Advertisement

Belgavi; ಶೆಟ್ಟರ್ ಅವರಿಗೆ ಆಶಿರ್ವಾದ ಮಾಡಿದ ವಿವಿಧ ಮಠಾಧೀಶರು

05:55 PM May 04, 2024 | Team Udayavani |

ಬೆಳಗಾವಿ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ವಿವಿಧ ಮಠಾಧೀಶರು ಶನಿವಾರ ಆಶಿರ್ವಾದ ಮಾಡಿದರು.

Advertisement

ಸಂಸದೆ ಮಂಗಲಾ ಅಂಗಡಿ ಅವರ ನಿವಾಸಕ್ಕೆ ಆಗಮಿಸಿದ ವಿವಿಧ ಮಠಾಧೀಶರು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟ‌ರ್ ಅವರಿಗೆ ಆಶೀರ್ವಾದ ಮಾಡಿದರು. ಈ ಸಂದರ್ಭ ಮಾತನಾಡಿದ ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ, ‘ಜಗದೀಶ್ ಶೆಟ್ಟರ್ ಅವರ ತಂದೆ ಮೂರು ಸಾವಿರಮಠದ ಭಕ್ತರು. ಚುನಾವಣೆಗೆ ಸ್ಪರ್ಧೆ ಮಾಡಿದ ನಂತರ ಶೆಟ್ಟರ್ ಅವರು ಮಠಕ್ಕೆ ಬಂದಿರಲ್ಲಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಲು ಬಂದಿದ್ದೇವೆ.ಶೆಟ್ಟ‌ರ್ ಅವರಿಗೆ ಈ ಚುನಾವಣೆಯಲ್ಲಿ ಒಳ್ಳೆಯದಾಗುತ್ತದೆ’ ಎಂದರು.

ಬೈಲಹೊಂಗಲದ ಮೂರುಸಾವಿರ ಶಾಖಾ ಮಠದ ಸ್ವಾಮೀಜಿ, ಕೋರ್ತಿ ಕೋಲಾರದ ಗಾಣಿಗ ಸಮಾಜದ ಸ್ವಾಮೀಜಿ, ಅರಳಿಕಟ್ಟಿ ವೀರಕ್ತಮಠದ ಸ್ವಾಮೀಜಿ, ಘಟಪ್ರಭಾ ಹೊಸಮಠದ ಶ್ರೀಗಳು, ಬೀದರ್ ವೀರಕ್ತಮಠದ ಸ್ವಾಮೀಜಿ, ತಾರಿಹಾಳ ಅಡಿವೇಶ ಮಠದ ಸ್ವಾಮೀಜಿ, ಗೌಡಗೇರಿ ವಿರಕ್ತ ಮಠದ ಶ್ರೀಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next