Advertisement
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ವಿಮಾನದಲ್ಲಿ ಆಗಮಿಸಿದ್ದು, ಅವರ ಬ್ಯಾಗ್ ಕೂಡ ವಿಮಾನದಲ್ಲಿ ಇರಲಿಲ್ಲ ಎನ್ನಲಾಗಿದೆ.
ಭಾನುವಾರ ಸಂಜೆ 5.55ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ಮಲೇಷಿಯನ್ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರು. ವಿಮಾನ ರಾತ್ರಿ 7.30 ಗಂಟೆಗೆ ಬೆಳಗಾವಿಗೆ ಬಂದಿಳಿಯುತ್ತಿದ್ದಂತೆ ಪ್ರಯಾಣಿಕರಿಗೆ ಬಿಗ್ ಶಾಕ್ ಕಾದಿತ್ತು.ನಂತರ ಪರಿಶೀಲನೆ ನಡೆಸಿದಾಗ ಸುಮಾರು 22 ಕ್ಕೂ ಹೆಚ್ಚು ಪ್ರಯಾಣಿಕರ ಬ್ಯಾಗ್ ಗಳು ಬಂದಿರಲಿಲ್ಲ. ಈ ಕುರಿತು ಇಂಡಿಗೋ ವಿಮಾನ ಸಿಬ್ಬಂದಿಯನ್ನು ಪ್ರಯಾಣಿಕರು ವಿಚಾರಿಸಿದಾಗ ಮಲೇಷಿಯನ್ ವಿದ್ಯಾರ್ಥಿಗಳ ಬ್ಯಾಗ್ ಗಳು ಬಹಳ ದೊಡ್ಡದಿದ್ದವು. ಹಾಗಾಗಿ ಬೇರೆ ಪ್ರಯಾಣಿಕರ ಬ್ಯಾಗ್ ಗಳನ್ನು ತರಲು ಸಾಧ್ಯವಾಗಿಲ್ಲ. ನಿಮ್ಮ ಬ್ಯಾಗ್ ಗಳನ್ನು ನಾಳೆ ತರಿಸಿಕೊಡುತ್ತೇವೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ವಿಮಾನ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಪ್ರತಿಭಟನೆ ನಡೆಸಿದ್ದಾರೆ.
Related Articles
Advertisement
ತೂಕ ಸೇರಿದಂತೆ ಎಲ್ಲ ಪರಿಶೀಲನೆಯ ನಂತರವೇ ಲಗೇಜ್ ಪಡೆದು, ವಿಮಾನಕ್ಕೆ ಹಾಕಲಾಗುತ್ತದೆ. ಆದರೂ ಈ ರೀತಿಯ ಅಚಾತುರ್ಯ ಹೇಗಾಯಿತು. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಪ್ರಯಾಣಿಕರು ವಿಮಾನ ಸಿಬ್ಬಂದಿಗಳ ಬೇಜವಾಬ್ದಾರಿಗೆ ಹಿಡಿಶಾಪ ಹಾಕಿದರು.