Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ವರಿಷ್ಠರ ಬಳಿ ಚರ್ಚೆಯೇ ಆಗಿಲ್ಲ, ಬಹಳಷ್ಟು ರಾಜ್ಯಗಳಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಆಗಬೇಕಿರುವುದರಿಂದ ಅದು ನಡೆಯೋದು ಮಾತ್ರ ನಿಶ್ಚಿತ, ತನಗೆ ಜವಾಬ್ದಾರಿ ವಹಿಸುವ ನಿರ್ಧಾರವನ್ನು ಎಐಸಿಸಿ ಮಾಡಿದಾಗ ನೋಡೋಣ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮಾಡುವಾಗ ಮತ ಸೆಳೆಯುವರ, ಜನರ ಆಕರ್ಷಣೆ ಮಾಡುವವರ ಅಧ್ಯಕ್ಷರಾಗಿ ಮಾಡಿದರೆ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ಉತ್ತರಿಸಿದರು.
ಶಾಸಕ ಆಸೀಫ್ (ರಾಜು) ಸೇಠ್ ಸಚಿವ ಸ್ಥಾನ ನೀಡಬೇಕೆಂದು ಕೇಳಿದ್ದಾರೆ, ಅವರು ಸಚಿವ ಸ್ಥಾನ ಕೇಳಿರುವುದು ನಿಜ. ಆದರೆ ಬೆಳಗಾವಿ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡುವ ಕುರಿತು ನನಗೆ ಗೊತ್ತಿಲ್ಲ. ಅಲ್ಪಸಂಖ್ಯಾತ ಸಮುದಾಯದರು ನಮ್ಮ ಭಾಗದಲ್ಲಿ ಯಾರು ಸಚಿವರಾಗಿಲ್ಲ, ಹೀಗಾಗಿ ಆದರೆ ಸಚಿವರ ಕೈ ಬಿಡುವುದಾಗಲಿ ಅಥವಾ ನೇಮಕ ಮಾಡಿಕೊಳ್ಳುವ ಅಧಿಕಾರ, ವ್ಯಾಪ್ತಿ ನನಗೆ ಬರುವುದಿಲ್ಲ. ಅಧಿವೇಶನ ನಂತರ ಏನಾಗುತ್ತದೆ ಎಂದು ಕಾದು ನೊಡೋಣ. ಅಧಿವೇಶನ ಮುಗಿದ ನಂತರ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.