ನಂಬಿಕೆ ಎಂಬುದೊಂದೇ ಬದುಕಿನ ತಳಹದಿ. ಅದನ್ನು ಆಧರಿಸಿಯೇ ಸುಖ, ಸಂಪತ್ತು, ನೆಮ್ಮದಿ ಇತ್ಯಾದಿಗಳೆಲ್ಲ ಇರು ವಂಥದ್ದು. ಯಾವುದೇ ಸಂದರ್ಭದಲ್ಲೂ ನಮ್ಮ ಮೇಲಿನ ನಂಬಿಕೆ ಮತ್ತು ಸಮಾ ಜದ ಮೇಲಿನ ನಂಬಿಕೆ- ಎರಡರಲ್ಲೂ ಕೊಂಚವೂ ಬಿರುಕು ಬರದಂತೆ ನೋಡಿ ಕೊಳ್ಳಬೇಕು. ನಂಬಿಕೆ ಎಂಬುದು ಸಂಪೂ ರ್ಣವಾಗಿ ವೈಯಕ್ತಿಕವಾದುದು. ಅದು ಖಂಡಿತ ಸಾರ್ವತ್ರಿಕವೂ ಅಲ್ಲ, ಸಾರ್ವಜ ನಿಕವೂ ಅಲ್ಲ. ನಮಗೆ ಯಾವುದು ಹೆಚ್ಚು ಸುರಕ್ಷಾ ಭಾವ ಕೊಡುತ್ತದೋ, ಆತ್ಮವಿ ಶ್ವಾಸ ತುಂಬುತ್ತದೆ ಎನಿಸುತ್ತದೋ ಅದನ್ನು ನಂಬುವುದರಲ್ಲಿ ಯಾವುದೇ ಅಡ್ಡಿಯಿಲ್ಲ.
ಭವ್ಯವಾದ ಸಾಗರ ತೀರ. ಅದರ ಮೇಲೆ ಮೆಲ್ಲಗೆ ಸಾಗುತ್ತಿದ್ದ ಅಜ್ಜ ನೊಬ್ಬ ತನ್ನ ಬಗಲಿನ ಚೀಲದಿಂದ ಕೆಲವು ಬೀಜ ಗಳನ್ನು ತೆಗೆದು ಕೊಂಡು ಬಿತ್ತುತ್ತಾ ಸಾಗುತ್ತಿದ್ದ. ಅವ ನಿಗೆ ಈ ತೀರದಲ್ಲಿ ಒಂದಿಷ್ಟು ಗಿಡಗಳನ್ನು ಬೆಳೆಸಬೇಕೆಂಬ ಆಸೆ. ಹೀಗೆ ಸಾಗುತ್ತಿದ್ದವನಿಗೆ ಮೊದ ಲಿನವ ಎದುರಾದ, “ಏನಜ್ಜಾ, ಏನನ್ನು ಬಿತ್ತುತ್ತಿದ್ದೀರಿ?’ ಎಂದು ಕೇಳಿದ. “ಒಂದಿಷ್ಟು ಹಣ್ಣಿನ ಬೀಜಗಳು. ಸಮುದ್ರ ವಿಹಾರಕ್ಕೆ ಬಂದವರಿಗೆ ಅನುಕೂಲ ವಾದೀತು’ ಎಂದ ಅಜ್ಜ. ಇದನ್ನು ಕೇಳಿದ ಆ ವಿಹಾರಿಗ, “ಏನಜ್ಜ, ತಮಾಷೆ ಮಾಡು ತ್ತೀರಿ. ಈ ಉಪ್ಪು ನೀರಿನಲ್ಲಿ ಯಾವ ಬೀಜ ಮೊಳಕೆಯೊಡೆದೀತು? ನಿಮಗೆ ಭ್ರಮೆ’ ಎಂದು ಮುಂದೆ ಸಾಗಿದ.
ಅಜ್ಜ ತನ್ನ ಕೆಲಸ ನಿಲ್ಲಿಸಲಿಲ್ಲ. ಇನ್ನೂ ಸ್ವಲ್ಪ ದೂರ ಹೋದಾಗ ದಂಪತಿ ಎದು ರಾದರು. ಕುತೂಹಲದಿಂದ “ಅಜ್ಜ, ಏನು ಮಾಡುತ್ತಿದ್ದೀರಿ?’ ಎಂದು ಕೇಳಿ ದರು ದಂಪತಿ. ಅದಕ್ಕೆ ಅಜ್ಜ, “ಒಂದಿಷ್ಟು ಹೂವಿನ ಗಿಡಗಳ ಬೀಜ ಬಿತ್ತುತ್ತಿದ್ದೇನೆ. ಇಲ್ಲಿಗೆ ಬಂದವರಿಗೆ ಕೊಂಚ ಖುಷಿ ಕೊಡಲಿ’ ಎಂದ. ಅದಕ್ಕೆ ದಂಪತಿ, “ಏನಜ್ಜಾ, ಇಲ್ಲಿ ಓಡಾಡುವವರು ಕಾಲಿ ನಲ್ಲಿ ತುಳಿದು ಬೀಜವನ್ನು ಹಾಳು ಮಾಡುವುದಿಲ್ಲವೇ?’ ಎಂದು ಕೇಳಿ ದರು. ಅದಕ್ಕೆ ಅಜ್ಜ, “ತುಳಿಯುವುದಿಲ್ಲ ವೆಂದು ಅಂದುಕೊಂಡಿದ್ದೇನೆ’ ಎಂದ ಅಜ್ಜ. ದಂಪತಿ ನಗುತ್ತಾ ಮುಂದೆ ಸಾಗಿದರು.
ಅಜ್ಜ ಮತ್ತೆ ತನ್ನ ಬೀಜದ ಕೊಟ್ಟೆಯನ್ನು ಹಿಡಿದುಕೊಂಡು ಮತ್ತಷ್ಟು ಬೀಜಗಳನ್ನು ಬಿತ್ತುತ್ತಾ ಹೋದ. ಅಷ್ಟು ದೂರ ಹೋಗು ವಷ್ಟರಲ್ಲಿ ಒಂದು ಯುವಕರ ಗುಂಪು ಎದುರಾ ಯಿತು. ಅದರಲ್ಲಿ ಒಬ್ಬ, ಅಜ್ಜನ ಬೀಜದ ಕೊಟ್ಟೆಗೆ ಕೈ ಹಾಕಿ ಒಂದಿಷ್ಟು ತೆಗೆದು, ಇದು ಯಾವ ಬೀಜ ಎಂದು ಕೇಳಿದ. ಅದಕ್ಕೆ ಅಜ್ಜ, ಕುಂಬಳ ಕಾಯಿಯ ಬೀಜ ಎಂದು ಉತ್ತರಿಸಿದ. ಆಗ ಉಳಿದವರೆಲ್ಲರೂ . “ನೋಡಿರೋ, ಅಜ್ಜನಿಗೆ ಈ ಸಮುದ್ರದಲ್ಲಿ ಕುಂಬ ಳಕಾಯಿ ಬೆಳೆಯುವ ಹುಚ್ಚು’ ಎಂದು ಲೇವಡಿ ಮಾಡಿದರು. ಅದಕ್ಕೆ ಅಜ್ಜ, “ಹೌದ್ರಪ್ಪಾ, ಇಲ್ಲಿಗೆ ಬಂದವರಿಗೆ ಒಂದಿಷ್ಟು ಅನು ಕೂಲವಾಗಲಿ ಎಂದು ಈ ಕೆಲಸ ಮಾಡು ತ್ತಿದ್ದೇನೆ’ ಎಂದರು. ಅದಕ್ಕೆ ಮತ್ತೂಬ್ಬ, “ನಿಮಗೆ ಬುದ್ಧಿಯಿಲ್ಲ. ಒಂದು ಅಲೆ ಬಂದರೆ ನಿನ್ನ ಕುಂಬಳ ಕಾಯಿಯೂ ಇರದು, ನೀನೂ ಇರಲಾರೆ’ ಎಂದ. ಉಳಿದವರೆಲ್ಲರೂ ಗೇಲಿ ಮಾಡಿದರು.
ಅದಕ್ಕೆ ಅಜ್ಜ, “ನೋಡಿ, ಅಲೆ ಬಂದು ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದೆ ಎಂಬುದು ನಿಮ್ಮ ನಂಬಿಕೆ. ಇವೆಲ್ಲವೂ ಬೆಳೆದು ಒಂದಿಷ್ಟು ಮಂದಿಗೆ ಅನುಕೂಲ ಮಾಡಿ ಕೊಡುತ್ತದೆ ಎಂಬುದು ನನ್ನ ನಂಬಿಕೆ’ ಎಂದು ಉತ್ತರಿಸಿದ. ಖುಷಿ, ನೆಮ್ಮದಿ ಎನ್ನುವುದು ನಮ್ಮ ನಂಬಿಕೆ ಯಲ್ಲಿ ಇರುವಂಥದ್ದು. ಅದು ಇನ್ನೊಬ್ಬರ ನಂಬಿಕೆಗೆ ಸರಿ ಹೊಂದಬೇಕೆಂ ದೇನೂ ಇಲ್ಲ, ಹೊಂದಿಸಬೇಕೂ ಇಲ್ಲ. ಹೊಂದಿಸಲು ಹೋದಾಗಲೆಲ್ಲ ನಮ್ಮ ಬದುಕಿನ ಆಯ ತಪ್ಪುತ್ತದೆ, ಗೊಂದಲದ ಗೂಡಾಗುತ್ತದೆ. ನಂಬಿಕೆಯೆಂಬುದು ತೂಗು ಸೇತುವೆ. ಗಾಳಿ ಬಂದ ಕಡೆಗೆ ಕೊಂಚ ವಾಲಬಹುದು. ಆದರೆ ನಾವು ಮಾತ್ರ ವಾಲಬಾರದು.
(ಸಾರ ಸಂಗ್ರಹ)