Advertisement

ಫಿಫಾ ರ್‍ಯಾಂಕಿಂಗ್‌: ಫ್ರಾನ್ಸ್‌, ಬೆಲ್ಜಿಯಂ ಜಂಟಿ ನಂ.1

06:00 AM Sep 22, 2018 | |

ಲುಸಾನ್ನೆ: ಫಿಫಾ ರ್‍ಯಾಂಕಿಂಗ್‌ನ 25 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ 2 ತಂಡಗಳು ವಿಶ್ವದ ನಂಬರ್‌ ವನ್‌ ತಂಡಗಳಾಗಿ ಮೂಡಿಬಂದಿವೆ. ಇವುಗಳೆಂದರೆ ವಿಶ್ವ ಚಾಂಪಿಯನ್‌ ಫ್ರಾನ್ಸ್‌ ಮತ್ತು ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ ಕೈಯಲ್ಲಿ ಸೋತ ಬೆಲ್ಜಿಯಂ. ಎರಡೂ ತಂಡಗಳು ತಲಾ 1,729 ಅಂಕಗಳನ್ನು ಹೊಂದಿವೆ. 

Advertisement

ಉದ್ಘಾಟನಾ ನ್ಯಾಶನಲ್‌ ಲೀಗ್‌ ಪಂದ್ಯಾವಳಿಯಲ್ಲಿ 2 ಗೆಲುವು ಸಾಧಿಸಿದ್ದು ಬೆಲ್ಜಿಯಂ ತಂಡದ ನೆಗೆತಕ್ಕೆ ಕಾರಣವಾಯಿತು. ಇದರಲ್ಲಿ ಒಂದು ಗೆಲುವು ಐಸ್‌ಲ್ಯಾಂಡ್‌ ವಿರುದ್ಧ ಬಂದಿತ್ತು. ಟಾಪ್‌-10 ರ್‍ಯಾಂಕಿಂಗ್‌ ಯಾದಿ ಯಲ್ಲಿ ಕಂಡುಬಂದ ಇನ್ನೊಂದು ಪ್ರಮುಖ ಬದಲಾವಣೆಯೆಂದರೆ, ಡೆನ್ಮಾರ್ಕ್‌ ಒಂದು ಸ್ಥಾನ ಕುಸಿದು 10ಕ್ಕೆ ಬಂದದ್ದು. ಟಾಪ್‌-10ರ ಆಚೆ ಅನೇಕ ತಂಡಗಳ ರ್‍ಯಾಂಕಿಂಗ್‌ನಲ್ಲಿ ಪಲ್ಲಟ ವಾಗಿದೆ. ಉಕ್ರೇನ್‌ 6 ಸ್ಥಾನ ಮೇಲೇರಿ 29ಕ್ಕೆ, ಜರ್ಮನಿ 3 ಸ್ಥಾನಗಳ ಪ್ರಗತಿ ಸಾಧಿಸಿ 12ಕ್ಕೆ ಬಂದಿದೆ. ಜೆಕ್‌ ಗಣರಾಜ್ಯ 3 ಸ್ಥಾನ ಕುಸಿದಿದ್ದು, 47ಕ್ಕೆ ಇಳಿದಿದೆ. ಸ್ಲೊವಾಕಿಯಾ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ (26).

ಟಾಪ್‌-10 ತಂಡಗಳು

Advertisement

Udayavani is now on Telegram. Click here to join our channel and stay updated with the latest news.

Next