Advertisement
ಪ್ರಕೃತಿಯ ರಮ್ಯ ಸೌಂದರ್ಯದ ನೆಲೆಬೀಡಾದ ಬೆಳ್ಕಲ್ ತೀರ್ಥ ಪ್ರದೇಶವು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿದೆ. ಜಲಪಾತದ ಅಡಿಯಲ್ಲಿ ಮುಂದೆ ಸಾಗುವ ಮಂದಿಗೆ ಈ ಭಾಗದ ಧ್ಯಾನ ಕೇಂದ್ರವಾಗಿ ಪರಿಗಣಿಸಲ್ಪಟ್ಟಿದೆ.
Related Articles
Advertisement
ಮೂಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಗೆ ಬರುವ ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸಲು ಅರಣ್ಯ ಕಾನೂನು ಅಡ್ಡಿ ಬರುವುದರಿಂದ ಕಾಲುದಾರಿಯನ್ನು ವಿಸ್ತರಿ ಸುವ ಬಗ್ಗೆ ಪ್ರವಾಸಿಗರು ಸಲ್ಲಿಸಿದ ಮನವಿ ತಿರಸ್ಕಾರಗೊಂಡಿದೆ.ದಟ್ಟಾರಣ್ಯದ ನಡುವಿನ ಹಾದಿಯಲ್ಲಿಸಾಗಬೇಕಾದ ಬೆಳ್ಕಲ್ ತೀರ್ಥ ಪ್ರವಾಸಿಗರನ್ನು ದಿನೇ ದಿನೇ ಸೆಳೆಯುತ್ತಿದೆ.
25 ರೂ. ಶುಲ್ಕ ವಸೂಲಿ : ಪ್ರತಿ ದಿನ ಆಗಮಿಸುವ ಪ್ರತಿಯೋರ್ವ ಪ್ರವಾಸಿಗ ತಲಾ 25 ರೂ. ಶುಲ್ಕವನ್ನುಅರಣ್ಯ ಇಲಾಖೆಗೆ ನೀಡಿ ಒಳ ಪ್ರವೇಶಿಸಬೇಕಾಗಿದೆ. ಅಲ್ಲದೆ ನಿಗದಿತ ಸಮಯದಲ್ಲಿ ಹಿಂದಿರುಗಬೇಕಾಗಿದೆ. ಮಧ್ಯ ಇನ್ನಿತರ ಅಗತ್ಯ ವಸ್ತುಗಳನ್ನು ಒಯ್ಯಲು ಅವಕಾಶವಿಲ್ಲ. ಪ್ರತಿದಿನ 150 ರಿಂದ 300 ಮಂದಿ ಬೆಳ್ಕಲ್ ತೀರ್ಥ ವೀಕ್ಷಿಸಲು ಆಗಮಿಸುತ್ತಿದ್ದಾರೆ.
ಮೂಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಗೆ ಒಳಪಡುವ ಬೆಳ್ಕಲ್ ತೀರ್ಥ ಇರುವ ಸ್ಥಿತಿಯಲ್ಲೇ ಅಗತ್ಯ ವ್ಯವಸ್ಥೆಯನ್ನು ಹೊಂದಾಣಿಕೆ ಮಾಡಬಹುದು. ಸ್ಥಳೀಯವಾಗಿ ಸಮಿತಿ ರಚಿಸಿ ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿಗರಿಂದ ಪಡೆಯುತ್ತಿರುವ ಶುಲ್ಕವನ್ನು ನೇರವಾಗಿ ಸರಕಾರಕ್ಕೆ ಠೇವಣಿ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿದರೆ ಶುಲ್ಕವನ್ನು ಬಳಸಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಪಾಮುಖ್ಯ ನೀಡಬಹುದು . -ಸಿದ್ದೇಶ್ , ಅರಣ್ಯಾಧಿಕಾರಿ, ಕೊಲ್ಲೂರು
ಬೆಳ್ಕಲ್ ತೀರ್ಥದ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಕಲ್ಪಿಸುವಲ್ಲಿ ಕಾನೂನಿನಲ್ಲಿ ಅವಕಾಶವಿದ್ದಲ್ಲಿ ಸಂಪೂರ್ಣ ಪ್ರಯತ್ನ ಮಾಡುತ್ತೇನೆ. –ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕರು, ಬೈಂದೂರು
ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಿರುವ ಪ್ರವಾಸೋದ್ಯಮ ಕೇಂದ್ರವಾಗಿರುವ ಬೆಳ್ಕಲ್ ತೀರ್ಥದ ಪ್ರಯಾಸದ ದಾರಿಯ ಅಭಿವೃದ್ಧಿಯಾಗಬೇಕು.-ವಾಸುದೇವ ಮುದೂರು, ಸಮಾಜ ಸೇವಕ