ಸಿಂಧನೂರು: ನವದಂಪತಿಗಳು ಜೀವನದಲ್ಲಿ ಎದುರಾಗುವ ಕಷ್ಟ, ಸುಖಗಳನ್ನು ಸಮನಾಗಿ ಸ್ವೀಕರಿಸಬೇಕು. ಪರಸ್ಪರ ನಂಬಿಕೆ, ವಿಶ್ವಾಸ, ಪ್ರೀತಿಯಿಂದ ಬದುಕು ಸಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಸಲಹೆ ನೀಡಿದರು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಪೂಜಾರಿ ಕುಟುಂಬದವರು ತಮ್ಮ ಮಕ್ಕಳ ಮದುವೆ ಜೊತೆಗೆ 51 ಉಚಿತ ಸಾಮೂಹಿಕ ವಿವಾಹ ಮಾಡಿಕೊಟ್ಟಿದ್ದು ಪುಣ್ಯದ ಕೆಲಸವಾಗಿದೆ. ಇದು ಇತರರಿಗೆ ಮಾದರಿ ಎಂದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ ಸಾಮೂಹಿಕ ವಿವಾಹ ಮಾಡುವುದರಿಂದ ಜಾತಿ ಭೇದ ದೂರವಾಗುತ್ತದೆ. ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆ ಎತ್ತಿ ಹಿಡಿದಂತಾಗುತ್ತದೆ ಎಂದರು.
ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ ಮಾತನಾಡಿ, ಪೂಜಾರಿ ಕುಟುಂಬದವರಿಗೆ ಇತಿಹಾಸವಿದೆ. ಅಗ್ಗಿ ಹರಿಯುವ ಕಾರ್ಯಕ್ರಮ ಒಂದು ಶ್ರೇಷ್ಠತೆ ಹೊಂದಿದೆ. ಹೃದಯದಿಂದ ಬರುವ ಮಂತ್ರಗಳು ಅಗ್ಗಿಗೆ ಹೆಚ್ಚಿನ ಪ್ರಾಮಾಣಿಕತೆ ಇರುತ್ತದೆ. ಹಾಗಾಗಿ ಅಗ್ಗಿ ಕಾರ್ಯಕ್ರಮ ಪೂಜಾರಿ ವಂಶಸ್ಥರು ಮಾಡುತ್ತಾರೆ ಎಂದರು.
Advertisement
ನಗರದ ಕನಕದಾಸ ಕಾಲೇಜು ಮೈದಾನದಲ್ಲಿ ರವಿವಾರ ನಡೆದ ಪೂಜಾರಿ ಬಂಧುಗಳ ಮದುವೆ, ಶ್ರೀ ಗುರುಲಿಂಗೇಶ್ವರ ದೇವರ ಅಗ್ಗಿ ಹಾಯುವುದು ಹಾಗೂ 51 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಬದುಕು ಸಾಗಿಸುವುದರ ಜೊತೆಗೆ ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸಬೇಕು. ಭಾರತೀಯ ಸಂಸ್ಕೃತಿ ಪಾಲನೆಗೆ ಮಹತ್ವ ನೀಡಬೇಕು ಎಂದರು.
Related Articles
Advertisement
ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು, ನಂಜುಂಡಯ್ಯ ಗುರುವಿನ, ಚಿದಾನಂದಯ್ಯ ಗುರುವಿನ, ಮಾದಯ್ಯ ಗುರುವಿನ, ಹೊಸಗೇರಪ್ಪ ಪೂಜಾರಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಕರಿಯಪ್ಪ, ತಾಪಂ ಮಾಜಿ ಅಧ್ಯಕ್ಷ ರಮೇಶಪ್ಪ ದಿದ್ದಿಗಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಕುರುಬರ ಸಂಘದ ಅಧ್ಯಕ್ಷ ಭೀಮಣ್ಣ ಸಂಗಟಿ, ವರ್ತಕರ ಸಂಘದ ಕಾರ್ಯದರ್ಶಿ ಪೂಜಪ್ಪ ಪೂಜಾರಿ ಇದ್ದರು.
ಪರಿಸರದ ಬಗ್ಗೆ ಜಾಗೃತಿ ಮೂಡಿಸದೆ ಇರುವುದರಿಂದ ನೀರಿನ ಹಾಹಾಕರ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಇದಕ್ಕೆ ಈ ಭಾಗದ ಜನಪ್ರತಿನಿಗಳ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತದೆ. ಈ ವಿಷಯ ಯಾರು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದರೆ ಮುಂದೊಂದು ದಿನ ಅಪಾಯ ತಪ್ಪಿದ್ದಲ್ಲ.
••ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠ