಅಧ್ಯಕ್ಷರು ಮಾತನಾಡಿ, ಮುಂದಿನ ದಿನದಲ್ಲಿ ಅರ್ಜಿ ತೆಗೆದುಕೊಳ್ಳುವ ಸಂದರ್ಭ ಸಮರ್ಪಕವಾಗಿ ನೋಡಿ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದರು.

ನೆಟ್ಟಾರು ಶಾಲೆಯ ಕ್ರೀಡಾಂಗಣಕ್ಕೆ ಪಂ. ವತಿಯಿಂದ ಅನುದಾನ ಇಟ್ಟಿಲ್ಲ ಎಂದು ವಿಟ್ಠಲದಾಸ್‌ ಆರೋಪ ಮಾಡಿದರು. ಈ ವೇಳೆ ಸ್ಪಷ್ಟನೆ ನೀಡಿದ ಶಕುಂತಲಾ ನಾಗರಾಜ್‌ ಅವರು ಇಂಟರ್‌ ಲಾಕ್‌ ಕಾಮಗಾರಿಗೆ ಅನುದಾನ ಇಡಲಾಗಿದೆ. ಮುಂದಿನ ಕ್ರಿಯಾಯೋಜನೆಯಲ್ಲಿ ಹೆಚ್ಚಿನ ಅನುದಾನ ಮೀಸಲಿಡಲಾಗುವುದು ಎಂದು ಹೇಳಿದರು. ಸುನಂದಾ ರೈ ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next