ರಾಯಚೂರು ಮೂಲದ ಯಮನೂರ (22) ಬಂಧಿತ ಆರೋಪಿ. ಈತ ಬೀದಿ ನಾಟಕ ಕಲಾವಿದನಾಗಿದ್ದು, ನಾಟಕದ ಪೊಲೀಸ್ ಬಟ್ಟೆಯನ್ನು ಹೊಂದಿದ್ದು, ಆ ಮೂಲಕ ತಾನು ಪೊಲೀಸ್ ಅಧಿಕಾರಿ ಎಂದು ನಂಬಿಸಿದ್ದ.
Advertisement
ಯುವತಿಗೆ ಇನ್‌ಸ್ಟಾಗ್ರಾಂ ಮೂಲಕ ಯುಮನೂರನ ಪರಿಚಯವಾಗಿದ್ದು, ತಾನು ವಾಮಂಜೂರು ಪೊಲೀಸ್ ಸ್ಟೇಷನ್‌ನಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವುದಾಗಿ ಯುವತಿಗೆ ನಂಬಿಸಿದ್ದಾನೆ. ಬಳಿಕ ಆಕೆಯ ಮನೆಯ ವರಿಗೆ ಕೆಲಸ ಮಾಡಿ ಕೊಡುವುದಾಗಿ ಹೇಳಿ ದಾಖಲಾತಿಗಳನ್ನು ಪಡೆದು ಕೊಂಡಿದ್ದ.
ಬಳಿಕ ಮೂಲ್ಕಿಯ ಕಿನ್ನಿಗೋಳಿಯಲ್ಲಿ ವಸತಿಗೃಹಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರವೆಸಗಿದ್ದ. ಇದೇ ವೇಳೆ ಆತ ಆಕೆಯ ಫೋಟೋಗಳನ್ನು ತೆಗೆದಿದ್ದು, ಯುವತಿಯ ಮನೆಯ ವರಿಗೆ, ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ. ಫೋಟೋಗಳನ್ನು ಡಿಲೀಟ್ ಮಾಡ ಬೇಕಾದರೆ 1.5 ಲಕ್ಷ ರೂ. ನೀಡಬೇಕು ಎಂದು ಡಿಮಾಂಡ್ ಮಾಡಿದ್ದ.
Related Articles
ಯುವತಿ ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಆರೋಪಿ ಯಮನೂರನನ್ನು ಬಂಧಿಸಿ ನ್ಯಾಯಾ ಲಯಕ್ಕೆ ಹಾಜರುಪಡಿಸ ಲಾಗಿದೆ. ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ. ಪ್ರಕರಣದ ತನಿಖೆ ಆರಂಭಿಸಿದ್ದಾರೆ.
Advertisement
ಆಯುಕ್ತರ ಮನವಿಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಗ್ಧ ಹೆಣ್ಣು ಮಕ್ಕಳನ್ನು, ವಿದ್ಯಾರ್ಥಿನಿಯರನ್ನು ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡಿ ಅತ್ಯಾಚಾರವೆಸಗಿ ಮೋಸ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಇಂತಹ ಮೋಸದ ಜಾಲಗಳಿಗೆ ಹೆಣ್ಣು ಮಕ್ಕಳು ಬೀಳದಂತೆ ಪೋಷಕರು, ಜನಸಾಮಾನ್ಯರು ಮಕ್ಕಳ ಬಗ್ಗೆ ನಿಗಾ ವಹಿಸುವ ಆವಶ್ಯಕತೆ ಇದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಮನವಿ ಮಾಡಿದ್ದಾರೆ.