Advertisement
ಕೆಮ್ಮಿಂಜೆ ಗ್ರಾಮದ ಪ್ರಗತಿ ಲೇ ಔಟ್ ನಿವಾಸಿ ಶ್ರೀನಿವಾಸ ಗೌಡ ಮೋಸ ಹೋದವರು. ಅವರ ದೂರವಾಣಿಗೆ ಮೇ 26ರಂದು ಸಂಜೆ ಆಕ್ಸಿಸ್ ಬ್ಯಾಂಕ್ ಎಂಬ ಹೆಸರಿನಲ್ಲಿ ಬಂದಿರುವ ಸಂದೇಶವನ್ನು ತೆರೆದಾಗ ಆಕ್ಸಿಸ್ ಬ್ಯಾಂಕ್ ಹೋಲುವ ಪೇಜ್ ತೆರೆದಿತ್ತು. ಅದರಲ್ಲಿ ನಿಮ್ಮ ಖಾತೆಗೆ 13,879 ರೂ. ಬೋನಸ್ ಬಂದಿರುವುದಾಗಿ ಸಂದೇಶವಿತ್ತಲ್ಲದೆ, ಈ ಬೋನಸ್ ಪಡೆಯಲು ವೆಬ್‌ಸೈಟ್‌ನಲ್ಲಿ ಕೇಳಿರುವಂತೆ ತನ್ನ ಬ್ಯಾಂಕ್ ಖಾತೆ ಸಂಖ್ಯೆ ಸಹಿತ ಎಲ್ಲ ಮಾಹಿತಿಯೊಂದಿಗೆ ಒಟಿಪಿ ಸಂಖ್ಯೆಯನ್ನೂ ನೀಡಿದರು. ಸ್ವಲ್ಪ ಸಮಯದ ಬಳಿಕ ಅವರ ಬ್ಯಾಂಕ್ ಖಾತೆಯಿಂದ 90,850 ರೂ. ಮತ್ತು 24,500 ರೂ. ಸೇರಿ ಒಟ್ಟು 1,15,358 ರೂ. ಕಡಿತಗೊಂಡ ಸಂದೇಶ ಬಂತು. ಅನುಮಾನಗೊಂಡು ತತ್‌ಕ್ಷಣ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಅವರ ಖಾತೆಯಿಂದ ಅಪರಿಚಿತ ಖಾತೆಗೆ ಹಣ ವರ್ಗಾವಣೆಗೊಂಡು ತಾನು ಮೋಸ ಹೋದ ವಿಚಾರ ತಿಳಿಯಿತು.
Advertisement
Bonus ಬಂದಿದೆ ಎಂಬ ಸಂದೇಶ ನಂಬಿ ಒಟಿಪಿ ನೀಡಿ ಲಕ್ಷಾಂತರ ರೂ. ಕಳೆದುಕೊಂಡರು
08:53 PM May 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.