Advertisement
ಬಸೂÅರು ಮೂರುಕೈಯಿಂದ ಸಂಗಮ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಮಳೆ ಬಂದಾಗ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿ ಕೇವಲ 3 ಕಿ.ಮೀ. ಪ್ರಯಾಣಕ್ಕೆ 9 ನಿಮಿಷ ತಗುಲುತ್ತದೆ. ಹೊಂಡ ಯಾವುದು, ದಾರಿ ಯಾವುದು, ರಸ್ತೆ ಎಲ್ಲಿದೆ, ರಸ್ತೆಯ ಅಂಚು ಎಲ್ಲಿದೆ ಎಂದು ತಿಳಿಯುವುದಿಲ್ಲ ಎನ್ನುತ್ತಾರೆ ವಾಹನ ಚಾಲಕರು. ಪರದಾಡಿಕೊಂಡು ವಾಹನ ಸವಾರಿ ನಡೆಸಬೇಕು. ಈ ಮಧ್ಯೆಯೇ ಕಷ್ಟಪಡುವ ದ್ವಿಚಕ್ರ ವಾಹನ ಸವಾರರು. ತ್ರಿ ಚಕ್ರ ವಾಹನ ಸವಾರರಿಗೂ ಸಂಕಟ ತಂದಿದ್ದು ಸಣ್ಣ ಚಕ್ರದ ವಾಹನಗಳು ರಸ್ತೆ ಹೊಂಡಕ್ಕೆ ಬಿದ್ದಾಗ ಪ್ರಯಾಣಿಕರು ಶಪಿಸುವಂತಾಗಿದೆ.
ಸರ್ವಿಸ್ ರಸ್ತೆಯಿಂದ ಮುಖ್ಯ ರಸ್ತೆಗೆ ಸೇರುವ ಎಲ್ಲ ಕಡೆಗಳಲ್ಲಿ ನೀರು ನಿಂತು ವಾಹನ ದಾಟುವುದು ಕಷ್ಟವಾಗಿದೆ. ರಸ್ತೆಯ ಅಂಚಿನುದ್ದಕ್ಕೂ ನೀರು ನಿಂತು ವಾಹನ ಹೋಗುವಾಗ ನೀರ ಚಿಮ್ಮುವಿಕೆ ಕಾರಂಜಿಯಂತೆ ಕಾಣುತ್ತದೆ. ನಡೆದಾಡಲೂ ಕಷ್ಟಪಡುವಂತಾಗಿದೆ.